ಹೊಸದಿಲ್ಲಿ: ಮಹಿಳೆಯೊಬ್ಬರು ಬೈಕ್ ಸವಾರನೊಬ್ಬನ ಬೈಕ್ ಮೇಲೆ ಅಂಟಿಸಿದ ‘ಹಿಂದೂ’ ಸ್ಟಿಕ್ಕರ್ ಅನ್ನು ತೆಗೆಯುವಂತೆ ವಿನಂತಿಸಿದ ವಿಚಿತ್ರ ಘಟನೆ ನಡೆದಿದ್ದು, ಅದರ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಮಹಿಳೆ ತನ್ನ ಕಾರಿಗಾಗಿ ಕಾಯುತ್ತಿದ್ದಾಗ ಈ ಘಟನೆ ನಡೆದಿದ್ದು, ಧಾರ್ಮಿಕ ಅಭಿವ್ಯಕ್ತಿ ಮತ್ತು ವೈಯಕ್ತಿಕ ಹಕ್ಕುಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳನ್ನು ಹುಟ್ಟು ಹಾಕಿದೆ.
ವೈರಲ್ ವಿಡಿಯೊದಲ್ಲಿ ಮಹಿಳೆ ರಸ್ತೆ ಬದಿಯಲ್ಲಿ ತನ್ನ ಕಾರಿಗಾಗಿ ಕಾಯುತ್ತಾ ನಿಂತಿದ್ದಾಗ ಅಲ್ಲಿಗೆ ಬೈಕ್‌ವೊಂದು ಬಂದು ನಿಂತಿದೆ. ಆ ಬೈಕ್‌ನಲ್ಲಿ ಅಂಟಿಸಿದ ಸ್ಟಿಕ್ಕರ್ ಅನ್ನು ಗಮನಿಸಿದ ನಂತರ ಮಹಿಳೆ ಬೈಕ್ ಸವಾರನ ಬಳಿ ಬಂದು ʼʼನೀವು ಹಿಂದೂ ಅಲ್ಲ. ನೀವು ಸಾರ್ವತ್ರಿಕ ವ್ಯಕ್ತಿ… ಅದನ್ನು ತೆಗೆಯಿರಿ” ಎಂದು ಹೇಳಿದ್ದಾರೆ.
How would you have responded to this woman? pic.twitter.com/KdFiEmlpSf
— THE SKIN DOCTOR (@theskindoctor13) December 12, 2024
ಮಹಿಳೆ ಅವರನ್ನು ಮತ್ತಷ್ಟು ಪ್ರಶ್ನಿಸುತ್ತಾ, “ಹೇಳಿ, ನೀವು ಹಿಂದೂ ಎಂದು ಏಕೆ ಬರೆದಿದ್ದೀರಿ?” ಎಂದಾಗ ಬೈಕ್ ಸವಾರ ತಾನು ಹಿಂದೂ ಅದಕ್ಕೆ ಎಂದು ತನ್ನ ಗುರುತನ್ನು ದೃಢಪಡಿಸಿದ್ದಾರೆ. ಮಹಿಳೆ ಪಟ್ಟುಹಿಡಿದು, ಸ್ಟಿಕ್ಕರ್ ಅನ್ನು ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ ಮತ್ತು ಅದಕ್ಕೆ ತಾತ್ವಿಕ ವಿವರಣೆಯನ್ನು ನೀಡಿದ್ದಾರೆ.
ಕ್ರಿಶ್ಚಿಯನ್, ಸಿಖ್, ಮುಸ್ಲಿಂ ಮತ್ತು ಹಿಂದೂಗಳಂತಹ ಧಾರ್ಮಿಕ ಹೆಸರುಗಳು ರಾಜಕೀಯ ಸೃಷ್ಟಿಗಳಾಗಿವೆ ಎಂದು ಹೇಳುವ ಮೂಲಕ ಮಾತು ಮುಂದುವರಿಸಿದ ಮಹಿಳೆ, “ಹಿಂದೂ ಎನ್ನುವುದು ಅಷ್ಟು ಮುಖ್ಯವಾಗಿದ್ದರೆ ದೇವರು ನಿಮ್ಮ ಹಣೆಯ ಮೇಲೆ ‘ಓಂ’ ಎಂದು ಕೆತ್ತಿ ಕಳುಹಿಸುತ್ತಿರಲಿಲ್ಲವೇ?” ಎಂದು ಹೇಳಿದ್ದಾರೆ. ಈ ರೀತಿಯ ಹಣೆಪಟ್ಟಿಗಳು ವ್ಯಕ್ತಿಗಳನ್ನು ನಿರ್ಬಂಧಿಸುತ್ತವೆ ಎಂದು ವಾದಿಸಿದ ಮಹಿಳೆ “ನೀವು ಸಾರ್ವತ್ರಿಕ ಜೀವಿ” ಎಂಬ ಗುರುತನ್ನು ಸ್ವೀಕರಿಸುವಂತೆ ಒತ್ತಾಯಿಸಿದ್ದಾರೆ. ಈ ವಿಷಯವನ್ನು ಮತ್ತಷ್ಟು ಎಳೆಯಲು ಇಷ್ಟಪಡದ ಬೈಕ್ ಸವಾರ ಸೌಜನ್ಯದಿಂದ ಸ್ಟಿಕ್ಕರ್ ಅನ್ನು ತೆಗೆದುಹಾಕುವುದಾಗಿ ಭರವಸೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: ಸ್ಪೀಡ್ ಬ್ರೇಕರ್‌ಗೆ ಡಿಕ್ಕಿ ಹೊಡೆದ ಸ್ಕೂಟರ್ ಸವಾರ; ಮುಂದೆ ಆಗಿದ್ದೇನು? ವಿಡಿಯೊ ನೋಡಿ
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಿಂದೂ ಧರ್ಮದ ವಿರುದ್ಧ ಅವರ ಹೇಳಿಕೆಗಳು ಮತ್ತು ದೇವರನ್ನು ಉಲ್ಲೇಖಿಸುವುದನ್ನು ಗಮನಿಸಿ ಇದನ್ನು ಅನೇಕರು ಆಕ್ಷೇಪಾರ್ಹವೆಂದು ಪರಿಗಣಿಸಿದ್ದಾರೆ. ವಿಪರ್ಯಾಸವೆಂದರೆ, ಬೈಕ್ ಸವಾರ ತನ್ನ ನಂಬಿಕೆಯ ಬಗ್ಗೆ ಪ್ರಶ್ನಿಸಿದಾಗ ಮಹಿಳೆ ತಾನು ಕೂಡ ಹಿಂದೂ ಎಂದು ಒಪ್ಪಿಕೊಂಡಿದ್ದರು. ಅನೇಕ ನೆಟ್ಟಿಗರು ಇದರಿಂದ ಗೊಂದಲಕ್ಕೊಳಗಾಗಿದ್ದಾರೆ.