Tuesday, 10th December 2024

Viral Video: ಮೆಟ್ರೊದಲ್ಲಿ ಹಣ ನೀಡದ ಪ್ರಯಾಣಿಕನಿಗೆ ಬಟ್ಟೆ ಎತ್ತಿ ಖಾಸಗಿ ಭಾಗ ತೋರಿಸಿದ ಮಂಗಳಮುಖಿ! ವಿಡಿಯೊ ಇದೆ

Viral Video

ನವದೆಹಲಿ: ದೆಹಲಿ ಮೆಟ್ರೋ ಪ್ರತಿದಿನ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿರುತ್ತದೆ. ಇದೀಗ ಪ್ರಯಾಣಿಕರೊಬ್ಬರು ಹಣ ನೀಡಲು ನಿರಾಕರಿಸಿದ ಹಿನ್ನೆಲೆ ಮಂಗಳಮುಖಿ ಅವರನ್ನು ನಿಂದಿಸಿದ ವಿಚಾರಕ್ಕೆ ಸುದ್ದಿಯಾಗಿದೆ.  ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ವರದಿಗಳ ಪ್ರಕಾರ, ದೆಹಲಿ ಮೆಟ್ರೋದಲ್ಲಿ ಇಬ್ಬರು ಮಂಗಳಮುಖಿಯರು ಪ್ರಯಾಣಿಕರೊಬ್ಬರ ಬಳಿ ಬಂದು ಹಣ ನೀಡುವಂತೆ ಪೀಡಿಸಿದ್ದಾರೆ. ಆದರೆ ಆ ವ್ಯಕ್ತಿ ಹಣ ನೀಡಲು ನಿರಾಕರಿಸಿದ ಕಾರಣ ಅವರ ನಡುವೆ ವಾಗ್ವಾದ ನಡೆಯಿತು. ಆಗ ಮಂಗಳಮುಖಿಯಲ್ಲಿ ಒಬ್ಬರು ಅವರೊಂದಿಗೆ ಜಗಳವಾಡುತ್ತಾ ಬಟ್ಟೆಯನ್ನು ಎತ್ತಿ  ಖಾಸಗಿ ಭಾಗವನ್ನು ತೋರಿಸಿದ್ದಾರಂತೆ. ಇದನ್ನು  ರೈಲಿನೊಳಗೆ ಇದ್ದ ಪ್ರಯಾಣಿಕರೊಬ್ಬರು ರೆಕಾರ್ಡ್ ಮಾಡಿದ್ದಾರೆ.

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೊಗೆ ಸೋಶಿಯಲ್ ಮೀಡಿಯಾ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಕೆಲವರು ಈ ಘಟನೆಯನ್ನು ಟೀಕಿಸಿದ್ದಾರೆ ಮತ್ತು ಮೆಟ್ರೋ ರೈಲಿನಲ್ಲಿ ಪ್ರಯಾಣಿಕರಿಗೆ ಉಪದ್ರವವನ್ನು ನೀಡುವ ಮಂಗಳಮುಖಿಯರ  ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ವೈರಲ್ ವಿಡಿಯೊಗೆ ಪ್ರತಿಕ್ರಿಯಿಸಿದ ಬಳಕೆದಾರರೊಬ್ಬರು, “ಇವರು ಈಗ ಎಲ್ಲೆಡೆ ಕಾಣಿಸಿಕೊಳ್ಳಲು ಪ್ರಾರಂಭಿಸಿದ್ದಾರೆ – ರೈಲುಗಳು, ಬಸ್ಸುಗಳು, ರೆಡ್ ಲೈಟ್ ಏರಿಯಾ ಅಲ್ಲದೇ ಈಗ  ಮೆಟ್ರೋದಲ್ಲಿಯೂ … ಇದು ಹೀಗೆ ಮುಂದುವರಿದರೆ, ಶೀಘ್ರದಲ್ಲೇ ನಾವು ಏರ್ ಇಂಡಿಯಾ ಮತ್ತು ಇಂಡಿಗೊದಲ್ಲಿಯೂ ಇಂತವರನ್ನು ನೋಡುತ್ತೇವೆ. ಇವರಿಗೆ ಹಣ ನೀಡದಿದ್ದರೆ ಏನು ಮಾಡಲೂ ಹಿಂದೆ ಸರಿಯುವುದಿಲ್ಲ” ಎಂದು ಹೇಳಿದ್ದಾರೆ.

“ಈ ಮಂಗಳಮುಖಿಯರನ್ನು ಮೆಟ್ರೋ ಒಳಗೆ ಬರಲು ಏಕೆ ಅನುಮತಿ ನೀಡಿದ್ದಾರೆ ಎಂದು ಅರ್ಥವಾಗುತ್ತಿಲ್ಲ ಅವರು ಅಲ್ಲಿ ಅವ್ಯವಸ್ಥೆಯನ್ನು ಉಂಟುಮಾಡುತ್ತಾರೆ ಮತ್ತು ಅಲ್ಲಿದ್ದ ಪುರುಷರಿಗೆ ತೊಂದರೆ ನೀಡುತ್ತಾರೆ” ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.

ಇದನ್ನೂ ಓದಿ:ಜರ್ಮನ್ ಫ್ಲೀ ಮಾರ್ಕೆಟ್‍ನಲ್ಲಿ ಸಿಕ್ತು ದೇವನಾಗರಿ ಲಿಪಿಯ ಪ್ರಾಚೀನ ‘ಪಂಚಾಂಗ’; ಇದರ ವಿಶೇಷತೆ ಏನ್‌ ಗೊತ್ತಾ? ನೆಟ್ಟಿಗರು ಹೇಳಿದ್ದೇನು?

“ಇದು ನಿಜವಾಗಿಯೂ ಭಯಾನಕ ಕೃತ್ಯ. ಮೆಟ್ರೋದಲ್ಲಿ ಈ ರೀತಿ ವರ್ತಿಸುವ ಜನರನ್ನು ತಕ್ಷಣ ಹಿಡಿಯಬೇಕು. ದೆಹಲಿ ಮೆಟ್ರೋದಲ್ಲಿ ಸಿಐಎಸ್ಎಫ್ ಸಿಬ್ಬಂದಿ ಎಲ್ಲಿದ್ದರು? ಅವರು ತಕ್ಷಣದ ಕ್ರಮ ತೆಗೆದುಕೊಳ್ಳಬೇಕಾಗಿತ್ತು” ಎಂದು ಮೂರನೇ ಬಳಕೆದಾರರು ಬರೆದಿದ್ದಾರೆ.