ಆಗ್ರಾ: ದೆಹಲಿ(News Delhi)ಯಲ್ಲಿ ಮಹಿಳಾ ಸುರಕ್ಷತೆ ಎಂಬುದು ಇತ್ತೀಚಿನ ದಿನಗಳಲ್ಲಿ ಸವಾಲಿನ ಸಂಗತಿಯಾಗಿದೆ. ಮಹಿಳಾ ಸಹಾಯವಾಣಿಗಳು ಇದ್ದರೂ ಅದರು ಎಷ್ಟು ಮಟ್ಟಿಗೆ ಕಾರ್ಯನಿರ್ವಹಿಸುತ್ತದೆ ಎಂಬುದೇ ಬಹುದೊಡ್ಡ ಪ್ರಶ್ನೆಯಾಗಿದೆ. ಇದಕ್ಕೆ ಪೂರಕ ಎಂಬಂತೆ ಆಗಾಗ ರಾಷ್ಟ್ರರಾಜಧಾನಿಯಲ್ಲಿ ಮಹಿಳೆಯ ಮೇಲಿನ ದೌರ್ಜನ್ಯ, ಕಿರುಕುಳ, ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿರುತ್ತವೆ (Viral News). ಇದೀಗ ಈ ಮಹಿಳಾ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಲು ಖುದ್ದೂ ಸಹಾಯಕ ಪೊಲೀಸ್ ಆಯುಕ್ತೆ ಫೀಲ್ಡ್ಗಿಳಿದಿದ್ದ ಘಟನೆ ವರದಿಯಾಗಿದೆ. ಪೊಲೀಸ್ ಅಧಿಕಾರಿಯ(ACP) ಈ ವಿಡಿಯೋ ಎಲ್ಲೆಡೆ ವೈರಲ್(Viral Video) ಆಗುತ್ತಿದೆ.
ನಗರದಲ್ಲಿ ಮಹಿಳೆಯರ ಸುರಕ್ಷತೆಯನ್ನು ಪರಿಶೀಲಿಸಲು ಆಗ್ರಾದ ಹಿರಿಯ ಮಹಿಳಾ ಪೋಲೀಸ್ ಸುಕನ್ಯಾ ಶರ್ಮಾ ಮಾರುವೇಷದಲ್ಲಿ ತಡರಾತ್ರಿ ಆಟೋ ಹತ್ತಿದ್ದಾರೆ. ಆಟೋ ಏರುತ್ತಿದ್ದಂತೆ ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ ತುರ್ತು ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ರಾತ್ರಿಯಾಗಿರುವುದರಿಂದ ತನಗೆ ಅವರ ಸಹಾಯ ಬೇಕು ಮತ್ತು ನಿರ್ಜನ ರಸ್ತೆಯಿಂದಾಗಿ ಭಯಗೊಂಡಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದರು. ಸಹಾಯವಾಣಿ ನಿರ್ವಾಹಕರು ಆಕೆಯನ್ನು ಸುರಕ್ಷಿತ ಸ್ಥಳದಲ್ಲಿ ನಿಲ್ಲುವಂತೆ ಹೇಳಿ ಆಕೆ ಇರುವ ಬಗ್ಗೆ ಮಾಹಿತಿ ಪಡೆದರು.
#PoliceCommissionerateAgra #एसीपी_महिला_अपराध डॉ. सुकन्या शर्मा द्वारा सादा वस्त्रों में अकेले ऑटो में बैठकर भीड़ भाड़ वाले संवेदनशील स्थानों का भ्रमण/निरीक्षण किया एवं स्वयं पीड़ित बनकर UP112 का प्रयोग कर, परखी इमरजेंसी सुरक्षा व्यवस्था#UPPCares https://t.co/DhitBSV99g pic.twitter.com/y4qCv8lB1j
— POLICE COMMISSIONERATE AGRA (@agrapolice) September 28, 2024
ನಂತರ ಆಕೆಗೆ ಮಹಿಳಾ ಗಸ್ತು ತಿರುಗುವ ತಂಡದಿಂದ ಕರೆ ಬಂದಿತು, ಅವರು ಅವಳನ್ನು ಕರೆದುಕೊಂಡು ಹೋಗಲು ಬರುತ್ತಿದ್ದಾರೆ ಎಂದು ಹೇಳಿದರು. ಇಷ್ಟೆಲ್ಲಾ ಪ್ರಕ್ರಿಯೆಗಳು ಕ್ಷಣಾರ್ಧದಲ್ಲಿ ನಡೆಯುತ್ತಿದ್ದಂತೆ ಶರ್ಮಾ ಅವರು ತಮ್ಮ ಗುರುತನ್ನು ಪೊಲೀಸರಿಗೆ ತಿಳಿಸಿದ್ದಾರೆ. ತಾವು ಮಹಿಳಾ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸುವ ಉದ್ದೇಶದಿಂದ ಈ ರೀತಿ ಪರೀಕ್ಷೆ ಮಾಡಿರುವುದಾಗಿ ತಿಳಿಸಿದರು.
ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸುಕನ್ಯಾ ಶರ್ಮಾರಂತಹ ಪೊಲೀಸ್ ಅಧಿಕಾರಿ ದೆಹಲಿಗೆ ಬೇಕು ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Viral News: ಈ ಊರಿನ ಜನ ಮನೆಯಲ್ಲಿ ಅಡುಗೆಯನ್ನೇ ಮಾಡುವುದಿಲ್ಲವಂತೆ! ಏಕೆ ಈ ಸಂಪ್ರದಾಯ?