Wednesday, 11th December 2024

ಚೆನ್ನೈ-ಮೈಸೂರು ನಡುವೆ ಪ್ರಾಯೋಗಿಕ ಓಡಾಟ ಆರಂಭ

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು

ಚೆನ್ನೈ: ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ಮೋದಿ ಅವರು ನ.11ರಂದು ಚಾಲನೆ ನೀಡಲಿದ್ದಾರೆ.

ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಚೆನ್ನೈ-ಮೈಸೂರು ನಡುವೆ ಪ್ರಾಯೋಗಿಕ ಓಡಾಟ ಆರಂಭಿಸಿದೆ.

ದಕ್ಷಿಣ ಭಾರತದ ಮೊದಲ ಮತ್ತು ದೇಶದ ಐದನೇ ವಂದೇ ಭಾರತ್ ರೈಲು ಇದಾಗಿದ್ದು, ಪ್ರಯಾಣಿಕರ ಸೇವೆಯನ್ನು ಮೋದಿ ಅವರು ಚಾಲನೆ ನೀಡಿದ ಬಳಿಕ ಆರಂಭಿಸಲಿದೆ.

ಚೆನ್ನೈನ ಎಂಜಿ ರಾಮಚಂದ್ರನ್ ಕೇಂದ್ರ ರೈಲ್ವೆ ನಿಲ್ದಾಣದಿಂದ ಬೆಳಗ್ಗೆ ರೈಲು ನಿರ್ಗಮಿಸಿ ದ್ದು, ಮಧ್ಯಾಹ್ನ 12.30ರ ಸುಮಾರಿಗೆ ಮೈಸೂರು ತಲುಪಲಿದೆ. ಹೈಸ್ಪೀಡ್ ರೈಲು ಚೆನ್ನೈ ಮೈಸೂರು ಮಧ್ಯೆ 6ಗಂಟೆ 40 ನಿಮಿಷದಲ್ಲಿ 504 ಕಿಮೀ ಸಂಚರಿಸಲಿದೆ. ಮಧ್ಯದಲ್ಲಿ ಬೆಂಗಗಳೂರಿನ ಕಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಮಾತ್ರ ಒಂದು ಸ್ಟಾಪ್ ಇರಲಿದೆ.

ಪ್ರಧಾನಿ ಮೋದಿ ಅವರು ನ.11 ರಂದು ಬೆಂಗಳೂರು ಭೇಟಿ ನೀಡುತ್ತಿದ್ದು ಇದೇ ಸಂದರ್ಭದಲ್ಲಿ ದಕ್ಷಿಣ ಭಾರತದ ಮೊದಲ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲಿಗೆ ಚಾಲನೆ ನೀಡಲಿದ್ದಾರೆ. ಈ ವೇಳೆ 5,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಅನ್ನು ಉದ್ಘಾಟಿಸಲಿದ್ದಾರೆ.