Friday, 13th December 2024

ಮೈಸೂರು-ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ತೂರಾಟ

ಚೆನ್ನೈ: ಚೆನ್ನೈ ಸೆಂಟ್ರಲ್(ChennaiCentral) ರೈಲು ನಿಲ್ದಾಣದ ಪಕ್ಕದಲ್ಲಿರುವ ಬೇಸಿನ್ ಬ್ರಿಡ್ಜ್ ನಿಲ್ದಾಣದ ಬಳಿ ಮೈಸೂರು-ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ತೂರಾಟ ನಡೆಸಿದ್ದ ರಿಂದ ರೈಲಿನ ಎರಡು ಗಾಜುಗಳು ಪುಡಿ ಪುಡಿಯಾಗಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ (vandeBharathexpress) ರೈಲಿನ ಮೇಲೆ ಕಲ್ಲು ತೂರಾಟ ಮಾಡುವ ಘಟನೆ ಗಳು ಹೆಚ್ಚಾಗಿದೆ. ನಮ್ಮ ಆಸ್ತಿಗೆ ನಾವೇ ಹಾನಿ ಮಾಡುವುದು ಸರಿ ಯಲ್ಲ. ಆ ಮನಸ್ಥಿತಿಯ ಜನರನ್ನು ಮೊದಲು ಮಟ್ಟ ಹಾಕಬೇಕು ಎಂದು ಪ್ರಯಾಣಿಕ ರೊಬ್ಬರು ಹೇಳಿರುವ ವೀಡಿಯೊ ಎಲ್ಲ ಕಡೆ ಸದ್ದು ಮಾಡಿತ್ತು.

2023 ಫೆಬ್ರವರಿಯಲ್ಲಿ ಬೆಂಗಳೂರಿನ ಕಂಟೋನ್ಮೆಂಟ್ ಸ್ಟೇಷನ್ (Contonment Station)ಬಳಿ ವಂದೇ ಭಾರತ್ ರೈಲಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರು.

ಕರ್ನಾಟಕದಲ್ಲಿ ನಡೆದ ಮೊದಲ ಕಲ್ಲು ತೂರಾಟ(stonepelting). ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್​​ನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ (PrimeMinisterNarendraModi)ಅವರು ಬೆಂಗಳೂರಿನಲ್ಲಿ ಹಸಿರು ನಿಶಾನೆ ತೋರಿಸಿದರು. ಇದು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲು ಎಂಬ ಪ್ರಶಂಸೆಯನ್ನು ಪಡೆದಿತ್ತು.