ಮನೆ ಹಾಗೂ ಮನೆಯವರ ರಕ್ಷಣೆಗಾಗಿ ಕೆಲವರು ಮನೆಯಲ್ಲಿ ಸಿಸಿಟಿವಿ, ಹಿಡನ್ ಕ್ಯಾಮೆರಾಗಳನ್ನು ಅಳವಡಿಸುತ್ತಾರೆ. ಅದೇರೀತಿ ಇಲ್ಲೊಬ್ಬ ವ್ಯಕ್ತಿ ಪತ್ನಿಯ ರಕ್ಷಣೆಗಾಗಿ ಮನೆಯಲ್ಲಿ ಹಿಡನ್ ಕ್ಯಾಮೆರಾವನ್ನು ಅಳವಡಿಸಿ ನಂತರ ಅದರಲ್ಲಿ ನೋಡಬಾರದನ್ನು ನೋಡಿ ಆಘಾತಕ್ಕೊಳಗಾಗಿದ್ದಾನೆ. ವ್ಯಕ್ತಿಯೊಬ್ಬ ಅಳವಡಿಸಿದ ಹಿಡನ್ ಕ್ಯಾಮೆರಾದಲ್ಲಿ ಹೆಂಡತಿಯ ಕೆಟ್ಟ ಕೆಲಸಗಳು ರೆಕಾರ್ಡ್ ಆಗಿದ್ದು, ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್(Viral Video) ಆಗಿದೆ.
ಈ ವೈರಲ್ ವಿಡಿಯೊದಲ್ಲಿ, ಮಹಿಳೆ ನಾಲ್ಕು ಮಂದಿ ಪುರುಷರೊಂದಿಗೆ ʼಖಾಸಗಿ ಸಮಯʼ ಕಳೆದಿರುವ ದೃಶ್ಯ ಸೆರೆಯಾಗಿತ್ತು. ಪ್ರತಿದಿನ, ಅವಳು ತನ್ನ ಪತಿ ದೂರದೂರಿಗೆ ಕೆಲಸಕ್ಕೆ ಹೋದಾಗ ಪರ ಪುರುಷರನ್ನು ತನ್ನ ಮನೆಗೆ ಕರೆದು ಅವರ ಜೊತೆ ಸಮಯ ಕಳೆದಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
Husband hides camera in the living room while at work & he sees this… pic.twitter.com/frvUybPAM7
— non aesthetic things (@PicturesFoIder) October 10, 2024
ಈ ವಿಡಿಯೊ ನೋಡಿದ ಅನೇಕ ಬಳಕೆದಾರರು ಕಾಮೆಂಟ್ ವಿಭಾಗದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಪತಿಯ ಅನುಪಸ್ಥಿತಿಯಲ್ಲಿ ಇತರ ಪುರುಷರನ್ನು ತನ್ನ ಮನೆಗೆ ಕರೆತರುವುದು ನಾಚಿಕೆಗೇಡಿನ ಸಂಗತಿ ಎಂದು ಕೆಲವರು ಪತ್ನಿಯ ನಡವಳಿಕೆಯನ್ನು ಟೀಕಿಸಿದರೆ, ಕೆಲವರು ಪತಿ ಇಲ್ಲದ್ದಕ್ಕೆ ಮಹಿಳೆ ಇತರ ಪುರುಷರೊಂದಿಗೆ ಸಮಯ ಕಳೆದಿದ್ದಾಳೆ ಎಂದು ಹೇಳಿ ಅವಳನ್ನು ಸಮರ್ಥಿಸಿಕೊಂಡಿದ್ದಾರೆ. ಕೆಲವು ಬಳಕೆದಾರರು ನಗುವ ಎಮೋಜಿಗಳನ್ನು ಬಳಸಿಕೊಂಡು ಈ ಘಟನೆಯನ್ನು ತಮಾಷೆಯಾಗಿ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ:ಕಾರನ್ನು ಕದ್ದ ಕಳ್ಳ ʼಕ್ಷಮಿಸಿʼ ಎಂದು ಚೀಟಿ ಬರೆದು ಅಂಟಿಸಿದ್ಯಾಕೆ?
ಇದೇ ರೀತಿಯ ಪ್ರಕರಣವೊಂದು ಏಪ್ರಿಲ್ 2024ರಲ್ಲಿ ನಡೆದಿತ್ತು. ದಕ್ಷಿಣ ಕೆರೊಲಿನಾ ಪೊಲೀಸ್ ಅಧಿಕಾರಿ ರಯಾನ್ ಟೆರೆಲ್ ತನ್ನ ಹೆಂಡತಿಯ ಮೇಲೆ ಕಣ್ಣಿಡಲು ನಗರದ ಕಣ್ಗಾವಲು ಕ್ಯಾಮೆರಾಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ವರದಿಯ ಪ್ರಕಾರ, ಟೆರೆಲ್ ತಮ್ಮ ಹೆಂಡತಿಯ ಬಗ್ಗೆ ತಿಳಿಯಲು ಭದ್ರತಾ ಕ್ಯಾಮೆರಾಗಳನ್ನು ಬಳಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರಂಭದಲ್ಲಿ, ಅವರು ಪತ್ನಿಯ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವುದಕ್ಕಾಗಿ ಬಳಸಿರುವುದಾಗಿ ಹೇಳಿಕೊಂಡರು. ನಂತರ ಅವರಲ್ಲಿ ಬೇರೆ ಉದ್ದೇಶಗಳಿವೆ ಎಂಬುದು ಸ್ಪಷ್ಟವಾಗಿದೆ. ಟೆರೆಲ್ ಕಣ್ಗಾವಲು ಕ್ಯಾಮೆರಾವನ್ನು ಇತರ ಮೂರು ಸಂದರ್ಭಗಳು ಸೇರಿದಂತೆ ಅನೇಕ ಬಾರಿ ಬಳಸಿದ್ದಾರೆ ಎಂದು ಹೆಚ್ಚಿನ ತನಿಖೆಯಿಂದ ತಿಳಿದುಬಂದಿದೆ. ಇದರಿಂದಾಗಿ ಅವರನ್ನು ಹುದ್ದೆಯಿಂದ ಡಿಪ್ರೊಮೋಟ್ ಮಾಡಲಾಗಿತ್ತು.