ಅಸ್ಸಾಂನ ಮೋರಿಗಾಂವ್ ಜಿಲ್ಲೆಯ ಪೊಬಿತೋರಾ ವನ್ಯಜೀವಿ ಅಭಯಾರಣ್ಯದ ಬಳಿ ಭಾನುವಾರ ಬೈಕ್ ಸವಾರನನ್ನು ಘೇಂಡಾಮೃಗ ಬೆನ್ನಟ್ಟಿ ತುಳಿದು ಕೊಂದು ಹಾಕಿದೆ. ಬೈಕ್ ಸವಾರನನ್ನು ಕಮ್ರೂಪ್ ಮೆಟ್ರೋಪಾಲಿಟನ್ ಜಿಲ್ಲೆಯ ನಿವಾಸಿ 37 ವರ್ಷದ ಸದ್ದಾಂ ಹುಸೇನ್ ಎಂದು ಗುರುತಿಸಲಾಗಿದೆ. ಆತ ಅಭಯಾರಣ್ಯದ ಬಳಿಯ ರಸ್ತೆಯಲ್ಲಿ ತನ್ನ ಬೈಕ್ನಲ್ಲಿ ಹೋಗುತ್ತಿದ್ದಾಗ ಕಾಡಿನಿಂದ ಅಲೆದಾಡುತ್ತಿದ್ದ ಘೇಂಡಾಮೃಗವು ಅವನ ಬಳಿಗೆ ಬಂದಿದೆ. ನಂತರ ಅವನನ್ನು ಬೆನ್ನಟ್ಟಿ ತುಳಿದು ಸಾಯಿಸಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದ್ದು, ನೋಡುಗರನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ವೈರಲ್ ವಿಡಿಯೊದಲ್ಲಿ, ಹುಸೇನ್ ತನ್ನ ಬೈಕ್ನಲ್ಲಿ ಬರುತ್ತಿದ್ದಾಗ ಆತನ ಎದುರಿಗೆ ಬಂದ ಘೇಂಡಾಮೃಗವನ್ನು ನೋಡಿ ಆತ ಬೈಕ್ನಿಂದ ವೇಗವಾಗಿ ಇಳಿದು ಓಡಿದ್ದಾನೆ. ಆಗ ಘೇಂಡಾಮೃಗವು ಅವನನ್ನು ಬೆನ್ನಟ್ಟುತ್ತಾ ತೆರೆದ ಮೈದಾನಕ್ಕೆ ಬಂದಿದೆ. ಅಲ್ಲಿ ಪ್ರಾಣಿಯನ್ನು ಹೆದರಿಸುವ ಪ್ರಯತ್ನದಲ್ಲಿ ಸ್ಥಳೀಯರು ಕೂಗಿದ್ದಾರೆ. ಆದರೆ ಅವರ ಎಲ್ಲಾ ಪ್ರಯತ್ನಗಳು ವ್ಯರ್ಥವಾದವು.
Saddam Ali, who had an illegal house in Kachutoli, Assam killed by rhino. Despite repeated police orders to vacate govt land, he didn’t comply.
— Nandan Pratim Sharma Bordoloi (@NANDANPRATIM) September 29, 2024
During an eviction drive, as he tried to flee, a rhino chased and killed him. A tragic yet inevitable outcome of illegal encroachment. pic.twitter.com/MUiqXI2ynC
ಅದು ಅವನನ್ನು ತುಳಿದು ಕೊಂದಿದೆ. ನಂತರ, ಹುಸೇನ್ ತಲೆಯನ್ನು ಹೊಲದಲ್ಲಿ ಛಿದ್ರಮಾಡಿದ ಸ್ಥಿತಿಯಲ್ಲಿ ಕಂಡುಬಂದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ. “ಘೇಂಡಾಮೃಗವು ವನ್ಯಜೀವಿ ಅಭಯಾರಣ್ಯದಿಂದ ಹೊರಬಂದಿದೆ. ಘಟನೆಯ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ” ಎಂದು ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುವಾಹಟಿ ಬಳಿ ಇರುವ ಪೊಬಿತೋರಾ ವನ್ಯಜೀವಿ ಅಭಯಾರಣ್ಯವು ಭಾರತದಲ್ಲಿ ಅತಿ ಹೆಚ್ಚು ಒಂದು ಕೊಂಬಿನ ಘೇಂಡಾಮೃಗಗಳನ್ನು ಹೊಂದಿದೆ. ವಿಶ್ವ ಘೇಂಡಾಮೃಗ ದಿನದಂದು ಬಿಡುಗಡೆಯಾದ ಇತ್ತೀಚಿನ ಸರ್ಕಾರಿ ಅಂಕಿಅಂಶಗಳು 1980 ರ ದಶಕದಿಂದ ಘೇಂಡಾಮೃಗಗಳ ಸಂಖ್ಯೆ ಸುಮಾರು 170% ರಷ್ಟು ಹೆಚ್ಚಾಗಿದೆ. 1,500 ರಿಂದ 4,014 ಕ್ಕೆ ಏರಿದೆ.
ಇದನ್ನೂ ಓದಿ:ಡ್ರೆಸ್ ಸರಿಮಾಡಿಕೊಳ್ಳಲು ಹೋಗಿ ಏನೇನೋ ಆಗಿ ಟ್ರೋಲ್ಗೆ ಒಳಗಾದ ಬಿಗ್ಬಾಸ್ ಹುಡುಗಿ!
ಅಸ್ಸಾಂ ಭಾರತದಲ್ಲಿ ಘೇಂಡಾಮೃಗ ಸಂರಕ್ಷಣೆಯಲ್ಲಿ ದೀರ್ಘಕಾಲದಿಂದ ಮುಂಚೂಣಿಯಲ್ಲಿದೆ. ತನ್ನ ಅರಣ್ಯ ಸಿಬ್ಬಂದಿಯ ಸಮರ್ಪಣೆ ಮತ್ತು ಸ್ಥಳೀಯ ಸಮುದಾಯಗಳ ಬೆಂಬಲದ ಮೂಲಕ ಒಂದು ಶತಮಾನಕ್ಕೂ ಹೆಚ್ಚು ಕಾಲ ಈ ಪಾತ್ರವನ್ನು ನಿಭಾಯಿಸುತ್ತಿದೆ ಎನ್ನಲಾಗಿದೆ.