ಬೆಂಗಳೂರು: ಬೆಂಗಳೂರಿನ ಕ್ಯಾಬ್ ವೊಂದರಲ್ಲಿ ನಿದ್ರೆಗೆ ಜಾರಿದ ಚಾಲಕನ ಕಷ್ಟ ಕಂಡು ಪ್ರಯಾಣಿಕನೇ ಡ್ರೈವ್ ಮಾಡಿದ ವಿಚಾರವೊಂದು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಸದ್ದು ಮಾಡುತ್ತಿದೆ. ಕ್ಯಾಬ್ ಚಾಲಕನಿಗೆ ನಿದ್ದೆ ಬರುತ್ತಿದೆ ಎಂದು ಗಮನಿಸಿದ ಪ್ರಯಾಣಿಕ, ಚಾಲಕನ ನ್ನು ನಿದ್ದೆ ಮಾಡುವಂತೆ ಹೇಳಿ, ಕೀ ಪಡೆದು ತಾನೇ ಕ್ಯಾಬ್ ಚಲಾಯಿಸಿಕೊಂಡು ಹೋಗುವ ಮೂಲಕ ಸುದ್ದಿಯಾಗಿದ್ದಾರೆ(Viral Video)
ಕ್ಯಾಂಪ್ ಡೈರೀಸ್ ಬೆಂಗಳೂರು ಸಂಸ್ಥಾಪಕ, ಎಂಟಿವಿ ರೋಡೀಸ್ ರಿಯಲ್ ಹಿರೋ ಸ್ಪರ್ಧಿಯಾಗಿದ್ದ ಮಿಲಿಂದ್ ಚಂದ್ವಾನಿ ಅವರು ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವ ಪೋಸ್ಟ್ ಒಂದು ಭಾರೀ ವೈರಲ್ ಆಗಿದೆ. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಇವರು ಕ್ಯಾಬ್ ಬುಕ್ ಮಾಡಿದ್ದರು. ಬಳಿಕ ಕ್ಯಾಬ್ ಹತ್ತಿ ಬೆಂಗಳೂರು ನಗರದ ಕಡೆಗೆ ಪ್ರಯಾಣ ಬೆಳೆಸಿದ್ದರು. ರಾತ್ರಿ ಆದ ಕಾರಣ ನಿದ್ದೆಯಿಂದಾಗಿ ಕ್ಯಾಬ್ ಚಾಲಕನಿಗೆ ಡ್ರೈವ್ ಮಾಡಲು ಬಹಳಷ್ಟು ಕಷ್ಟವಾಗುತ್ತಿತ್ತು ಬಳಿಕ ತಾನೇ ಕ್ಯಾಬ್ ಡ್ರೈವ್ ಮಾಡಿರುವ ವಿಚಾರ ಹಂಚಿಕೊಂಡಿದ್ದಾರೆ.
ಮಿಲಿಂದ್ ಚಂದವಾನಿ ಎನ್ನುವ ಟೆಕಿ ಅವರು ಘಟನೆಗೆ ಸಂಬಂಧಿಸಿದ ಪೋಸ್ಟ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ನಿನ್ನೆ ರಾತ್ರಿ 3 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಹಿಂತಿರುಗುವಾಗ, ನಾನು ಅನಿರೀಕ್ಷಿತವಾಗಿ ಕೆಲಸವೊಂದನ್ನು ಮಾಡಬೇಕಾಯ್ತು. ನನ್ನ ಕ್ಯಾಬ್ ಡ್ರೈವರ್ ಗೆ ನಾನೇ ಡ್ರೈವರ್ ಆಗಿ ಕೆಲಸ ನಿರ್ವಹಿಸಿದೆ. ಕ್ಯಾಬ್ ಡ್ರೈವರ್ ತುಂಬಾ ನಿದ್ದೆಯಲ್ಲಿದ್ದರು. ಚಾಲಕ ನಿದ್ದೆಯಿಂದ ಏಳಲು ಪ್ರಯತ್ನ ಪಟ್ಟರೂ ಡ್ರೈವ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಿದ್ದೆಯಿಂದ ಕಣ್ಣುಗಳನ್ನು ತೆರೆಯಲು ಕೂಡ ಸಾಧ್ಯವಾಗಲಿಲ್ಲ. ಬಳಿಕ ಅವರು ಟೀ ಕುಡಿದು, ಸಿಗರೇಟ್ ಸೇದಿ ಮತ್ತೆ ಕಾರು ಡ್ರೈವ್ ಮಾಡಿದರು. ಆದರೂ ಅವರನ್ನು ನಿದ್ರೆ ಬಿಡುತ್ತಿರಲಿಲ್ಲ. ಇದನ್ನು ಗಮನಿಸಿ ನೀವು ಮಲಗಿ, ನಾನೇ ಕಾರು ಚಲಾಯಿಸುವೆ ಎಂದು ಹೇಳಿದ ಕೂಡಲೇ ಅವರು ನನಗೆ ಕಾರಿನ ಕೀ ಕೊಟ್ಟೇಬಿಟ್ಟರು ಎಂದು ವಿವರಿಸಿದ್ದಾರೆ.
ಹಾಗಾಗಿ ನಾನು ಚಾಲನೆ ಮಾಡಲು ಮುಂದಾದೆ. ಕೊನೆಗೆ ನಾನು ಗೂಗಲ್ ಮ್ಯಾಪ್ ಹಾಕಿಕೊಂಡು ನನ್ನ ಸ್ಥಳ ತಲುಪಿದೆ. ಬಳಿಕ ಅವರು ತಮ್ಮ ಮಾಲೀಕರೊಂದಿಗೆ ಮಾತನಾಡಿ ನನಗೆ ನೈಟ್ ಶಿಫ್ಟ್ ಮಾಡಲು ಆಗ್ತಿಲ್ಲ, ಬೆಳಿಗ್ಗೆ ಶಿಫ್ಟ್‌ನಲ್ಲೇ ಕೆಲಸ ಮಾಡುತ್ತೇನೆ ಎನ್ನುತ್ತಿದ್ದರು ಜೀವನದಲ್ಲಿ ಇಂತಹ ಅನಿರೀಕ್ಷಿತ ಘಟನೆಗಳು ಎಂದಿಗೂ ಬರಬಹುದು ಎಲ್ಲದ್ದಕ್ಕೂ ಸಿದ್ದವಾಗಿರಿ ಎಂದು ಅವರು ಬರೆದುಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ:ಟ್ವಿಟರ್‌ನಲ್ಲಿ ‘ಅನ್‌ಸಬ್‌ಸ್ಕ್ರೈಬ್ ನೆಟ್‌ಫ್ಲಿಕ್ಸ್’ ಟ್ರೆಂಡಿಂಗ್