Sunday, 1st December 2024

Viral Video: ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಬಿರುಗಾಳಿ ಎಬ್ಬಿಸಿದೆ ಸಪ್ನಾ ಚೌಧರಿ ಹಾಡು; ಹೇಗಿದೆ ನೋಡಿ!

Viral Video

ಹರಿಯಾಣ: ನೃತ್ಯ, ಸಂಗೀತದ ಮೂಲಕ ಲಕ್ಷಾಂತರ ಜನಮನವನ್ನು ಗೆದ್ದಿರುವ ಹರಿಯಾನ್ವಿ ನೃತ್ಯಗಾರ್ತಿ (Haryanvi Dancer) ಸಪ್ನಾ ಚೌಧರಿ (Sapna Choudhary ) ಅವರ ಐದು ವರ್ಷಗಳ ಹಿಂದಿನ ಹಾಡೊಂದು ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಈ ಹಾಡು ಸಾಕಷ್ಟು ವೈರಲ್ (Viral Video) ಆಗುತ್ತಿದ್ದು, ಟ್ರೆಂಡಿಂಗ್ ಪಟ್ಟಿಯಲ್ಲಿ ಸೇರಿದೆ.

ಸಪ್ನಾ ಅವರ ಹೊಸ ಹಾಡು ಯೂಟ್ಯೂಬ್‌ನಲ್ಲಿ ಬಂದ ತಕ್ಷಣ ಅದು ಸಾಕಷ್ಟು ವೈರಲ್ ಆಗುತ್ತದೆ. ಹೀಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಅವರ ಅಭಿಮಾನಿಗಳ ಸಾಲು ನಿರಂತರ ಹೆಚ್ಚಾಗುತ್ತಿದೆ. ಇದೀಗ ಅವರ ಐದು ವರ್ಷದ ಹಿಂದಿನ ಹಳೆಯ ಹಾಡೊಂದು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಐದು ವರ್ಷಗಳ ಹಿಂದೆ ಬಿಡುಗಡೆಯಾದ ಸಪ್ನಾ ಚೌಧರಿ ಅವರ ‘ಬದ್ಲಿ- ಬದ್ಲಿ ಲಗೇ’ ಹಾಡು ಇಂದಿಗೂ ಹೆಚ್ಚಿನ ಜನರ ಹಾಟ್ ಫೆವರಿಟ್ ಆಗಿದೆ. ಈ ಹಾಡಿನಲ್ಲಿ ಸಪ್ನಾ ಅವರು ತಮ್ಮ ವಿಶೇಷ ದೇಸಿ ಶೈಲಿಯ ನೀಲಿ ಸಲ್ವಾರ್ ಕಮೀಜ್ ಮತ್ತು ದುಪಟ್ಟಾದಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರತಿ ಬಾರಿಯಂತೆ ಈ ಹಾಡಿನಲ್ಲೂ ಸಪ್ನಾ ಅವರ ಸ್ಟೈಲ್ ಮತ್ತು ನೃತ್ಯದ ಹೆಜ್ಜೆಗಳು ನೋಡುಗರನ್ನು ಹುಚ್ಚೆಬ್ಬಿಸುವಂತಿದೆ. ಈ ಹಾಡನ್ನು ಇಲ್ಲಿಯವರೆಗೆ 23 ಮಿಲಿಯನ್‌ಗಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಸಾಕಷ್ಟು ಕಾಮೆಂಟ್ ಗಳೂ ಬಂದಿವೆ.

ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಸಪ್ನಾ ಅವರ ‘ಜಾಲೆ 2’ ಹಾಡು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಕೇವಲ ಎರಡು ತಿಂಗಳಲ್ಲಿ ಈ ಹಾಡನ್ನು 14 ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ಹಾಡಿನಲ್ಲಿ ಸಪ್ನಾ ನೀಲಿ ಬಣ್ಣದ ಘಾಗ್ರಾ ಚೋಲಿಯಲ್ಲಿ ದೇಸಿ ಶೈಲಿಯಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರ ಮನ ಗೆದ್ದಿದ್ದಾರೆ. ಹರಿಯಾಣದ ಜಾನಪದ ನೃತ್ಯದ ವಿಶೇಷತೆಯಿಂದ ಸಪ್ನಾ ಅವರು ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿದ್ದಾರೆ.

ಸಪ್ನಾ ಚೌಧರಿ ಅವರ ಅಭಿಮಾನಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಅವರ ಶಕ್ತಿ, ದೇಸಿ ಶೈಲಿ ಮತ್ತು ಅತ್ಯುತ್ತಮ ಅಭಿನಯ ಎಲ್ಲ ವರ್ಗದ ಜನರಿಗೂ ಇಷ್ಟವಾಗಿದೆ. ಸಪ್ನಾ ಅವರ ಹಾಡುಗಳು ಹರಿಯಾಣದಲ್ಲಿ ಮಾತ್ರವಲ್ಲ ದೇಶದಾದ್ಯಂತ ಜನಪ್ರಿಯವಾಗಿವೆ.

ಸಪ್ನಾ ಚೌಧರಿ ಅವರ ಹೊಸ ವಿಡಿಯೋಗಾಗಿ ಸಾಕಷ್ಟು ಅಭಿಮಾನಿಗಳು ಕಾತರರಾಗಿರುತ್ತಾರೆ. ಅವರ ನೃತ್ಯ ಪ್ರದರ್ಶನದಲ್ಲಿ ಅವರ ಕಠಿಣ ಪರಿಶ್ರಮ ಮತ್ತು ದೇಸಿ ಸೌಂದರ್ಯವು ಸ್ಪಷ್ಟವಾಗಿ ಗೋಚರಿಸುತ್ತದೆ. ಇದು ಅವರ ಅಭಿಮಾನಿಗಳನ್ನು ಸೆಳೆಯುತ್ತದೆ.

Viral Video: ಗಿಡದೊಂದಿಗೆ ಡೇಟಿಂಗ್‌! ಖ್ಯಾತ ಯೂಟ್ಯೂಬರ್‌ ಕೊಟ್ಲು ʼನೆಟ್‌ ಲೋಕಕ್ಕೆʼ ಶಾಕ್‌!

ಸಪ್ನಾ ಚೌಧರಿ ಅವರು ತಮ್ಮ ಕೆಲಸ ಮತ್ತು ಕಠಿಣ ಪರಿಶ್ರಮದಿಂದ ಹರ್ಯಾನ್ವಿ ಸಂಗೀತ ಉದ್ಯಮದಲ್ಲಿ ವಿಶೇಷ ಛಾಪು ಮೂಡಿಸಿದ್ದಾರೆ. ಅವರು ತಮ್ಮ ನಗು, ನೃತ್ಯ ಮತ್ತು ದೇಸಿ ಶೈಲಿಯಿಂದಲೇ ಹೆಸರುವಾಸಿಯಾಗಿದ್ದಾರೆ.