Tuesday, 10th December 2024

Viral Video: ನುಂಗಿದ ಮೂರು ಹಾವುಗಳನ್ನು ಉಗುಳಿದ ಕಾಳಿಂಗ ಸರ್ಪ! ವಿಡಿಯೊ ವೈರಲ್

Viral Video

ಹಾವುಗಳಿಗೆ ಸಂಬಂಧಪಟ್ಟ ವಿಡಿಯೊಗಳು ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುತ್ತವೆ. ಇತ್ತೀಚೆಗೆ ಹಾವುಗಳಲ್ಲಿ ಅತ್ಯಂತ ವಿಷಕಾರಿಯಾದ ಕಾಳಿಂಗ ಸರ್ಪವು ಮೂರು ಹಾವುಗಳನ್ನು ನುಂಗಿ ಅವುಗಳನ್ನು ಉಗುಳುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.  ತನ್ನ ಹಸಿವನ್ನು ನೀಗಿಸಿಕೊಳ್ಳಲು ಬೇಟೆಯಾಡಲು ಹೋಗಿದ್ದ ಕಾಳಿಂಗ ಸರ್ಪವು ಹಸಿವನ್ನು ತಡೆದುಕೊಳ್ಳಲಾರದೆ ಮೂರು ಹಾವುಗಳನ್ನು ಬೇಟೆಯಾಡಿ ನುಂಗಿತ್ತು. ಒಂದರ ನಂತರ ಒಂದರಂತೆ ಹಾವುಗಳನ್ನು ನುಂಗಿದ ಕಾಳಿಂಗ ಸರ್ಪಕ್ಕೆ ಅವುಗಳನ್ನು  ಜೀರ್ಣಿಸಿಕೊಳ್ಳಲು ಸಾಧ್ಯವಾಗದೆ ಉಗುಳಿದೆ.

ಈ ವೈರಲ್ ವಿಡಿಯೊದಲ್ಲಿ ಕಾಳಿಂಗ ಸರ್ಪವು ಜನದಟ್ಟಣೆಯ ಸ್ಥಳಕ್ಕೆ ಪ್ರವೇಶಿಸಿ ಮೂರು ಹಾವುಗಳನ್ನು ಒಂದರ ನಂತರ ಒಂದರಂತೆ ಉಗುಳುತ್ತಿರುವುದನ್ನು  ನೋಡಿ ಜನರು ಭಯಭೀತರಾಗಿದ್ದಾರೆ. ಕಾಳಿಂಗ ಸರ್ಪದ ಬಾಯಿಂದ ಹಾವುಗಳು ಬೀಳುತ್ತಿರುವುದನ್ನು ಕಂಡು ಜನ ಕೂಡ ಗಾಬರಿಯಾಗಿದ್ದಾರೆ. ಈ ವಿಡಿಯೊವನ್ನು Massimo  ಎಂಬ ಇನ್ಸ್ಟಾಗ್ರಾಂ ಪೇಜ್‍ನಲ್ಲಿ  ಹಂಚಿಕೊಂಡಿದ್ದಾರೆ. ಈ ವಿಡಿಯೊವನ್ನು ಲಕ್ಷಾಂತರ ಜನ ಲೈಕ್ ಮಾಡಿದ್ದಾರೆ.

ಇದನ್ನೂ ಓದಿ: ಹುಲಿಯ ಬಾಯಿಗೆ ಕೈ ಹಾಕಿದ ಪಶುವೈದ್ಯರು; ಮುಂದೇನಾಯ್ತು ನೋಡಿ!

ಈ ವಿಡಿಯೊಗೆ ಹಲವಾರು ಮಂದಿ ಕಮೆಂಟ್ ಮಾಡಿದ್ದಾರೆ. ಅನೇಕರು ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. ವಿಡಿಯೊವನ್ನು ನೋಡಿದ ನೆಟ್ಟಿಗರೊಬ್ಬರು “ಹಾವು ಎಲ್ಲಾ ಮೂರು ಹಾವುಗಳನ್ನು ಏಕೆ ಉಗುಳುತ್ತದೆʼʼ ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರು “ಹಾವು ಮತ್ತೊಂದು ಹಾವನ್ನು ತಿನ್ನಬಹುದೇ?” ಎಂದು ಕೇಳಿದ್ದಾರೆ. ಹಾವುಗಳು ಮತ್ತೊಂದು ಹಾವುಗಳನ್ನು ತಿನ್ನಲು ಇಷ್ಟಪಡುವುದಿಲ್ಲ ಎಂದು ಮತ್ತೊಬ್ಬ ನೆಟ್ಟಿಗರು ಹೇಳಿದ್ದಾರೆ. ಇನ್ನೊಬ್ಬರು “ಹಾವನ್ನು ನೋಡಲು ಭಯವಾಗುತ್ತದೆ, ಅಲ್ಲಿ ನಾಲ್ಕು ದೊಡ್ಡ ಹಾವುಗಳಿವೆ, ವಿಶೇಷವಾಗಿ ಕ್ರೂರ ಕಾಳಿಂಗ ಸರ್ಪ, ಎಲ್ಲರೂ ಭಯವಿಲ್ಲದೆ ಹೇಗೆ ನಿಂತಿದ್ದಾರೆಂದು ನನಗೆ ತಿಳಿದಿಲ್ಲ.” ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.