Thursday, 12th December 2024

Viral Video: ಮುಂಬೈ ಬೀದಿಯಲ್ಲಿ ಖ್ಯಾತ ಯುಟ್ಯೂಬರ್ಸ್‌ ಜತೆ ಕುಸ್ತಿಪಟು ಲೋಗನ್ ಪಾಲ್ ರಿಕ್ಷಾ ಸವಾರಿ- ವಿಡಿಯೊ ಇದೆ

Viral Video

ಮುಂಬಯಿ: ಯೂಟ್ಯೂಬರ್ ಮಿಸ್ಟರ್ ಬೀಸ್ಟ್ (YouTuber MrBeast), ಕುಸ್ತಿಪಟು ಲೋಗನ್ ಪಾಲ್ (wrestler Logan Paul) ಮತ್ತು ಬಾಕ್ಸರ್ ಕೆಎಸ್‌ಐ (boxer KSI) ಇತ್ತೀಚೆಗೆ ಮುಂಬೈ ನಗರದಲ್ಲಿ ಆಟೋ ಸವಾರಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ (Viral Video) ಆಗಿದೆ. ಮಿಸ್ಟರ್ ಬೀಸ್ಟ್ ಎಂದೇ ಕರೆಯಲ್ಪಡುವ ಜೇಮ್ಸ್ ಸ್ಟೀಫನ್ ಡೊನಾಲ್ಡ್ ಸನ್ ಮತ್ತು ಕೆಎಸ್‌ಐ ಅವರನ್ನು ಮುಂಬೈನ ಬೀದಿಯ ರಸ್ತೆಯಲ್ಲಿ ಲೋಗನ್ ರಿಕ್ಷಾದಲ್ಲಿ ಕೂರಿಸಿ ಸವಾರಿ ಮಾಡಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮುಂಬೈ ಆಟೋರಿಕ್ಷಾ ಚಾಲಕನಂತೆ ವೇಷಭೂಷಣವನ್ನು ಧರಿಸಿದ್ದ ಲೋಗನ್, ಜೇಮ್ಸ್ ಮತ್ತು ಕೆಎಸ್‌ಐ ಅವರನ್ನು ಹಿಂದೆ ಕೂರಿಸಿಕೊಂಡು ರಿಕ್ಷಾ ಚಲಾಯಿಸಿಕೊಂಡು ಹೋಗುತ್ತಿದ್ದರೆ, ರಸ್ತೆಯಲ್ಲಿ ಇವರನ್ನು ನೋಡಿದವರು ಹಿಂಬಾಲಿಸಿಕೊಂಡು ಹೋಗುತ್ತಿರುವುದು ಈ ವಿಡಿಯೊದಲ್ಲಿ ಸೆರೆಯಾಗಿದೆ. ಕೆಲವು ಸೆಕೆಂಡ್ ಗಳ ಕ್ಲಿಪ್‌ನಲ್ಲಿ ಇವರ ಅಂಗರಕ್ಷಕರು ತ್ರಿಚಕ್ರ ವಾಹನದ ಸುತ್ತ ನಡೆಯುತ್ತಿದ್ದರೂ. ಪಾಲ್ ರಿಕ್ಷಾ ಚಲಾಯಿಸುವ ಹಲವಾರು ಗಾರ್ಡ್‌ಗಳು ವಾಹನದ ಸುತ್ತ ಸುತ್ತುವರಿದಿದ್ದರು. ಇವರನ್ನು ನೋಡಿದ ಅಭಿಮಾನಿಗಳು ರಿಕ್ಷಾ ಸಮೀಪ ಹೋಗಲು ಪ್ರಯತ್ನಿಸುತ್ತಿದ್ದರೆ ಗಾರ್ಡ್‌ಗಳು ಅವರನ್ನು ತಡೆದರು.

ವಿಡಿಯೋದಲ್ಲಿ ಅಭಿಮಾನಿಗಳು ‘ಒಂದು ಫೋಟೋ, ಒಂದು ಫೋಟೋ ಪ್ಲೀಸ್’ ಎಂದು ಕೇಳುತ್ತಿರುವುದು ಸೆರೆಯಾಗಿದೆ. ಬಳಿಕ ಯಾರಾದರೂ ತಮ್ಮಿಂದ ಚಾಕೊಲೇಟ್ ಬಾರ್ ತೆಗೆದುಕೊಳ್ಳಲು ಉತ್ಸುಕರಾಗಿದ್ದಾರೆಯೇ ಎಂದು ಮಿಸ್ಟರ್ ಬೀಸ್ಟ್ ಕೇಳಿ ಚಾಕಲೇಟ್ ಬಾರ್ ವೊಂದನ್ನು ಅಭಿಮಾನಿಗಳತ್ತ ಬಿಸಾಡಿದ್ದು ಅಭಿಮಾನಿಯೊಬ್ಬರು ಅದನ್ನು ಅತ್ಯಂತ ಸಂತೋಷದಿಂದ ಕ್ಯಾಚ್ ಮಾಡಿದ್ದಾರೆ. ಅನೇಕರು ಫೋಟೋ ಕ್ಲಿಕ್ಕಿಸಲು ವಾಹನದ ಸಮೀಪ ಬರುತ್ತಿದ್ದರು.

ಲೋಗನ್ ಪಾಲ್ ಇದರ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದು, ನಾವು ಭಾರತದಲ್ಲಿ ಚಿಲ್ ಆಗಿದ್ದೇವೆ ಎನ್ನುವ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಈ ವಿಡಿಯೋ ಈಗಾಗಲೇ 8 ಲಕ್ಷ ವೀಕ್ಷಣೆ ಪಡೆದಿದೆ.
ಸೋಮವಾರ ಹಂಚಿಕೊಂಡಿರುವ ಈ ವಿಡಿಯೋ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ 41,000 ಲೈಕ್ಸ್ ಮತ್ತು ಎಂಟು ಲಕ್ಷ ವೀಕ್ಷಣೆಗಳನ್ನು ಸಂಗ್ರಹಿಸಿತ್ತು.

ಈ ಸುದ್ದಿಯನ್ನೂ ಓದಿ: Viral Video: ಕುಡಿದ ಮತ್ತಿನಲ್ಲಿದ್ದ ನಡುರಸ್ತೆಯಲ್ಲಿ ಪ್ಯಾಂಟ್‌ ಬಿಚ್ಚಿ ಕಾನ್ಸ್‌ಟೇಬಲ್‌ ಮಾಡಿದ್ದೇನು ಗೊತ್ತಾ? ಭಾರೀ ವೈರಲ್‌ ಆಗ್ತಿದೆ ಈ ವಿಡಿಯೊ