ಈ ಸಲ ಫುಡ್ ಮತ್ತು ಡ್ರಿಂಕ್ಸ್ ಪ್ರಿಯರಿಗೆ ಕಿಕ್ಕೋ..ಕಿಕ್ ಮಾರ್ರೆ! ಮೊನ್ನೆ ತಾನೆ ರಮ್ ಜೊತೆ ಸೋನ್ ಪಾಪ್ಡಿ ಮತ್ತು ಗುಲಾಬ್ ಜಾಮೂನ್ ‘ಮೈತ್ರಿ’ ಮಾಡ್ಕೊಂಡು ಕಾಕ್ ಟೈಲ್ ರೆಪಿಸಿ ಕೊಟ್ಟ ಬೆನ್ನಲ್ಲೇ ಇದೀಗ, ಐಸ್ ಕ್ರೀಂ, ಕೋಕ್ ಮತ್ತು ರಮ್ ಕಾಂಬಿನೇಷನ್ ನ ಕಾಕ್ ಟೈಲ್ ರೆಸಿಪಿಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಮೂಲಕ (Viral Video) ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.
ಕ್ಲಾಸಿಕ್ ಡ್ರಿಂಕ್ ಎಂದೇ ಎಣ್ಣೆ ಪ್ರಿಯರ ವಲಯದಲ್ಲಿ ಫೇಮಸ್ ಆಗಿರೋ ಈ ರಮ್ ಗೆ ಕೊಲಾ ಮಿಕ್ಸ್ ಮಾಡೋದು ಕಾಮನ್, ಆದ್ರೆ ಇಲ್ಲೊಬ್ಬಾಕೆ ಫುಡ್ ಇನ್ ಪ್ಲ್ಯುಯೆನ್ಸರ್ ಈ ಕಾಂಬಿನೇಷನ್ ಅನ್ನು ಸ್ವಲ್ಪ ಚೇಂಜ್ ಮಾಡಿ ರಮ್ ಜೊತೆ ವೆನಿಲ್ಲಾ ಐಸ್ ಕ್ರಿಂ ಮಿಕ್ಸ್ ಮಾಡುವ ಮೂಲಕ ಹೊಸ ಡೆಸಾರ್ಟ್ ಪರಿಚಯಿಸಿದ್ದಾರೆ. ಈ ರಮ್-ಐಸ್ ಕ್ರೀಂ ‘ಮೈತ್ರಿ’ಗೆ ನೆಟ್ಟಿಗರು ಹೇಗೆ ರಿಯಾಕ್ಟ್ ಮಾಡಿದ್ದಾರೆಂಬುದನ್ನೂ ನಾವು ನಿಮಗೆ ಹೇಳಲಿದ್ದೇವೆ.
ಆಲ್ಕೋಹಾಲ್ ಉತ್ಪನ್ನಗಳಿಗೆ ಹೊಸ ಟಚ್ ನೀಡೋದ್ರಲ್ಲಿ ಫೇಮಸ್ ಆಗಿರೋ ಶಿಪ್ರ ಹಟ್ಟಂಗಡಿ ತನ್ನ ಇನ್ ಸ್ಟಾ ಖಾತೆಯಲ್ಲಿ ಈ ಐಸ್ ಕ್ರೀಂ ರಮ್ ರೆಸಿಪಿಯನ್ನು ಪರಿಚಯಿಸಿದ್ದಾರೆ. ಇದಕ್ಕೂ ಮೊದಲು ಶಿಪ್ರಾ ಅವರು ದೀಪಾವಳಿ ಸ್ಪೆಷಲ್ ರೆಸಿಪಿಯಾಗಿ ದೇಸೀ ಸ್ವೀಟ್ಸ್ ಆಗಿರುವ ಸೋನ್ ಪಾಪ್ಡಿ ಮತ್ತು ಗುಲಾಬ್ ಜಾಮೂನ್ ಗಳಿಗೆ ರಮ್ ರುಚಿ ತೋರಿಸಿ ಅವುಗಳ ಕಾಂಬಿನೇಷನ್ ನಿಂದ ಹೊಸ ರೆಸಿಪಿಯನ್ನು ಪರಿಚಯಿಸಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ರು!
ಈ ಸಲ ಶಿಪ್ರಾ ಅವರು ಈ ಮೈಕೊರೆಯುವ ಚಳಿಗೆ ರಮ್ ಗೆ ಬರೇ ಕೋಕ್ ಬೆರೆಸಿ ಸಿಪ್ ಮಾಡುವ ಬದಲು ಹೊಸ ವಿಧಾನವನ್ನು ಪರಿಚಯಿಸಿದ್ದಾರೆ. ಇಲ್ಲಿ ಆಕೆ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಶಿಪ್ರಾ ಅವರು, ಕೋಕ್ ಮತ್ತು ಓಲ್ಡ್ ಮಾಂಕ್ ರಮ್ ಕಾಂಬಿನೇಷನ್ ಗೆ ವೆನಿಲಾ ಐಸ್ ಕ್ರೀಂ ಮಿಕ್ಸ್ ಮಾಡಿದ್ದಾರೆ.
ಶಿಪ್ರಾ ಅವರ ಈ ಹೊಸ ರೆಸಿಪಿ ಸಿಂಪಲ್ ಆಗಿದ್ರೂ ಇದೊಂಥರಾ ಯುನೀಕ್ ಆಗಿದೆ. ಆಕೆ ಪ್ರಾರಂಭದಲ್ಲಿ 60 ಎಂ.ಎಲ್. ಓಲ್ಡ್ ಮಾಂಕ್ ರಮ್ ಅನ್ನು ಗ್ಲಾಸ್ ಗೆ ಸುರಿದಿದ್ದಾರೆ ಮತ್ತು ಅದಕ್ಕೆ ಕೋಕ್ ಮಿಕ್ಸ್ ಮಾಡಿದ್ದಾರೆ. ಆಮೇಲೆ ವೆನಿಲ್ಲಾ ಐಸಿ ಕ್ರೀಂ ಅನ್ನು ಇದಕ್ಕೆ ಸೇರಿಸಿದ್ದಾರೆ. ಅಲ್ಲಿಗೆ ವೆನಿಲ್ಲಾ-ಕೋಕ್ ಮಿಕ್ಸ್ ಡ್ ‘ಓಲ್ಡ್ ಮಾಂಕ್’ ರೆಡಿ ಟು ಡ್ರಿಂಕ್..! ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾಕ್ ಟೈಲ್ ಪ್ರಿಯರು ಇದಕ್ಕೆ ‘ಜೈ’ ಎಂದಿದ್ದಾರೆ. ಈ ವಿಡಿಯೋ ರಮ್ ಪ್ರಿಯರಿಗೆ, ಅದ್ರಲ್ಲೂ ಓಲ್ಡ್ ಮಾಂಕ್ ಪ್ರಿಯರನ್ನು ‘ಚಿಲ್’ ಆಗಿಸಿದೆ.
ಇದನ್ನೂ ಓದಿ: Chinmoy Krishna Das Brahmachari: ಬಾಂಗ್ಲಾದಲ್ಲಿ ಅರೆಸ್ಟ್ ಆಗಿರೋ ಚಿನ್ಮೋಯ್ ದಾಸ್ ಅವರನ್ನೇ ಉಚ್ಚಾಟಿಸಿದ ಇಸ್ಕಾನ್! ಅನೇಕರಿಂದ ವಿರೋಧ
ಈ ಸ್ಪೆಷಲ್ ರೆಸಿಪಿ ರೀಲ್ ನೂರಾರು ಲೈಕ್ಸ್ ಪಡ್ಕೊಂಡಿದೆ ಮತ್ತು ನೆಟ್ಟಿಗರ ಪ್ರಶಂಸೆಗೆ ಪಾತ್ರವಾಗಿದೆ. ‘ನಾನಿದನ್ನು ಈಗ್ಲೇ ಟ್ರೈ ಮಾಡ್ತೇನೆ..’ ಎಂದು ಒಬ್ಬ ಕಮೆಂಟ್ ಮಾಡಿದ್ರೆ, ಇನ್ನೊಬ್ರು, ‘ಕೋಕ್ ಜೊತೆ ಮಾಂಕ್ ಮಿಕ್ಸಿಂಗ್ ನೋಡಿದ್ದೇನೆ.. ಆದ್ರೆ ಇದೀಗ ಐಸ್ ಕ್ರೀಂ.. ನಾನಿದನ್ನು ಟ್ರೈ ಮಾಡ್ತೇನೆ..’ ಎಂದು ಕಮೆಂಟ್ ಮಾಡಿದ್ದಾರೆ.
ಒಟ್ಟಿನಲ್ಲಿ, ಈ ಸೋಷಿಯಲ್ ಮೀಡಿಯಾ ಬಂದ್ಮೇಲೆ ಫುಡ್ ಸೇರಿದಂತೆ ಎಲ್ಲದ್ರಲ್ಲೂ ಹೊಸದನ್ನು ಟ್ರೈ ಮಾಡೋರಿಗೆ ಒಳ್ಳೆ ಚಾನ್ಸ್ ಸಿಕ್ಕಿದಮಂತಾಗಿದೆ. ಮತ್ತು ಅವ್ರ ಈ ಪ್ರಯತ್ನ ‘ಕಾಯೋ, ಹಣ್ಣೋ..?’ ಎಂಬ ರಿಸಲ್ಟ್ ಆವಾಗ್ಲೇ ಸಿಕ್ಕಿಬಿಡುತ್ತೆ..!