Saturday, 14th December 2024

ಉತ್ತರಕಾಶಿ ಸಿಲ್ಕ್ಯಾರ ಸುರಂಗ ಕಾರ್ಯಾಚರಣೆ: ಆನಂದ್‌ ಮಹೀಂದ್ರಾ ಸಂತಸ

ಉತ್ತರಾಖಂಡ: 41 ಕಾರ್ಮಿಕರು..17 ದಿನಗಳ ಸಾವು-ಬದುಕಿನ ಮಧ್ಯೆ ನಡೆಸಿದ ಹೋರಾಟ ಕೊನೆಗೂ ಸುಖಾಂತ್ಯಗೊಂಡಿದ್ದು, ಎಲ್ಲ ಕಾರ್ಮಿಕರು ಸುರಕ್ಷಿತವಾಗಿ ಹೊರಬಂದಿದ್ದಾರೆ. ಸುರಂಗ ಕಾರ್ಯಾಚರಣೆಯ ಯಶಸ್ವಿನ ರೋಚಕ ಕ್ಷಣಗಳ ಬಗ್ಗೆ ಆನಂದ್‌ ಮಹೀಂದ್ರಾ ಸಂತಸ ವ್ಯಕ್ತಪಡಿಸಿದ್ದು, ಟ್ವೀಟ್‌ ಮಾಡಿದ್ದಾರೆ.

ಉತ್ತರಾಖಂಡದ ಉತ್ತರಕಾಶಿ ಸುರಂಗ ಕಾರ್ಯಾಚರಣೆ ಹಲವು ಅಡೆತಡೆಗಳನ್ನು ಮೀರಿ ಎಲ್ಲಾ ಸಂತ್ರಸ್ತರನ್ನು ಹೊರ ಕರೆತರಲಾಗಿದೆ. ʻಯಾವುದೇ ಸುರಂಗದಿಂದ ಹೊರಬರುವುದು ಕಷ್ಟವಲ್ಲ, ಎಂಬುದು ಎಲ್ಲರಿಗೂ ತಿಳಿಯುವಂತೆ ಮಾಡಿದ್ದಾರೆ. ಇವರೆಲ್ಲರೂ ಪ್ರತಿಯೊಬ್ಬ ಭಾರತೀಯ ಪ್ರಜೆಯ ಆತ್ಮವಿಶ್ವಾಸವನ್ನು ಹೆಚ್ಚು ಮಾಡಿದರು ಎಂಬುದನ್ನು ಎಲ್ಲರಿಗೂ ನೆನಪಿಸಿದರು.

41 ಅಮೂಲ್ಯ ಜೀವಗಳನ್ನು ಉಳಿಸಲು ಕಳೆದ 17 ದಿನಗಳಿಂದ ಅವಿರತವಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು. ಯಾವುದೇ ಕ್ರೀಡಾ ಗೆಲುವಿಗಿಂತ ಹೆಚ್ಚಾಗಿ, ನೀವು ದೇಶದ ಉತ್ಸಾಹವನ್ನು ಹೆಚ್ಚಿಸಿದ್ದೀರಿ ಮತ್ತು ನಮ್ಮ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದ್ದೀರಿ ಎಂದು ಹೊಗಳಿದರು. ನಾವು ಒಗ್ಗಟ್ಟಿನಿಂದ ಇದ್ದರೆ, ಯಾವುದೇ ಸುರಂಗದಿಂದ ಹೊರಬರಲು ಕಷ್ಟವಾಗುವುದಿಲ್ಲ, ಯಾವ ಕಾರ್ಯವೂ ಅಸಾಧ್ಯವಲ್ಲʼ ಎಂಬ ಆತ್ಮವಿಶ್ವಾಸವನ್ನು ತುಂಬಿದರು.