Sunday, 1st December 2024

Viral Video: ಪಾಕಿಸ್ತಾನದ ಮತ್ತೊಬ್ಬ ಟಿಕ್ ಟಾಕ್ ಸ್ಟಾರ್ ಖಾಸಗಿ ವಿಡಿಯೊ‌ ಲೀಕ್; ಇದು ಪ್ರಚಾರದ ಗಿಮಿಕಾ…ಎಂದ ನೆಟ್ಟಿಗರು!

Viral Video

ಪಾಕಿಸ್ತಾನ : ಪಾಕಿಸ್ತಾನದ ಟಿಕ್ ಟಾಕ್ ಸ್ಟಾರ್ ಆಗಿರುವ ಮಿನಾಹಿಲ್ ಮಲಿಕ್ ಖಾಸಗಿ ವಿಡಿಯೊಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆದ ಬಳಿಕ  ಇದೀಗ ಪಾಕಿಸ್ತಾನದ ಮತ್ತೊಬ್ಬ ಟಿಕ್ ಟಾಕ್ ತಾರೆ ಇಮ್ಶಾ ರೆಹಮಾನ್ ಅವರ ಅಶ್ಲೀಲ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಲಿಕ್ ನಂತರ  ಇಮ್ಶಾ ಅವರ  ಖಾಸಗಿ ವಿಡಿಯೊಗಳು ವೈರಲ್(Viral Video) ಆದ ಕಾರಣ ಫಾಲೋವರ್ಸ್‌ಗಳನ್ನು ಸೆಳೆಯಲು ಉದ್ದೇಶಪೂರ್ವಕವಾಗಿ ಖಾಸಗಿ ವಿಡಿಯೊಗಳನ್ನು ಹರಿಬಿಡುತ್ತಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ.

ವಾಟ್ಸ್‌ಆ್ಯಪ್, ಟ್ವಿಟರ್ ಸೇರಿದಂತೆ ಹಲವಾರು ಸೋಶಿಯಲ್ ಮೀಡಿಯಾಗಳಲ್ಲಿ  ಇಮ್ಶಾ ಅವರ ಖಾಸಗಿ ವಿಡಿಯೊಗಳನ್ನು ಹರಿಬಿಡಲಾಗಿದೆ. ಇಮ್ಶಾ ಅವರು, ತಮ್ಮ  ಬಾಯ್ ಫ್ರೆಂಡ್ ಜೊತೆಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದ ವಿಡಿಯೊಗಳು ಲೀಕ್‌ ಹಾಕಿತ್ತು. ಈ ವಿಡಿಯೊವನ್ನು ಯಾರು ಸೋರಿಕೆ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ಮಲಿಕ್ ಅವರಂತೆಯೇ ಇಮ್ಶಾ ದುರದೃಷ್ಟವಶಾತ್ ಗೌಪ್ಯತೆ ಉಲ್ಲಂಘನೆಯ ಆರೋಪಕ್ಕೆ ಸಿಲುಕಿದ್ದಾರೆ. ಇದರಿಂದ ಮುಜುಗರಕ್ಕೊಳಗಾದ ಇಮ್ಶಾ ತಮ್ಮ ಟಿಕ್ ಟ್ಯಾಕ್ ಹಾಗೂ ಇನ್ಸ್ಟಾಗ್ರಾಂ ಖಾತೆಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ. ಮತ್ತು ಎಲ್ಲಿಯವರೆಗೆ ಈ ವಿಡಿಯೊ ವೈರಲ್ ಆಗಿರುತ್ತದೆಯೋ ಅಲ್ಲಿಯವರೆಗೆ ತನ್ನ ಸೋಶಿಯಲ್ ಮೀಡಿಯಾ ಖಾತೆಗಳನ್ನು ನಿಷ್ಕ್ರಿಯಗೊಳಿಸುವುದಾಗಿ ಬರೆದಿದ್ದಾರೆ.

ಪಾಕಿಸ್ತಾನದ ಟಿಕ್ ಟಾಕ್ ಸ್ಟಾರ್ ಆಗಿರುವ ಮಿನಾಹಿಲ್ ಮಲಿಕ್ ಈ ವರ್ಷದ ಅಕ್ಟೋಬರ್ ನಲ್ಲಿ ತನ್ನ ಗೆಳೆಯನೊಂದಿಗಿನ ಆತ್ಮೀಯ ಕ್ಷಣಗಳನ್ನು ಕಳೆಯುತ್ತಿರುವ  ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಲೀಕ್‌ ಆಗಿ  ವೈರಲ್ ಆಗಿತ್ತು. ಅವರು ಪ್ರಚಾರಕ್ಕಾಗಿ ತನ್ನ ವಿಡಿಯೊವನ್ನು ಸೋರಿಕೆ ಮಾಡಿದ್ದಾರೆ ಎಂದು ಅನೇಕರು ಅವರನ್ನು ಟ್ರೋಲ್ ಮಾಡಿದ್ದಾರೆ. ಇತರರು ಈ ಸಮಯದಲ್ಲಿ ಅವರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಅಂಬ್ಯುಲೆನ್ಸ್ ಏಕಾಏಕಿ ಸ್ಫೋಟ; ವಿಡಿಯೊ ಇದೆ

ವಿಡಿಯೊ  ವೈರಲ್ ಆದ ನಂತರ, ಪಾಕಿಸ್ತಾನದ ನಟಿ ಮಿಶಿ ಖಾನ್ ಮಲಿಕ್ ಅವರನ್ನು ಟೀಕಿಸಿದ್ದರು ಮತ್ತು ಖ್ಯಾತಿ ಗಳಿಸಲು ಅವರು “ಕೆಳಮಟ್ಟಕ್ಕೆ ಇಳಿದಿದ್ದಾರೆ” ಎಂದು ಆರೋಪಿಸಿದ್ದರು. ಕರೀನಾ ಕಪೂರ್ ಅವರು ನಟಿಸಿದ್ದ ಹೀರೋಯಿನ್ ಸಿನಿಮಾದಲ್ಲೂ ಇಂಥದ್ದೇ ದೃಶ್ಯವಿದೆ. ಮಿನಾಹಿಲ್ ಮಲಿಕ್ ಅವರ ಕೇಸ್ ಕೂಡ ಇದೇ ರೀತಿಯದ್ದಾಗಿತ್ತು ಎಂದು ಹೇಳಿದ್ದರು. “ಈ ಪ್ರಸಿದ್ಧ ವ್ಯಕ್ತಿಗಳು ಖ್ಯಾತಿ ಗಳಿಸಲು ಕೆಳಮಟ್ಟಕ್ಕೆ ಇಳಿದು ತಮ್ಮ ಕುಟುಂಬ, ಪೋಷಕರು ಮತ್ತು ಸಮಾಜವನ್ನು ಅವಮಾನಿಸುವುದನ್ನು ನೋಡುವುದು ನಾಚಿಕೆಗೇಡಿನ ಸಂಗತಿ. ಅವರು ಸೋಶಿಯಲ್ ಮೀಡಿಯಾಗಳನ್ನು ಬಳಸುವುದನ್ನು ನಿಷೇಧಿಸಬೇಕು” ಎಂದು ಖಾನ್ ಶೀರ್ಷಿಕೆಯಲ್ಲಿ ಬರೆದಿದ್ದಾರೆ.