ಭೋಪಾಲ್: ಮಧ್ಯಪ್ರದೇಶದ (Madhya Pradesh) ರೇವಾ (Rewa) ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ತನ್ನ ಪತಿಯ ಮೊದಲ ಪತ್ನಿಯ ಮೇಲೆ 50ಕ್ಕಿಂತಲೂ ಹೆಚ್ಚು ಸಲ ಚೂರಿಯಿಂದ ಇರಿದು (Woman stabs husband’s first wife) ಆಕೆಯನ್ನು ಗಂಭೀರವಾಗಿ ಗಾಯಗೊಳಿಸಿರುವ ಭೀಕರ ಘಟನೆಯೊಂದು ವರದಿಯಾಗಿದೆ. ಈ ಘಟನೆಯ ಮೈನಡುಗಿಸುವ ವಿಡಿಯೋ(Viral Video) ಸಹ ಇದೀಗ ಎಲ್ಲೆಡೆ ಹರಿದಾಡುತ್ತಿದ್ದು, ಕೃತ್ಯದ ಭೀಕರತೆ ಇದರಲ್ಲಿ ಸೆರೆಯಾಗಿದೆ.
ತನ್ನ ಪತಿಯ ಮೊದಲನೇ ಪತ್ನಿಯ ಮೇಲೆ ಯದ್ವಾ ತದ್ವಾ ಚೂರಿಯಿಂದ ಇರಿದಾಕೆಯನ್ನು ಮಾನ್ಸಿ ಎಂದು ಗುರುತಿಸಲಾಗಿದ್ದು, ಈ ರೀತಿ ಚೂರಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಜಯಾ ಎಂದು ಗುರುತಿಸಲಾಗಿದೆ.
पति की पहली पत्नी को बार-बार चाकू से गोदा, "पैरों से कुचला" "सौतन बनी शैतान!
— MANOJ SHARMA LUCKNOW UP🇮🇳🇮🇳🇮🇳 (@ManojSh28986262) November 3, 2024
दहला देगा यह मामला !!
रीवा जिले में एक महिला ने अपने पति की पहली पत्नी पर चाकू से एक के बाद एक कई वार किए। जिससे वह गंभीर रूप से घायल हो गई। आरोपी महिला ने दहला देने वाली वारदात को अंजाम दिया है !!… pic.twitter.com/NydB9IH8nt
ಸ್ಥಳೀಯ ಪೊಲೀಸರು ಹೇಳುವ ಪ್ರಕಾರ, 22 ವರ್ಷ ಪ್ರಾಯದ ಮಾನ್ಸಿ ಹಾಗೂ 26 ವರ್ಷ ಪ್ರಾಯದ ಜಯಾ ರಾಮ್ ಬಾಬು ವರ್ಮಾ ಎಂಬಾತನನ್ನು ವಿವಾಹವಾಗಿದ್ದರು. ಈ ದುರ್ಘಟನೆ ಅ.31ರ ದೀಪಾವಳಿ ದಿನ ನಡೆದಿದ್ದು, ಮಾನ್ಸಿ ಮತ್ತು ಜಯಾ ನಡುವೆ ಯಾವುದೋ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದು ಬಳಿಕ ಅದು ಗಂಭೀರ ಸ್ವರೂಪವನ್ನು ಪಡೆದುಕೊಂಡು ಮಾನ್ಸಿ ಚೂರಿಯಿಂದ ಜಯಾಳನ್ನು ಮನಬಂದಂತೆ ಇರಿದು ಘಾಸಿಗೊಳಿಸಿದ್ದಾಳೆ.
ಈ ಘಟನೆಯ ವಿಡಿಯೋ ಒಂದು ಹರಿದಾಡುತ್ತಿದ್ದು, ಇದರಲ್ಲಿರುವಂತೆ ಜಯಾಳ ಪಕ್ಕದಲ್ಲಿ ನಿಂತಿರುವ ಮಾನ್ಸಿ ರಕ್ತದ ಮಡುವಿನಲ್ಲಿ ಬಿದ್ದಿರುವ ಜಯಾಳನ್ನು ಬೈಯುತ್ತಾ ಕಾಲಿನಿಂದ ಒದಿಯುತ್ತಿರುವುದು ರೆಕಾರ್ಡ್ ಆಗಿದೆ. ತಕ್ಷಣವೇ ಜಯಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಪರಿಸ್ಥಿತಿ ಚಿಂತಾಜನಕವಾಗಿದೆ ಎಂಬ ಮಾಹಿತಿಯನ್ನು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಈ ಘಟನೆಯ ಮಾಹಿತಿಯ ಪಡೆದ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಆರೋಪಿ ಮಾನ್ಸಿಯನ್ನು ವಶಕ್ಕೆ ಪಡೆದುಕೊಂಡು ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್ಗಳಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಜಯಾ ರಾಮ್ ಬಾಬುವನ್ನು 2019ರಲ್ಲಿ ವಿವಾಹವಾಗಿದ್ದರು, ಆದರೆ ಜಯಾಳ ಅನಾರೋಗ್ಯದ ಕಾರಣದಿಂದಾಗಿ ರಾಮ್ ಬಾಬು 2021ರಲ್ಲಿ ಮಾನ್ಸಿಯನ್ನು ವಿವಾಹವಾಗಿದ್ದನು.
‘ರಾಮ್ ಬಾಬುವಿನ ಮೊದಲ ಪತ್ನಿ ಜಯಾ ಆಗಾಗ್ಗೆ ಅನಾರೋಗ್ಯಕ್ಕೊಳಗಾಗುತ್ತಿದ್ದ ಕಾರಣ ರಾಮ್ ಬಾಬು ಮಾನ್ಸಿಯನ್ನು ಮದುವೆಯಾಗಿದ್ದ. ಈ ಘಟನೆಗೆ ಸಂಬಂಧಿಸಿದಂತೆ ನಾವು ಸಂತ್ರಸ್ತೆಯ ಹೆಳಿಕೆಗಾಗಿ ಕಾಯುತ್ತಿದ್ದೇವೆ, ಇದರಿಂದ ನಮ್ಮ ತನಿಖೆಗೆ ಇನ್ನಷ್ಟು ಬಲ ಬರಲಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ಉದಿತ್ ಮಿಶ್ರಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: ವಿಪಕ್ಷಗಳ ದೂರವಾಣಿ ಕದ್ದಾಲಿಸಿದ ಆರೋಪ; ಮಹಾರಾಷ್ಟ್ರ ಡಿಜಿಪಿ ರಶ್ಮಿ ಶುಕ್ಲಾ ವರ್ಗಾವಣೆಗೆ ಆದೇಶ