Friday, 13th December 2024

ಹಿಮ ದುರಂತ: ಮೃತರ ಸಂಖ್ಯೆ 67ಕ್ಕೆ ಏರಿಕೆ

ಚಮೋಲಿ: ಉತ್ತರಾಖಂಡದ ಹಿಮ ದುರಂತದಲ್ಲಿ ಬಲಿಯಾದವರ ಸಂಖ್ಯೆ 67ಕ್ಕೆ ಏರಿಕೆಯಾಗಿದೆ.

ಫೆ. 7ರಂದು ಉತ್ತರಾಖಂಡದ ಚಮೋಲಿಯಲ್ಲಿ ಹಿಮ ಸ್ಫೋಟಗೊಂಡ ಪರಿಣಾಮ ಪ್ರವಾಹ ಉಂಟಾಗಿತ್ತು. ಕಳೆದ 15 ದಿನಗಳಿಂದ ತಪೋವನ ಸುರಂಗ, ರೇನಿ ಗ್ರಾಮ ಸೇರಿ ಚಮೋಲಿಯಲ್ಲಿ ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸುತ್ತಲೇ ಇದ್ದು, ಭಾನುವಾರ ಮತ್ತೆ ಐವರ ಮೃತದೇಹ ಪತ್ತೆಯಾಗಿವೆ.

ಹಿಮ ಪ್ರವಾಹದ ಸಮಯದಲ್ಲಿ ರಿಷಿಗಂಗಾ ನದಿಯ ಮಾರ್ಗ ಮುಚ್ಚಲ್ಪಟ್ಟಿದ್ದು, ಬೃಹತ್ ಮಟ್ಟದ ಕಲ್ಲು, ಮಣ್ಣು ರಿಷಿಗಂಗಾ ನದಿಗೆ ತಡೆಯೊಡ್ಡಿವೆ. ಈ ಸರೋವರದ ಬಳಿ ಕ್ವಿಕ್​ ಡಿಪ್ಲೋಯಬಲ್​​ ಆಯಂಟೆನಾ (ಕ್ಯೂಡಿಎ)ವನ್ನ ಎಸ್​ಡಿಆರ್​ಎಫ್​ ಅಳವಡಿ ಸಿದೆ.