ಪಟನಾ: ಬಿಹಾರದ ಸಮಸ್ತಿಪುರದ ರೈಲು ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಹಳಿಗೆ ಬಿದ್ದಿರುವ ಘಟನೆ ವರದಿಯಾಗಿದೆ. ರೈಲು ಹತ್ತಲು ಪ್ರಯತ್ನಿಸುತ್ತಿದ್ದಾಗ ಕಾಲು ಜಾರಿ ರೈಲು ಹಳಿಗಳ ಮೇಲೆ ಬಿದ್ದಿದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾನೆ. ಈ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ(Viral Video).
ಏನಿದು ಘಟನೆ?
ಪ್ರಯಾಣಿಕನೊಬ್ಬ ಬಿಹಾರ ಸಂಪರ್ಕದ ಕ್ರಾಂತಿ ಎಕ್ಸ್‌ಪ್ರೆಸ್ ರೈಲು ಹತ್ತಲು ಪ್ರಯತ್ನಿಸುತ್ತಿದ್ದಾಗ ರೈಲು ಮತ್ತು ಪ್ಲಾಟ್‌ಫಾರ್ಮ್ ಗೋಡೆಯ ನಡುವೆ ಸಿಕ್ಕಿಹಾಕಿಕೊಂಡು ಟ್ರ್ಯಾಕ್ ಮೇಲೆ ಜಾರಿ ಬಿದ್ದಿದ್ದಾನೆ. ವ್ಯಕ್ತಿ ಅದೃಷ್ಟವಶಾತ್ ಪಾರಾಗಿದ್ದಾರೆ. ಸದ್ಯ ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ಇದ್ದು ನೋಡುಗರನ್ನು ಬೆಚ್ಚಿ ಬೀಳುವಂತೆಯೂ ಮಾಡಿದೆ.
ಈ ವ್ಯಕ್ತಿ ಚಲಿಸುತ್ತಿದ್ದ ರೈಲನ್ನೇರಲು ಪ್ರಯತ್ನಿಸಿದ್ದ. ಈ ವೇಳೆ ಆಯತಪ್ಪಿ ಹಳಿ ಪಕ್ಕ ಬಿದ್ದಿದ್ದಾನೆ. ರೈಲು ನಿಲ್ದಾಣದಿಂದ ಹೊರಡುತ್ತಿದ್ದಂತೆ, ಪ್ಲಾಟ್‌ಫಾರ್ಮ್ ಗೋಡೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಮಲಗಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ. ಆದರೆ ವ್ಯಕ್ತಿಗೆ ಅದೃಷ್ಟವತ್ ಯಾವುದೇ ಗಾಯಗಳಿಲ್ಲ. ಬಳಿಕ ಅಲ್ಲಿದ್ದ ಜನರು ಟ್ರ್ಯಾಕ್‌ಗಳಿಂದ ಆ ವ್ಯಕ್ತಿಯನ್ನು ಮೆಲಕ್ಕೆ ಎತ್ತಿದ್ದಾರೆ.
समस्तीपुर रेलवे स्टेशन पर युवक के ऊपर से गुजर गई ट्रेन, फिर भी एक खरोंच तक नहीं आई, बाल-बाल बची जान#samastipur #news pic.twitter.com/OLJIS5w57g
— Samastipur Town (@samastipurtown) December 21, 2024
ಮೊನ್ನೆಯಷ್ಟೇ ಎರಡು ಕೋತಿಗಳ ಕಾದಾಟದ ಕಾರಣದಿಂದ ಸಮಸ್ತಿಪುರ ಜಂಕ್ಷನ್ ರೈಲು ನಿಲ್ದಾಣ ದಲ್ಲಿ ಒಂದು ಗಂಟೆಗಳ ಕಾಲ ರೈಲು ಪ್ರಯಾಣ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಇಲ್ಲಿ ಈ ಘಟನೆ ನಡೆದಿರುವಂತದ್ದು. ಮೊನ್ನೆಯಷ್ಟೆ ಒಂದು ಬಾಳೆ ಹಣ್ಣಿನ ಸಲುವಾಗಿ ಎರಡು ಮಂಗಗಳು ಕಾದಾಟ ನಡೆಸಿದ್ದವು. ಕೋತಿಗಳ ನಡುವೆ ನಡೆದ ಜಗಳದಲ್ಲಿ ಒಂದು ಕೋತಿಯ ಹಿಡಿತದಿಂದ ಹಣ್ಣು ಕೆಳಗಿರುವ ಓವರ್ ಹೆಡ್ ತಂತಿಗಳ ಮೇಲೆ ಬಿದ್ದಿತ್ತು. ಆಗ ವೈರ್‌ಗಳ ನಡುವೆ ಘರ್ಷಣೆ ಉಂಟಾಗಿ ಶಾರ್ಟ್ ಸರ್ಕ್ಯೂಟ್ ಕೂಡ ಉಂಟಾಗಿತ್ತು.
ಈ ಸುದ್ದಿಯನ್ನೂ ಓದಿ: Viral News : ಕನ್ನಡ ಬರುವುದಿಲ್ಲವೇ? ಪರವಾಗಿಲ್ಲ ದೆಹಲಿಗೆ ಬನ್ನಿ… ಕನ್ನಡಿಗರನ್ನು ಕೆಣಕಿದ ಕಾರ್ಸ್ 24 ಸಿಇಓ- ಟ್ವೀಟ್ ಭಾರೀ ವೈರಲ್