Friday, 13th December 2024

Viral Video: ಸ್ಪೀಡ್ ಬ್ರೇಕರ್‌ಗೆ ಡಿಕ್ಕಿ ಹೊಡೆದ ಸ್ಕೂಟರ್ ಸವಾರ; ಮುಂದೆ ಆಗಿದ್ದೇನು? ವಿಡಿಯೊ ನೋಡಿ

Viral Video

ಡೆಹ್ರಾಡೂನ್: ಸ್ಕೂಟರ್ ಸವಾರರೊಬ್ಬರು ಕ್ಲಾಕ್ ಟವರ್ ಮುಂದೆ ಅಳವಡಿಸಿದ್ದ ಗುರುತು ಮಾಡದ ಸ್ಪೀಡ್ ಬ್ರೇಕರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಹಾರಿ ಹೋಗಿ ರಸ್ತೆಯಲ್ಲಿ ಬಿದ್ದ ‍ಘಟನೆ ಉತ್ತರಾಖಂಡದ ಡೆಹ್ರಾಡೂನ್‍ನಲ್ಲಿ ನಡೆದಿದೆ. ಚಾಲಕರನ್ನು ಎಚ್ಚರಿಸಲು ಇರುವಂತಹ  ಸ್ಪೀಡ್ ಬ್ರೇಕರ್‌ ಅನ್ನು ಸರಿಯಾಗಿ ಗುರುತು ಮಾಡದ ಕಾರಣ ಅದು ಅನೇಕ ದ್ವಿಚಕ್ರ ವಾಹನಗಳು ಮತ್ತು ಕಾರುಗಳಿಗೆ ತೊಂದರೆ ಉಂಟು ಮಾಡಿದೆ. ಅಪಘಾತದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ವೈರಲ್ ವಿಡಿಯೊದಲ್ಲಿ ಮಧ್ಯಮ ವೇಗದಲ್ಲಿ ಬರುತ್ತಿದ್ದ ಸ್ಕೂಟರ್ ಗುರುತು ಮಾಡದ ಸ್ಪೀಡ್ ಬ್ರೇಕರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರ್‌ ಚಾಲಕ ಸ್ಕೂಟರ್‌ನಿಂದ ಕೆಳಗೆ ಬಿದ್ದಿದ್ದಾರೆ.  ಚಾಲಕ ಸ್ವಲ್ಪ ವಿರಾಮದ ನಂತರ ಎದ್ದು ಸ್ಕೂಟರ್ ತೆಗೆದುಕೊಂಡು ಹೋಗಿದ್ದಾರೆ.

ಸ್ಪೀಡ್ ಬ್ರೇಕರ್, ವೇಗವನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದ್ದರೂ, ಅದನ್ನು ಸರಿಯಾಗಿ ಗುರುತು ಮಾಡದ ಕಾರಣ ಹಲವಾರು ಅಪಘಾತಗಳಿಗೆ ಕಾರಣವಾಗಿದೆ. ಅದು ಅಲ್ಲದೇ ಇದನ್ನು ಅತಿ ಎತ್ತರವಾಗಿ ನಿರ್ಮಿಸಿದ್ದಾರಂತೆ. ಈ ಸ್ಪೀಡ್ ಬ್ರೇಕರ್‌ನಿಂದಾಗಿ ಈಗಾಗಲೇ ಏಳು ಘಟನೆಗಳು ಸಂಭವಿಸಿವೆ ಎಂದು ವರದಿಯಾಗಿದೆ. ಇದರ ಪರಿಣಾಮವಾಗಿ ಮೂರು ವರ್ಷದ ಮಗು ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ.

ಇಂತಹ ಪ್ರಕರಣ ಇದೇ ಮೊದಲಲ್ಲ. ಅಕ್ಟೋಬರ್‌ನಲ್ಲಿ ಗುರುಗ್ರಾಮ್‍ನಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ವೇಗವಾಗಿ ಚಲಿಸುತ್ತಿದ್ದ ಬಿಎಂಡಬ್ಲ್ಯು ಕಾರು ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಹೊಸದಾಗಿ ಹಾಕಲಾದ ಸ್ಪೀಡ್ ಬ್ರೇಕರ್‌ಗೆ ಸರಿಯಾಗಿ ಗುರುತು ಮಾಡದ ಕಾರಣ ಅದಕ್ಕೆ ಡಿಕ್ಕಿ ಹೊಡೆದು ಮೇಲೆ ಹಾರಿದೆ. ಕ್ಯಾಮೆರಾದಲ್ಲಿ ಸೆರೆಹಿಡಿಯಲಾದ ಘಟನೆಯಲ್ಲಿ, ಕಾರು ಒಂದು ಸೆಕೆಂಡಿಗೂ ಹೆಚ್ಚು ಕಾಲ ಗಾಳಿಯಲ್ಲಿ ಹಾರಿ ಕೊನೆಗೆ ನೆಲಕ್ಕೆ ಇಳಿದಿದೆ. ಅದೇ ವಿಡಿಯೊದಲ್ಲಿ, ಎರಡು ಟ್ರಕ್‍ಗಳು ಕೂಡ ಆ ಗುರುತು ಮಾಡದ ಸ್ಪೀಡ್ ಬ್ರೇಕರ್‌ಗೆ ಡಿಕ್ಕಿ ಹೊಡೆದು ಮೇಲೆ ಹಾರಿದೆ.

ಈ ಸುದ್ದಿಯನ್ನೂ ಓದಿ:ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಕೈಯಿಂದ ಚಿನ್ನದ ಬಳೆಗಳನ್ನು ಕದ್ದ ಕಿಡಿಗೇಡಿ- ಶಾಕಿಂಗ್‌ ವಿಡಿಯೊ ವೈರಲ್‌

ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ವೈರಲ್ ಆದ ಬಳಿಕ  ಅಧಿಕಾರಿಗಳು ಕ್ರಮ ಕೈಗೊಂಡರು. ಗುರುಗ್ರಾಮ್ ಮೆಟ್ರೋಪಾಲಿಟನ್ ಡೆವಲಪ್‌ಮೆಂಟ್‌ ಅಥಾರಿಟಿ (ಜಿಎಂಡಿಎ) ಚಾಲಕರಿಗೆ ಎಚ್ಚರಿಕೆ ನೀಡಲು “ಸ್ಪೀಡ್ ಬ್ರೇಕರ್ ಎಹೈಡ್” ಎಂಬ ಎಚ್ಚರಿಕೆಯ ಸೈನ್ ಬೋರ್ಡ್ ಅನ್ನು ಸ್ಥಾಪಿಸಿದೆ. ಹಾಗೇ  ಸ್ಪೀಡ್ ಬ್ರೇಕರ್ ಅನ್ನು ಥರ್ಮೋಪ್ಲಾಸ್ಟಿಕ್ ಬಿಳಿ ಬಣ್ಣದಿಂದ ಗುರುತು ಮಾಡಿದ್ದಾರೆ.