ಮುಂಬೈ: ಜೀವನ ಎನ್ನುವುದು ನೀರ ಮೇಲಿನ ಗುಳ್ಳೆಯಂತೆ ಕ್ಷಣಿಕವಾದುದು. ಯಾಕೆಂದರೆ ಸಾವು ಯಾವಾಗ ಬರುತ್ತದೆ ಎಂದು ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಈಗ ಕಣ್ಣಮುಂದೆ ಓಡಾಡಿಕೊಂಡು ಇದ್ದವರು ಒಂದೇ ಕ್ಷಣದಲ್ಲಿ ಇಲ್ಲವಾಗಬಹುದು. ಇಂತಹ ಹಲವು ಘಟನೆಗಳನ್ನು ನಾವು ನೋಡಿರುತ್ತೇವೆ. ಅದೇರೀತಿ ಇತ್ತೀಚೆಗೆ ಮುಬಾರಕ್ಪುರದಿಂದ ಹಳೆ ದೆಹಲಿಗೆ ಬಸ್ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ವರದಿಗಳ ಪ್ರಕಾರ, ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ತಲೆತಿರುಗಿ ಬಿದ್ದಿದ್ದಾರೆ ಎಂದು ಚಾಲಕ ಮತ್ತು ಕಂಡಕ್ಟರ್ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ವಿಡಿಯೊದಲ್ಲಿ ಬಸ್ನೊಳಗಿನ ದೃಶ್ಯವನ್ನು ಸೆರೆಹಿಡಿಯಲಾಗಿದೆ. ವ್ಯಕ್ತಿಯ ದೇಹವು ಯಾವುದೇ ಚಲನೆಯಿಲ್ಲದೆ ಬಸ್ಸಿನ ಸೀಟಿನ ಮೇಲೆ ಮಲಗಿರುವುದು ಕಾಣಿಸುತ್ತಿದೆ. ವೈದ್ಯರು ಅವರು ಹೃದಯಾಘಾತದಿಂದ ಸಾವನಪ್ಪಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ.
Delhi: मुबारकपुर से पुरानी दिल्ली की ओर जा रही बस में सवारी को आया हार्ट अटैक, ड्राइवर और कंडक्टर की मदद से युवक को हॉस्पिटल में पहुंचाया गया जहां डॉक्टर ने उसकी मृत् घोषित किया@latestly pic.twitter.com/B3ROnCFf8I
— Gagandeep Singh (@GagandeepNews) October 7, 2024
ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಜನರು ಸಾವನಪ್ಪುತ್ತಿರುವ ಘಟನೆಗಳು ಹೆಚ್ಚು ವರದಿಯಾಗುತ್ತಿದೆ. ಶನಿವಾರ ದೆಹಲಿಯಲ್ಲಿ ರಾಮಲೀಲಾ ಪ್ರದರ್ಶನದ ಕಾರ್ಯಕ್ರಮದ ಸಂದರ್ಭದಲ್ಲಿ ಭಗವಾನ್ ರಾಮನ ಪಾತ್ರ ಮಾಡುತ್ತಿದ್ದ 45 ವರ್ಷದ ವ್ಯಕ್ತಿಯೊಬ್ಬರು ವೇದಿಕೆಯ ಮೇಲೆ ಕುಸಿದು ಬಿದ್ದು ನಿಧನರಾಗಿದ್ದಾರೆ. ನಗರದ ಶಹದಾರಾ ಪ್ರದೇಶದ ವಿಶ್ವಕರ್ಮ ನಗರದಲ್ಲಿ ಈ ಘಟನೆ ನಡೆದಿದೆ. ಮೃತನನ್ನು ಸುಶೀಲ್ ಕೌಶಿಕ್ ಎಂದು ಗುರುತಿಸಲಾಗಿದ್ದು ಅವರು ವೃತ್ತಿಯಲ್ಲಿ ಪ್ರಾಪರ್ಟಿ ಡೀಲರ್ ಆಗಿದ್ದರು ಎನ್ನಲಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಕೆಫೆಯಲ್ಲಿ ಯುವತಿಯೊಂದಿಗೆ ಸಿಕ್ಕಿಬಿದ್ದ ಗೆಳೆಯನಿಗೆ ಗೆಳತಿ ಮಾಡಿದ್ದೇನು ನೋಡಿ!
ಅಲ್ಲದೇ ಇತ್ತೀಚೆಗೆ ಕೆಪಿಹೆಚ್ಬಿ ಪೊಲೀಸ್ ಠಾಣೆ ವ್ಯಾಪ್ತಿಯ ಜಾಕಿ ಶೋರೂಂನಲ್ಲಿ ಶಾಪಿಂಗ್ ಮಾಡುವಾಗ 37 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಜಾಕಿ ಶೋರೂಂನಲ್ಲಿ ಬಟ್ಟೆ ಖರೀದಿಸುವಾಗ ಕುಸಿದುಬಿದ್ದ ವ್ಯಕ್ತಿಯನ್ನು ಕಲಾಲ್ ಪ್ರವೀಣ್ ಗೌಡ್ ಎಂದು ಗುರುತಿಸಲಾಗಿದೆ. ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.