ಲಖನೌ: ಸಾಮಾನ್ಯವಾಗಿ ಅಪರಾಧಿಗಳ ಕೈಗೆ ಕಬ್ಬಿಣದ ಕೈಕೋಳ ಧರಿಸಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುತ್ತಾರೆ. ಆದರೆ ಉತ್ತರ ಪ್ರದೇಶದ ಮೈನ್ಪುರಿಯ ರಸ್ತೆಯಲ್ಲಿ ಹಗ್ಗದಿಂದ ಕೈಕೋಳ ಧರಿಸಿದ ಕೈದಿಯೋರ್ವ ಹೆಲ್ಮೆಟ್ ಧರಿಸದೆ ಹಿಂಬಂದಿಯಲ್ಲಿ ಪೊಲೀಸ್ ಅಧಿಕಾರಿಯನ್ನು ಕೂರಿಸಿಕೊಂಡು ಬೈಕ್‍ನಲ್ಲಿ ಹೋಗುತ್ತಿರುವುದು ಕಂಡುಬಂದಿದೆ. ಮಾರ್ಗದಲ್ಲಿದ್ದ ಸಹ ಪ್ರಯಾಣಿಕರೊಬ್ಬರು ಈ ಘಟನೆಯನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪೊಲೀಸ್ ಹೆಲ್ಮೆಟ್ ಧರಿಸಿಕೊಂಡು ಅಪರಾಧಿಗೆ ಬೈಕ್ ಓಡಿಸುವಂತೆ ಹೇಳಿದ್ದಾರೆ ಎನ್ನಲಾಗಿದೆ. ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ತುಂಬಾ ಚಳಿ ಇರುವುದರಿಂದ ಪೊಲೀಸ್ ಅಧಿಕಾರಿ ಕೈದಿಗೆ ಬೈಕ್ ಓಡಿಸಲು ಹೇಳಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವರದಿಯಾಗಿದೆ. ಈ ವೈರಲ್ ವಿಡಿಯೊದಲ್ಲಿ ಪೊಲೀಸ್ ಹೆಲ್ಮೆಟ್ ಧರಿಸಿ ಹಿಂದೆ ಕುಳಿತಿದ್ದರೆ, ಅಪರಾಧಿ ತನ್ನ ಕೈಗಳನ್ನು ಹಗ್ಗದಿಂದ ಕಟ್ಟಿ ಹೆಲ್ಮೆಟ್ ಧರಿಸದೇ ರಸ್ತೆಯಲ್ಲಿ ಬೈಕ್ ಓಡಿಸಿದ್ದಾನೆ. ಈ ವಿಲಕ್ಷಣ ಘಟನೆಯನ್ನು ಪ್ರಯಾಣಿಕರೊಬ್ಬರು ರೆಕಾರ್ಡ್ ಮಾಡಿದ್ದಾರೆ.
#मैनपुरी: एक वायरल वीडियो में हथकड़ी लगे मुलजिम को सिपाही को बाइक पर बैठाकर पेशी के लिए ले जाते हुए देखा गया है। यह वीडियो थाना भौंगांव क्षेत्र का बताया जा रहा है, जिसमें मुलजिम खुद बाइक चला रहा है और पीछे सिपाही बैठा है। भौंगांव थाने का सिपाही वीडियो में दिख रहा है।… pic.twitter.com/XR7sHPuL6V
— UttarPradesh.ORG News (@WeUttarPradesh) December 13, 2024
ವಿಡಿಯೊ ಶುರುವಿನಲ್ಲಿ ಉತ್ತರ ಪ್ರದೇಶದ ರಸ್ತೆಯಲ್ಲಿ ಬೈಕ್‍ನಲ್ಲಿ ಕೈದಿ ಹಾಗೂ ಪೊಲೀಸ್ ಅಧಿಕಾರಿ ಹೋಗಿದ್ದಾರೆ. ಇದರ ಜೊತೆಗೆ ಬೈಕ್ ಓಡಿಸುತ್ತಿದ್ದ ಕೈದಿಯ ಕೈಗಳಿಗೆ ಹಗ್ಗ ಕಟ್ಟಿ ಹಿಂಬದಿಯಲ್ಲಿ ಕುಳಿತಿದ್ದ ಪೊಲೀಸ್ ಅಧಿಕಾರಿ ಆ ಹಗ್ಗವನ್ನು ತನ್ನ ಕೈಯಲ್ಲಿ ಹಿಡಿದುಕೊಂಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಕೆಲವು ನೆಟ್ಟಿಗರು ಈ ಪ್ರಕರಣಕ್ಕೆ ಪ್ರತಿಕ್ರಿಯಿಸಿ “ಇದರಲ್ಲಿ ಏನು ಸಮಸ್ಯೆ?” ಎಂದು ಬರೆದಿದ್ದಾರೆ. ಇತರರು ಕೈದಿಯ ಕೈಯಲ್ಲಿ ಬೈಕ್ ನೀಡುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:ಸ್ಪೀಡ್ ಬ್ರೇಕರ್‌ಗೆ ಡಿಕ್ಕಿ ಹೊಡೆದ ಸ್ಕೂಟರ್ ಸವಾರ; ಮುಂದೆ ಆಗಿದ್ದೇನು? ವಿಡಿಯೊ ನೋಡಿ
ಪೊಲೀಸ್ ಪೇದೆಯನ್ನು ಮೈನ್ಪುರಿಯ ಭೋಂಗಾವ್ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಎಂದು ಗುರುತಿಸಲಾಗಿದೆ. ಬೈಕ್ ಸವಾರಿ ಮಾಡುವ ಅಪರಾಧಿಯ ವಿವರಗಳು ಇಲ್ಲಿಯವರೆಗೆ ಮಾಧ್ಯಮಗಳಿಗೆ ತಿಳಿದುಬಂದಿಲ್ಲ.ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಇದನ್ನು ಗಮನಿಸಿದ ಮೈನ್ಪುರಿ ಪೊಲೀಸರು “ಸಂಬಂಧಪಟ್ಟ ವ್ಯಕ್ತಿಗೆ ತನಿಖೆ ನಡೆಸಲು ಮತ್ತು ಅಗತ್ಯ ಕ್ರಮ ತೆಗೆದುಕೊಳ್ಳಲು ನಿರ್ದೇಶಿಸಲಾಗಿದೆ” ಎಂದು ಬರೆದಿದ್ದಾರೆ.