ಕೆನಡಾದ ರೆಸ್ಟೋರೆಂಟ್ (Canada restaurant) ಹೊರಗೆ ವೈಟರ್ ಕೆಲಸಕ್ಕೆ ಸಾವಿರಾರು ಮಂದಿ ಸಂದರ್ಶನಕ್ಕೆ ನಿಂತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (social media) ಕಾಣಿಸಿಕೊಂಡಿದ್ದು, ಭಾರಿ ವೈರಲ್ (Viral Video) ಆಗಿದೆ. ಇದರಲ್ಲಿ ಹೆಚ್ಚಿನವರು ಭಾರತೀಯರು (Indian students) ಎನ್ನಲಾಗಿದೆ.
ಕೆನಡಾದ ತಂದೂರಿ ಫ್ಲೇಮ್ ಎಂಬ ರೆಸ್ಟೋರೆಂಟ್‌ನ ಹೊರಗೆ ಉದ್ಯೋಗ ಸಂದರ್ಶನಕ್ಕಾಗಿ ಸಾವಿರಾರು ವಿದ್ಯಾರ್ಥಿಗಳು ಅದರಲ್ಲೂ ಹೆಚ್ಚಾಗಿ ಹೆಚ್ಚಾಗಿ ಭಾರತೀಯರು ಸರತಿಯಲ್ಲಿ ಕಾಯುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಕೆನಡಾದಲ್ಲಿ ಉದ್ಯೋಗಕ್ಕಾಗಿ ಭಾರತೀಯ ವಿದ್ಯಾರ್ಥಿಗಳು ಎದುರಿಸುತ್ತಿರುವ ಹೋರಾಟಗಳನ್ನು ಈ ವಿಡಿಯೋದಲ್ಲಿ ಚಿತ್ರಿಸಲಾಗಿದೆ.
ಅಕ್ಟೋಬರ್ 3 ರಂದು ಎಕ್ಸ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಬ್ರಾಂಪ್ಟನ್‌ನಲ್ಲಿ ಹೊಸ ರೆಸ್ಟೋರೆಂಟ್ ತೆರೆಯಲಾಗಿದ್ದು, ಜಾಹೀರಾತು ಬಳಿಕ ಹೆಚ್ಚಿನ ಭಾರತೀಯರು ಸೇರಿ 3000 ವಿದ್ಯಾರ್ಥಿಗಳು ವೈಟರ್ ಕೆಲಸಕ್ಕೆ ಸಾಲುಗಟ್ಟಿ ನಿಂತಿದ್ದರು. ಕನಸುಗಳೊಂದಿಗೆ ಭಾರತದಿಂದ ಕೆನಡಾಕ್ಕೆ ತೆರಳುವ ವಿದ್ಯಾರ್ಥಿಗಳು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎನ್ನುವ ಸಾಲುಗಳೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ವಿಡಿಯೋದಲ್ಲಿ ಅಗಮವೀರ್ ಸಿಂಗ್ ಎಂಬ ವಿದ್ಯಾರ್ಥಿಯು ಸರತಿಯಲ್ಲಿ ಕಾಯುತ್ತಿದ್ದು, ನಾನು ಮಧ್ಯಾಹ್ನ ಬಂದಿದ್ದೇನೆ ಮತ್ತು ಸರತಿ ದೊಡ್ಡದಾಗಿತ್ತು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದೆ.. ಆದರೆ ಏನೂ ಆಗಲಿಲ್ಲ. ಇಲ್ಲಿ ಜನ ಸುಮ್ಮನೆ ನಿಂತಿದ್ದಾರೆ. ಇಲ್ಲಿ ಉದ್ಯೋಗ ಸಿಗುತ್ತೆ ಎಂದು ನಾನು ಭಾವಿಸುವುದಿಲ್ಲ ಎಂದರು.
Scary scenes from Canada as 3000 students (mostly Indian) line up for waiter & servant job after an advertisement by a new restaurant opening in Brampton.
— Megh Updates 🚨™ (@MeghUpdates) October 3, 2024
Massive unemployment in Trudeau's Canada? Students leaving India for Canada with rosy dreams need serious introspection! pic.twitter.com/fd7Sm3jlfI
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಒಬ್ಬ ಬಳಕೆದಾರರು ಕಾಮೆಂಟ್ ಮಾಡಿ, ಬ್ರಾಂಪ್ಟನ್‌ನಲ್ಲಿ ಹೋಟೆಲ್ ಮಾಣಿ ಮತ್ತು ಸೇವಕ ಉದ್ಯೋಗಗಳಿಗಾಗಿ 3,000 ವಿದ್ಯಾರ್ಥಿಗಳು ಮುಖ್ಯವಾಗಿ ಭಾರತೀಯರು ಸರದಿಯಲ್ಲಿ ಕಾಯುತ್ತಿರುವುದು ಆತಂಕಕಾರಿಯಾಗಿದೆ. ಇದು ಟ್ರುಡೊ ಕೆನಡಾದಲ್ಲಿ ನಿರುದ್ಯೋಗದ ಕಠೋರ ವಾಸ್ತವತೆಯನ್ನು ಪ್ರತಿಬಿಂಬಿಸುತ್ತದೆ. ಕನಸುಗಳಿಗಾಗಿ ಭಾರತವನ್ನು ತೊರೆಯುವವರಿಗೆ ಗಂಭೀರವಾದ ರಿಯಾಲಿಟಿ ಚೆಕ್ ಅಗತ್ಯವಿದೆ ಎಂದು ಹೇಳಿದ್ದಾರೆ.
Viral Video: 1582ರ ಕ್ಯಾಲೆಂಡರ್‌ನ ಅಕ್ಟೋಬರ್ ತಿಂಗಳಲ್ಲಿ ಹತ್ತು ದಿನಗಳೇ ಇರಲಿಲ್ಲ!
ಮತ್ತೊಬ್ಬರು ಕಾಮೆಂಟ್ ಮಾಡಿ, ಸಮಸ್ಯೆಯೆಂದರೆ ಅವರು ಅಲ್ಲಿ ಯಾವುದೇ ಕೆಲಸವನ್ನು ಸ್ವೀಕರಿಸುತ್ತಾರೆ. ಆದರೆ ಭಾರತದಲ್ಲಿ ಅದೇ ಕೆಲಸವನ್ನು ಮಾಡಲು ನಾಚಿಕೆಪಡುತ್ತಾರೆ. ಸಹಜವಾಗಿ, ಕೆಲಸದ ಪರಿಸ್ಥಿತಿಗಳು ಮತ್ತು ಪಾವತಿಗಳು ಭಾರತಕ್ಕಿಂತ ಕೆನಡಾದಲ್ಲಿ ಉತ್ತಮವಾಗಿವೆ ಎಂದಿದ್ದಾರೆ.