Friday, 13th December 2024

Viral Video: ನೃತ್ಯದ ವೇಳೆಯೇ ಪ್ರಾಣ ತೊರೆದ ‘ಗರ್ಬಾ ಕಿಂಗ್’

Viral Video

ನವರಾತ್ರಿ ಹಬ್ಬದ ಆಚರಣೆ ವೇಳೆ ಗರ್ಬಾ ನೃತ್ಯ (garba dance) ಮಾಡುತ್ತಿದ್ದ ಕಲಾವಿದನೊಬ್ಬ (Garba King) ಹೃದಯಾಘಾತದಿಂದ (Heart Attack) ಮೃತಪಟ್ಟ ಘಟನೆ ಪುಣೆಯಲ್ಲಿ (pune) ನಡೆದಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

ಪುಣೆಯ ‘ಗರ್ಬಾ ಕಿಂಗ್’ ಎಂದು ಕರೆಯಲ್ಪಡುವ ನಟ ಅಶೋಕ್ ಮಾಲಿ ಮೃತರು. ಇವರು ಚಕನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗರ್ಬಾ ಪ್ರದರ್ಶನ ಮಾಡುವಾಗ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನೃತ್ಯ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಅಸ್ವಸ್ಥನಾಗಿ ಕುಸಿದು ಬಿದ್ದಿದ್ದಾರೆ.

ಅಶೋಕ್ ಮಾಲಿ ತನ್ನ ಮಗನ ಜೊತೆಗೆ ಗಾರ್ಬಾ ಪ್ರದರ್ಶನ ನೀಡುತ್ತಿದ್ದರು. ಅವರು ಕುಸಿದು ಬಿದ್ದ ತಕ್ಷಣ ಅವರನ್ನು ನೆರೆಹೊರೆಯವರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರು. ಆದರೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಪುಣೆಯ ‘ಗರ್ಬಾ ಕಿಂಗ್’

ಪುಣೆಯ ‘ಗರ್ಬಾ ಕಿಂಗ್’ ಎಂದೇ ಕರೆಯಲ್ಪಡುವ ಅಶೋಕ್ ಮಾಲಿ ಅವರು ಧುಲೆ ಜಿಲ್ಲೆಯ ಶಿಂಧಖೇಡಾ ತಾಲೂಕಿನ ಹೋಲ್ ಗ್ರಾಮದವರು.

ಅನೇಕ ರೋಮಾಂಚಕ ಪ್ರದರ್ಶನಗಳನ್ನು ನೀಡಿರುವ ಅವರು ಅಪಾರ ಜನಸಮೂಹವನ್ನು ಆಕರ್ಷಿಸುತ್ತಿದ್ದರು. ಗರ್ಬಾ ಸಮುದಾಯದಲ್ಲಿ ಅವರು ಅಪಾರ ಜನಪ್ರಿಯತೆಯನ್ನು ಗಳಿಸಿದ್ದರು.

Viral Video: ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಗ್ಯಾಂಗ್‌ ವಾರ್‌; ಆಘಾತಕಾರಿ ವಿಡಿಯೊ

ಕಳೆದ ನಾಲ್ಕೈದು ವರ್ಷಗಳಿಂದ ಮಾಲಿ ಅನೇಕ ಗಾರ್ಬಾ ನೃತ್ಯ ಕಲಿಯಲು ಆಸಕ್ತರಾಗಿರುವವರಿಗೆ ತರಬೇತಿ ನೀಡುತ್ತಿದ್ದರು.