Wednesday, 11th December 2024

Viral Video: ಡೆಂಟಿಸ್ಟ್‌ಗಿಂತಲೂ ಫಾಸ್ಟ್‌ ಈ ಗಿಳಿ! ಒಂದೇ ಸೆಕೆಂಡ್‌ನಲ್ಲಿ ಹುಳುಕು ಹಲ್ಲಿನಿಂದ ಮುಕ್ತಿ ಸಖತ್‌ ವೈರಲ್‌ ಆಗ್ತಿದೆ ಈ ವಿಡಿಯೊ

Viral Video

ಚೀನಾ: ಮೈ ತುಂಬಾ ಪಚ್ಚೆ ಬಣ್ಣ, ಕೆಂಪಾದ ಕೊಕ್ಕು, ಇದರ ಜೊತೆಗೆ ಮಾನವ ಮಾತನ್ನು ಅನುಕರಿಸುವ ವಿಲಕ್ಷಣ ಸಾಮರ್ಥ್ಯಕ್ಕೆ ಹೆಸರುವಾಸಿಯಾದ ಗಿಳಿಗಳು ಬಹಳ ಹಿಂದಿನಿಂದಲೂ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಈ ಬುದ್ಧಿವಂತ ಪಕ್ಷಿಗಳು ಕೆಲವು ಸಮಸ್ಯೆಯನ್ನು ಪರಿಹರಿಸುವ ಕೌಶಲ್ಯಗಳನ್ನು ಹೊಂದಿವೆಯಂತೆ. ಇತ್ತೀಚೆಗೆ ಚೀನಾದ ವಿಡಿಯೊವೊಂದರಲ್ಲಿ ಗಿಳಿಯೊಂದು ಚಿಕ್ಕ ಹುಡುಗನ ಹುಳುಕು ಹಲ್ಲನ್ನು ತೆಗೆಯುವ ದೃಶ್ಯ ಎಲ್ಲರ ಗಮನವನ್ನು ಸೆಳೆದಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಇತ್ತೀಚೆಗೆ ಚೀನಾದ ಫೋಶಾನ್‍ನಲ್ಲಿ ಸೆರೆಹಿಡಿಯಲಾದ ಈ ವಿಡಿಯೊದಲ್ಲಿ  ಗಿಳಿಯನ್ನು ಹಿಡಿದಿರುವ ಚಿಕ್ಕ ಹುಡುಗನನ್ನು ತೋರಿಸಲಾಗಿತ್ತು ಅದರಲ್ಲಿ ಹುಡುಗ ಬಾಯಿ ತೆರೆದು ಗಿಳಿಯನ್ನು ಹತ್ತಿರಕ್ಕೆ ತರುತ್ತಾನೆ. ಆಗ ಗಿಳಿ ಆತನ ಅಲಗಾಡುತ್ತಿರುವ ಹಲ್ಲನ್ನು ಹುಷಾರಾಗಿ ಹೊರತೆಗೆದು ಹತ್ತಿರದಲ್ಲಿದ್ದವರ ಕೈಗೆ ಹಾಕುತ್ತದೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.  

ಎಕ್ಸ್, ಡಿಸ್ಕವರ್ ಗುವಾಂಗ್ಝೌನಲ್ಲಿ ಪೋಸ್ಟ್ ಮಾಡಲಾದ ವಿಡಿಯೊಗೆ, “ಗಿಳಿ ದಂತವೈದ್ಯರಾಗಬಹುದೇ? ಮೇ 5 ರಂದು ಚೀನಾದ ಝೆಜಿಯಾಂಗ್ ಪ್ರಾಂತ್ಯದಲ್ಲಿ ಹುಡುಗನ ಹಲ್ಲನ್ನು ಅವನ ಸಾಕು ಗಿಳಿ ಕೇವಲ ಒಂದು ಸೆಕೆಂಡಿನಲ್ಲಿ ಹೊರತೆಗೆಯಿತು!” ಎಂದು ಶೀರ್ಷಿಕೆ ನೀಡಿದ್ದಾರೆ.

ಪಕ್ಷಿಗಳು ಈ ರೀತಿ ಮಾಡುವುದಕ್ಕೆ ಆಶ್ಚರ್ಯ ಪಡುವ ಅಗತ್ಯವಿಲ್ಲ. ಯಾಕೆಂದರೆ ಕಾಡಿನಲ್ಲಿ, ಈಜಿಪ್ಟಿನ ಪ್ಲೋವರ್‌ನಂತಹ ಪಕ್ಷಿಗಳು ಮೊಸಳೆಗಳೊಂದಿಗೆ ಸಹಜೀವನದ ಸಂಬಂಧವನ್ನು ಹೊಂದಿವೆಯಂತೆ. ಈ ಸಣ್ಣ ಪಕ್ಷಿಗಳು ಮೊಸಳೆಗಳ ಬಾಯಿಯನ್ನು ಪ್ರವೇಶಿಸಿ ಹಲ್ಲುಗಳ ನಡುವೆ ಸಿಲುಕಿರುವ ಆಹಾರ ಕಣಗಳು ಮತ್ತು ನೊಣಗಳನ್ನು ತೆಗೆದುಹಾಕುತ್ತವೆ. ಇದು ಮೊಸಳೆಗಳ ಹಲ್ಲುಗಳನ್ನು ಸ್ವಚ್ಛಗೊಳಿಸುತ್ತದೆ. ಮತ್ತು ಸೋಂಕುಗಳನ್ನು ತಡೆಯುತ್ತದೆ. ಇದರಿಂದ ಪ್ಲೋವರ್‌ಗೆ ಆಹಾರ ಕೂಡ ಸಿಗುತ್ತದೆ. ಮತ್ತು  ಇದು ಮೊಸಳೆಯ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆಯಂತೆ.

ಈ ಸುದ್ದಿಯನ್ನೂ ಓದಿ:ಶವಪೆಟ್ಟಿಗೆಯೊಳಗಿದ್ದ ಮಹಿಳೆ ಒಮ್ಮೆಲೆ ಕಣ್ಣು ಬಿಟ್ಳು! ಬೆಚ್ಚಿಬಿದ್ದ ಜನ- ವಿಡಿಯೊ ವೈರಲ್

ಚಿಕಾಗೋ ಎಕ್ಸೋಟಿಕ್ಸ್ ಅನಿಮಲ್ ಹಾಸ್ಪಿಟಲ್‍ನ ತಜ್ಞರು ತಿಳಿಸಿದ ಪ್ರಕಾರ, ಮಾನವ ಲಾಲಾರಸವು ರೋಗಕಾರಕಗಳನ್ನು ಹೊಂದಿರುತ್ತದೆ, ಅದು ಪಕ್ಷಿಗಳಿಗೆ ಹಾನಿಕಾರಕ ಮತ್ತು ವಿಷಕಾರಿಯಾಗಬಹುದು. ಆದ್ದರಿಂದ, ಪಕ್ಷಿಗಳು ತಮ್ಮ ಕೊಕ್ಕುಗಳನ್ನು ಮಾನವ ಬಾಯಿ ಅಥವಾ ಮೂಗಿನ ಬಳಿ ಇಡಲು ಬಿಡುವುದನ್ನು ತಪ್ಪಿಸಲು ಅವರು ಶಿಫಾರಸು ಮಾಡಿದ್ದಾರೆ.