Friday, 27th September 2024

Viral Video: ಅಂಗಡಿ ಮುಂದೆ ಕಸ, ಸಿಟ್ಟಿಗೆದ್ದು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ ಟೀನಾ ಡಾಬಿ; ಇಲ್ಲಿದೆ ವಿಡಿಯೊ

Viral Video

ಬೆಂಗಳೂರು: ಮಾರುಕಟ್ಟೆ ಸುತ್ತಮುತ್ತ ಕಸದ ರಾಶಿ ಕಂಡು ಜಿಲ್ಲಾಧಿಕಾರಿ ಟೀನಾ ದಾಬಿ (IAS officer Tina Dabi) ಕೋಪಗೊಂಡು ಅಂಗಡಿಯವರನ್ನು ತರಾಟೆಗೆ ತೆಗೆದುಕೊಂಡ ಘಟನೆ ರಾಜಸ್ಥಾನದ ಬಾರ್ಮರ್‌ನಲ್ಲಿ (Rajasthan’s Barmer) ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಟೀನಾ ದಾಬಿ ಅವರು ಬಾರ್ಮರ್‌ನ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದು, ನಗರ ನೈರ್ಮಲ್ಯದ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ಈ ವಾರದ ಆರಂಭದಿಂದ ಆಡಳಿತ ಸಿಬ್ಬಂದಿಯೊಂದಿಗೆ ನಗರದ ಸ್ವಚ್ಛತೆಯ ಮೌಲ್ಯಮಾಪನ ನಡೆಸುತ್ತಿದ್ದಾರೆ.

ರಾಜಸ್ಥಾನದ ಬಾರ್ಮರ್‌ನಲ್ಲಿ ಸ್ವಚ್ಛತಾ ಪರಿಶೀಲನಾ ಅಭಿಯಾನದ ವೇಳೆ ಟೀನಾ ದಾಬಿ ಅವರು ಅಂಗಡಿಯವರಿಗೆ ಛೀಮಾರಿ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಿಸಾನ್ ಮಾರುಕಟ್ಟೆ ಸುತ್ತಮುತ್ತ ಹಲವಾರು ಅಂಗಡಿಗಳ ಹೊರಗೆ ಕಸದ ರಾಶಿ ಕಂಡು ಕೋಪಗೊಂಡ ಅವರು ಅಂಗಡಿಗಳ ಮುಂದೆ ಕಸ ವಿಲೇವಾರಿ ಹಾಕಬಾರದು ಎಂದು ಹೇಳಿ ಅಂಗಡಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು.

ಅಂಗಡಿ ಮುಂದೆ ಕಸ ಎಸೆಯಬೇಡಿ. ಒಂದು ವೇಳೆ ಎಸೆದರೆ ಅಂಗಡಿಯನ್ನು ಮುಚ್ಚಿಸಲಾಗುವುದು, ಇನ್ನೊಮ್ಮೆ ಪರಿಶೀಲಿಸಲು ಬರುತ್ತೇನೆ. ಪ್ರತಿ ಅಂಗಡಿಯ ಮುಂದೆ ಕಸದ ತೊಟ್ಟಿಯನ್ನು ಇಡಬೇಕು. ತಮ್ಮತಮ್ಮ ಅಂಗಡಿಯ ಮುಂದೆ ಸ್ವಚ್ಛಗೊಳಿಸಲು ಯಾರೂ ನಾಚಿಕೆಪಡಬಾರದು ಎಂದು ಅವರು ತಿಳಿಸಿದರು.

ಟೀನಾ ದಾಬಿ ಅವರು ಈ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಹಲವಾರು ಅಂಗಡಿಯವರು ತಮ್ಮ ಪ್ರದೇಶವನ್ನು ಗುಡಿಸಿ ಸ್ವಚ್ಛಗೊಳಿಸಿದ್ದಾರೆ. “ನವೋ ಬಾರ್ಮರ್” ಅಭಿಯಾನದಡಿಯಲ್ಲಿ ಟೀನಾ ಡಾಬಿ ಅವರು ನಗರದಲ್ಲಿ ಸ್ವಚ್ಛತೆಗೆ ಹಲವು ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದ್ದಾರೆ.

Tirupati Laddu Row: ಜಗನ್ ತಿರುಪತಿ ಭೇಟಿ ರದ್ದು; ಮಾನವೀಯತೆಯೇ ನನ್ನ ಧರ್ಮ ಎಂದು ಟಿಡಿಪಿ ಟಾಂಗ್‌

ಟೀನಾ ಡಾಬಿ ಅವರು 2015ರಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೊದಲ ರಾಂಕ್ ಪಡೆದಿದ್ದರು. ಬಳಿಕ ಜೈಸಲ್ಮೇರ್‌ನಲ್ಲಿ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದರು. ಅವರು ಇತ್ತೀಚೆಗೆ ಭಾರತ- ಪಾಕ್ ಗಡಿಯ ಸಮೀಪವಿರುವ ಬಾರ್ಮರ್‌ನ ಜಿಲ್ಲಾಧಿಕಾರಿಯಾಗಿ ನಿಯುಕ್ತರಾಗಿದ್ದಾರೆ.