Saturday, 5th October 2024

Viral Video: ಚೆನ್ನೈ ಯುವತಿಯರ ನೃತ್ಯದ ವಿಡಿಯೊ ಹಂಚಿಕೊಂಡ ಆನಂದ್ ಮಹೀಂದ್ರ!

Viral Video

ಉದ್ಯಮಿ ಆನಂದ್ ಮಹಿಂದ್ರಾ (Anand Mahindra) ಅವರು ಸಾಮಾಜಿಕ ಜಾಲತಾಣದ (Social Media) ಮೂಲಕ ತಮಗೆ ಹೆಚ್ಚು ಇಷ್ಟವಾದ ವಿಡಿಯೋಗಳನ್ನು (Viral Video) ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರು ಯುವತಿಯರ ಗುಂಪೊಂದು ಚೌತಿಯ ಗಣಪತಿ ವಿಸರ್ಜನೆ ವೇಳೆ ಮಾಡಿರುವ ನೃತ್ಯದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದು ಈಗ ಭಾರಿ ವೈರಲ್ ಆಗಿದೆ.

ಚೆನ್ನೈ ಮೂಲದ ನರ್ತಕಿ ಸಿಮ್ರಾನ್ ಶಿವಕುಮಾರ್ ಮತ್ತು ಅವರ ತಂಡ ಬಾಲಿವುಡ್ ನಟ ಹೃತಿಕ್ ರೋಷನ್, ಪ್ರಿಯಾಂಕ ಚೋಪ್ರಾ ಅಭಿನಯದ 2012ರಲ್ಲಿ ಬಿಡುಗಡೆಯಾದ ಅಗ್ನಿಪಥ್‌ ಚಿತ್ರದ ಹಾಡಿಗೆ ಅದ್ಭುತವಾದ ನೃತ್ಯ ಪ್ರದರ್ಶನ ಮಾಡಿದ್ದರು. ಇದರ ವಿಡಿಯೋ ವೈರಲ್ ಆಗಿದ್ದು, ಸಾಕಷ್ಟು ಮಂದಿಯ ಮೆಚ್ಚುಗೆ ಗಳಿಸಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋವನ್ನು ಈಗಾಗಲೇ 47 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅತ್ಯಂತ ಅದ್ಭುತ ಸ್ಟೆಪ್ ಗಳನ್ನು ಯುವತಿಯರು ಹಾಕಿದ್ದು ಕೊನೆಯವರೆಗೂ ವಿಡಿಯೋ ನೋಡುವಂತೆ ಮಾಡುತ್ತದೆ. ಅವರ ನೃತ್ಯದಿಂದ ಪ್ರಭಾವಿತರಾದ ಆನಂದ್ ಮಹೀಂದ್ರಾ ಅವರು ಈ ವಿಡಿಯೋವನ್ನು ಪೋಸ್ಟ್ ಮಾಡಿ ಶುಭ ಹಾರೈಸಿದ್ದಾರೆ.

Shiva Rajkumar: ಶಿವರಾಜ್‌ ಕುಮಾರ್‌ ಕಾಲಿಗೆ ನಮಸ್ಕರಿಸಿದ ಐಶ್ವರ್ಯಾ ರೈ ಪುತ್ರಿ ಆರಾಧ್ಯಾ ಬಚ್ಚನ್‌

ಅಗ್ನಿಪಥ್ ಚಿತ್ರದ ದೇವ ಶ್ರೀ ಗಣೇಶ.. ಹಾಡು ಗಣಪತಿ ದೇವರಿಗೆ ಸಮರ್ಪಿತವಾದ ಭಕ್ತಿಗೀತೆಯಾಗಿದೆ. ಜನಪ್ರಿಯ ಜೋಡಿಯಾದ ಅಜಯ್- ಅತುಲ್ ಇದನ್ನು ಸಂಯೋಜಿಸಿದ್ದು, ಅಜಯ್ ಗೊಗಾವಲೆ ಹಾಡಿದ್ದಾರೆ.