Friday, 13th December 2024

ಅಹ್ಮದ್ ಪಟೇಲ್​ ವಿಧಿವಶ: ಗಣ್ಯರ ಸಂತಾಪ

ನವದೆಹಲಿ: ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ ಅಹ್ಮದ್ ಪಟೇಲ್​ ಅವರು ಬುಧವಾರ ಬಹು ಅಂಗಾಂಗ ವೈಫಲ್ಯದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ವಿಧಿವಶರಾದರು.

ಅಹ್ಮದ್ ಪಟೇಲ್ ಅವರು ನೆಹರು-ಗಾಂಧಿ ಕುಟುಂಬದ ಅತ್ಯಾಪ್ತರೆಂದು ಗುರುತಿಸಿಕೊಂಡವರು. ರಾಜ್ಯಸಭೆಯಲ್ಲಿ ಗುಜರಾತನ್ನು ಪ್ರತಿನಿಧಿಸುತ್ತಿದ್ದರು.

ಗಣ್ಯರ ಸಂತಾಪ: ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಮತ್ತಿತರರು ಅಹ್ಮದ್ ಪಟೇಲ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.