Saturday, 23rd November 2024

Viral News: ಡೇಟಿಂಗ್‍ ಮಾಡಿ ಸಕ್ಸಸ್‌ ಆದ ಉದ್ಯೋಗಿಗಳಿಗೆ ಭರ್ಜರಿ ಗಿಫ್ಟ್‌! ಈ ಕಂಪನಿ ಆಫರ್‌ ಕೇಳಿದ್ರೆ ಅಚ್ಚರಿ ಆಗೋದು ಗ್ಯಾರಂಟಿ

Viral News

ಚೀನಾ:  ಸಾಮಾನ್ಯವಾಗಿ ಚೆನ್ನಾಗಿ ಕೆಲಸ ಮಾಡಿದ ಉದ್ಯೋಗಿಗಳಿಗೆ ಕಂಪನಿ ಹೆಚ್ಚಿಗೆ ಬೋನಸ್, ಕಾರು, ಮನೆ, ಪ್ರಮೋಶನ್ ಮುಂತಾದ ಉಡುಗೊರೆಗಳನ್ನು ನೀಡುತ್ತದೆ. ಆದರೆ ಇಲ್ಲೊಂದು ಚೀನಿ ಕಂಪನಿ ತನ್ನ ಉದ್ಯೋಗಿ ಹೊರಗಿನವರ ಜೊತೆ ಡೇಟಿಂಗ್ ಮಾಡಿ ಸಕ್ಸಸ್ ಆದರೆ ಅವರಿಗೆ ನಗದು ಬಹುಮಾನ ನೀಡುವುದಾಗಿ ಪೋಷಣೆ ಮಾಡಿದೆ.  ಕೆಲಸದ ಸ್ಥಳದಲ್ಲಿ ಸಂತೋಷವನ್ನು ಹೆಚ್ಚಿಸಲು  ಮತ್ತು ಸಾಮಾಜಿಕ ಸವಾಲುಗಳನ್ನು ಎದುರಿಸಲು ಚೀನಿ ಕಂಪೆನಿ ಹೊಸ ತಂತ್ರ ರೂಪಿಸಿದೆ ಎನ್ನಲಾಗಿದೆ. ಈ ಸುದ್ದಿ ಮಾತ್ರ ಸಿಕ್ಕಾಪಟ್ಟೆ ವೈರಲ್‌(Viral News) ಆಗಿದೆ.

ಶೆನ್ಜೆನ್ ಮೂಲದ ಚೀನಾದ ಟೆಕ್ ಕಂಪನಿ ಇನ್ಸ್ಟಾ 360, ಉದ್ಯೋಗಿಗಳಿಗೆ ಡೇಟಿಂಗ್‍ ಹೋಗುವಂತೆ ಅದಕ್ಕಾಗಿ ನಗದು ಬಹುಮಾನವನ್ನು ನೀಡುವ ಅಭಿಯಾನವನ್ನು ಪ್ರಾರಂಭಿಸಿದೆಯಂತೆ. ವರದಿ ಪ್ರಕಾರ, ಈ ಕ್ರಮವು ತನ್ನ ಉದ್ಯೋಗಿಗಳಲ್ಲಿ ಸಂಪರ್ಕಗಳನ್ನು ಬೆಳೆಸುವ ಮತ್ತು ತನ್ನದೇ ಆದ ಭಾವನೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ. ಅಲ್ಲದೇ ಮದುವೆ, ಮಕ್ಕಳು ಮಾಡಿಕೊಳ್ಳುವ ಬಗ್ಗೆ ಯುವಜನತೆ ನಿರಾಸಕ್ತಿ ತೋರುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕಂಪನಿ ಈ ಭರ್ಜರಿ ಆಫರ್‌ ನೀಡುತ್ತಿದೆ ಎನ್ನಲಾಗಿದೆ.

ಟೆಕ್ ಕಂಪನಿಯ ಉದ್ಯೋಗಿ ಹೊರಗಿನವರ ಜೊತೆ ಡೇಟಿಂಗ್ ಮಾಡಿ ಕಂಪನಿಯ ಆಂತರಿಕ ಡೇಟಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಡೇಟಿಂಗ್ ಫೋಟೊ ಹಾಕಿದರೆ ಅವರಿಗೆ ಕಂಪನಿ  66 ಯುವಾನ್ (ಸುಮಾರು ರೂ. 770) ನೀಡುತ್ತದೆ. ಆದರೆ  ಮೂರು ತಿಂಗಳ ಕಾಲ ಈ ಸಂಬಂಧವನ್ನು ಉಳಿಸಿಕೊಂಡರೆ ಅಂತಹ  ಉದ್ಯೋಗಿಗಳು ದೊಡ್ಡ ಬಹುಮಾನಕ್ಕೆ ಅರ್ಹರಾಗಿರುತ್ತಾರಂತೆ. ಅಂದರೆ ಅವರಿಬ್ಬರಿಗೂ  ತಲಾ 1,000 ಯುವಾನ್ (ಅಂದಾಜು ರೂ. 11,650) ಸಿಗಲಿದೆಯಂತೆ.

ಈ ಕಾರ್ಯಕ್ರಮದಲ್ಲಿ  ಈಗಾಗಲೇ ಉದ್ಯೋಗಿಗಳು ಉತ್ಸಾಹದಿಂದ  ಭಾಗವಹಿಸಿದ್ದು, ಈಗಾಗಲೇ  ಈ  ಕಂಪನಿಯ ಪ್ಲಾಟ್‍ಫಾರ್ಮ್‍ನಲ್ಲಿ ಸುಮಾರು 500 ಪೋಸ್ಟ್‌ಗಳನ್ನು ಪ್ರಕಟಿಸಲಾಗಿದೆ. ಇನ್ ಸ್ಟಾ 360 ಪ್ರತಿನಿಧಿ ತಿಳಿಸಿದ  ಪ್ರಕಾರ, ಸಿಂಗಲ್ಸ್ ಪ್ರೊಫೈಲ್‍ಗಳನ್ನು ಹಂಚಿಕೊಂಡಿದ್ದಕ್ಕಾಗಿ ಈಗಾಗಲೇ ಸುಮಾರು 10,000 ಯುವಾನ್ ಸಣ್ಣ ನಗದು ಬಹುಮಾನಗಳನ್ನು ವಿತರಿಸಲಾಗಿದೆಯಂತೆ. ಆದರೆ ಅಭಿಯಾನವು ಶುರುವಾಗಿ  ಇನ್ನೂ ಮೂರು  ತಿಂಗಳು ಆಗಿರದ ಕಾರಣ ಇನ್ನೂ ಯಾವುದೇ ಡೇಟಿಂಗ್ ಬೋನಸ್‍ಗಳನ್ನು ನೀಡಲಾಗಿಲ್ಲ ಎನ್ನಲಾಗಿದೆ.

ಕಂಪನಿಯ ಈ ಕ್ರಮದ ಬಗ್ಗೆ  ಉದ್ಯೋಗಿಗಳು ಮತ್ತು ಸಾರ್ವಜನಿಕರಲ್ಲಿ ವಿಭಿನ್ನ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಕೆಲವರು ಸೃಜನಶೀಲ ವಿಧಾನವನ್ನು ಸ್ವಾಗತಿಸಿದರೆ, ಇತರರು ಅದರ ಪರಿಣಾಮಗಳನ್ನು ಪ್ರಶ್ನಿಸಿದ್ದಾರೆ. ಒಬ್ಬ ಉದ್ಯೋಗಿ ತಮಾಷೆಯಾಗಿ, “ನನ್ನ ಕಂಪನಿ ನನ್ನ ಮದುವೆಯ ಬಗ್ಗೆ ನನ್ನ ಅಮ್ಮನಿಗಿಂತ ಹೆಚ್ಚು ಉತ್ಸುಕವಾಗಿದೆ” ಎಂದು ಕಾಮೆಂಟ್ ಮಾಡಿದರೆ, ಇನ್ನೊಬ್ಬರು “ಕಂಪನಿಯು ಯಾವುದೇ ನೇಮಕಾತಿ ಯೋಜನೆಗಳನ್ನು ಹೊಂದಿದೆಯೇ?” ಎಂದು ಕೇಳಿದ್ದಾರೆ. ಕೆಲವು ಬಳಕೆದಾರರು ಸರ್ಕಾರವು ಇದೇ ರೀತಿಯ ಪ್ರೋತ್ಸಾಹಕಗಳನ್ನು ಪರಿಚಯಿಸಬೇಕು ಎಂದು ಸಲಹೆ ನೀಡಿದ್ದಾರೆ. ಹಾಗೇ ಕೆಲವರು ಕಂಪೆನಿಯ ಈ ಕ್ರಮದ ವಿರುದ್ಧ ಕಿಡಿಕಾರಿದ್ದಾರೆ.  ಒಬ್ಬರು “ಪ್ರೀತಿಯನ್ನು ಹಣದಿಂದ ಅಳೆಯಬಾರದು” ಎಂದು ಹೇಳಿದ್ದಾರೆ.

ಇದನ್ನೂ ಓದಿ:ಅತೀ ಹೆಚ್ಚು ಹಾವುಗಳನ್ನು ರಕ್ಷಿಸಿ ವಿಶ್ವ ದಾಖಲೆ ಬರೆದ ʻಸ್ನೇಕ್‌ ಗರ್ಲ್‌ʼ- ಈಕೆಯ ಸಾಧನೆಗೆ ನೆಟ್ಟಿಗರಿಂದ ಬಹು ಪರಾಕ್‌!

ಚೀನಾದಲ್ಲಿ ಮದುವೆ ಮತ್ತು ಜನನ ದರದಲ್ಲಿ ಭಾರಿ  ಕುಸಿತ ಕಂಡುಬಂದ ಹಿನ್ನೆಲೆಯಲ್ಲಿ ಟೆಕ್ ಕಂಪನಿಯ ಈ ಅಭಿಯಾನ ಶುರುಮಾಡಿದೆ. 2024 ರ ಮೊದಲ ಮೂರು ತ್ರೈಮಾಸಿಕಗಳಲ್ಲಿ ಕೇವಲ 4.74 ಮಿಲಿಯನ್ ದಂಪತಿಗಳು ತಮ್ಮ ವಿವಾಹಗಳನ್ನು ನೋಂದಾಯಿಸಿದ್ದಾರೆ ಎಂದು ಸರ್ಕಾರದ ಅಂಕಿ ಅಂಶಗಳು ಬಹಿರಂಗಪಡಿಸಿವೆ, ಇದು 2023 ರ ಇದೇ ಅವಧಿಗೆ ಹೋಲಿಸಿದರೆ 16.6% ರಷ್ಟು ಕಡಿಮೆಯಾಗಿದೆ. ಅಂತೆಯೇ, ರಾಷ್ಟ್ರದ ಜನನ ಪ್ರಮಾಣವು ಕುಸಿಯುತ್ತಲೇ ಇದೆ. 2022 ರಲ್ಲಿ 1,000 ಜನರಿಗೆ 6.77 ರಷ್ಟಿತ್ತು. ಆದರೆ ಇದು 2023 ರಲ್ಲಿ 6.39ಕ್ಕೆ ಇಳಿದಿದೆ.