Wednesday, 11th December 2024

Viral Video: ಅಶ್ಲೀಲ ಭಂಗಿಯಲ್ಲಿ ಯೋಗಾಸನ; ಯೋಗ ಶಿಕ್ಷಕ ಅನ್ಸಾರಿ ವಿರುದ್ಧ ಹಿಂದೂ ಸಂಘಟನೆಗಳ ಆಕ್ರೋಶ

Viral Video

ನವದೆಹಲಿ: ‘ಅಂತಾರಾಷ್ಟ್ರೀಯ ಯೋಗ ಶಿಕ್ಷಕ’ ಎಂಬ ಬಿರುದನ್ನು ಹೊಂದಿರುವ ಸುಹೇಲ್ ಅನ್ಸಾರಿ ತಮ್ಮ ಪ್ರಚೋದನಕಾರಿ ಮತ್ತು ಅನುಚಿತ ವಿಡಿಯೊಗಳಿಂದಾಗಿ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿರುವ ಅನ್ಸಾರಿ ಯೋಗ ಕಲಿಸುವ ನೆಪದಲ್ಲಿ ಮಹಿಳಾ ವಿದ್ಯಾರ್ಥಿಗಳನ್ನು, ಮುಖ್ಯವಾಗಿ ಹಿಂದೂ ಯುವತಿಯರನ್ನು ಲೈಂಗಿಕವಾಗಿ ಶೋಷಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಅವರು ಅಶ್ಲೀಲವಾಗಿ ತಮ್ಮ ವಿದ್ಯಾರ್ಥಿಗಳಿಗೆ ಯೋಗ ಕಲಿಸುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿ ವಿವಾದಕ್ಕೆ ಕಾರಣವಾಗಿದೆ.

ಸುಹೇಲ್ ಅನ್ಸಾರಿ ಅವರ ಅಶ್ಲೀಲ ವಿಡಿಯೊಗಳು ಸೋಶಿಯಲ್ ಮಿಡಿಯಾ ಪ್ಲಾಟ್‍ಫಾರ್ಮ್‍ಗಳಲ್ಲಿ ವೈರಲ್ ಆದಾಗ ಮಾರ್ಚ್‍ನಲ್ಲಿ ಮೊದಲ ಬಾರಿಗೆ ಟೀಕೆಗೆ ಗುರಿಯಾಗಿದ್ದರು. ಯೋಗದ ಭಂಗಿಗಳನ್ನು ಪ್ರದರ್ಶಿಸುವ ವಿಡಿಯೊಗಳಲ್ಲಿ ಅನ್ಸಾರಿ ತಮ್ಮ ಮಹಿಳಾ ವಿದ್ಯಾರ್ಥಿಗಳ ದೇಹವನ್ನು ಅನುಚಿತವಾಗಿ ಸ್ಪರ್ಶಿಸುವುದನ್ನು ಈ ವಿಡಿಯೊದಲ್ಲಿ ತೋರಿಸಲಾಗಿತ್ತು. ದೇಹದ ಖಾಸಗಿ ಭಾಗಗಳು ಮತ್ತು ಲೈಂಗಿಕ ಭಂಗಿಗಳನ್ನು ಎತ್ತಿ ತೋರಿಸುವ ಆಕ್ಷೇಪಾರ್ಹವಾದ ಈ ವಿಡಿಯೊಗಳನ್ನು ನೋಡಿದ ವೀಕ್ಷಕರಲ್ಲಿ ಆಕ್ರೋಶ ಹೆಚ್ಚಿದೆ.

ಆದರೆ ಈ ಘಟನೆಯ ನಂತರವೂ ಅನ್ಸಾರಿ ಅವರ ಇನ್ಸ್ಟಾಗ್ರಾಮ್ ಫಾಲೋವರ್ಸ್‍ಗಳ ಸಂಖ್ಯೆ 144,000ಕ್ಕಿಂತ ಹೆಚ್ಚಾಗಿದೆ. ಬಾಗೇಶ್ವರ ಧಾಮದ ಪಂಡಿತ್ ಧೀರೇಂದ್ರ ಶಾಸ್ತ್ರಿ ಸೇರಿದಂತೆ ಪ್ರಮುಖ ಹಿಂದೂ ನಾಯಕರು ಅನ್ಸಾರಿ ಅವರ ನಡವಳಿಕೆಯನ್ನು ಸಾರ್ವಜನಿಕವಾಗಿ ಖಂಡಿಸಿದಾಗ ಜನಾಕ್ರೋಶ ಮತ್ತಷ್ಟು ಉಲ್ಬಣಗೊಂಡಿದೆ. ಅನ್ಸಾರಿ ಹಿಂದೂ ಮಹಿಳೆಯರನ್ನು ಮುಸ್ಲಿಂ ಪುರುಷರೊಂದಿಗೆ ಮದುವೆಯಾಗುವಂತೆ ಬಲವಂತಪಡಿಸಿದ್ದಾರೆ ಎಂದು ಶಾಸ್ತ್ರಿ ಆರೋಪಿಸಿದ್ದಾರೆ, “ಸುಹೇಲ್ ಎಂಬ ಯೋಗ ಶಿಕ್ಷಕನು ಯುವತಿಯರನ್ನು ಬಲೆಗೆ ಬೀಳಿಸಿ ಮುಸ್ಲಿಂ ಪುರುಷರೊಂದಿಗೆ ನಿಕಾಹ್ ಮಾಡುತ್ತಾನೆ. ಈಗಾಗಲೇ 4 ಹಿಂದೂ ಹೆಣ್ಣುಮಕ್ಕಳು ಇದಕ್ಕೆ ಬಲಿಯಾಗಿದ್ದಾರೆ. ಭಾರತದಲ್ಲಿ ಇಂತಹ ಘಟನೆಗಳು ನಡೆದಾಗ ನನ್ನ ರಕ್ತ ಕುದಿಯುತ್ತದೆ” ಎಂದು ಅವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರೀಲ್‍ಗಾಗಿ ಹಾವಿನೊಂದಿಗೆ ಸರಸ! ಜೀವ ಕಳೆದುಕೊಂಡ ಯುವಕ

ತೀವ್ರ ಟೀಕೆಗೆ ಗುರಿಯಾದ ಹಿನ್ನೆಲೆಯಲ್ಲಿ ಸುಹೇಲ್ ಅನ್ಸಾರಿ ಕ್ಷಮೆಯಾಚಿಸುವ ವಿಡಿಯೊವನ್ನು ಈ ಹಿಂದೆ ಬಿಡುಗಡೆ ಮಾಡಿದ್ದರು. ಅದರಲ್ಲಿ ತಮ್ಮ ವರ್ತನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು ಮತ್ತು ಅವರ ನಡವಳಿಕೆಯನ್ನು ಸರಿಪಡಿಸಿಕೊಳ್ಳುವ ಭರವಸೆ ನೀಡಿದ್ದರು. “ಯಾರ ಭಾವನೆಗಳನ್ನು ನೋಯಿಸುವುದು ನನ್ನ ಉದ್ದೇಶವಲ್ಲ. ನಾನು ಜನರ ಭಾವನೆಗಳಿಗೆ ನೋವುಂಟು ಮಾಡಿದ್ದರೆ ನನ್ನ ಹೃದಯಾಂತರಾಳದಿಂದ ಕ್ಷಮೆಯಾಚಿಸುತ್ತೇನೆ” ಎಂದು ಅವರು ಹೇಳಿದ್ದರು. ಆದರೆ ಈ ಕ್ಷಮೆಯಾಚನೆಯ ನಂತರವೂ ಅನ್ಸಾರಿ ‘ಸುಧಾರಿತ ಯೋಗ ತರಬೇತಿ’ ನೆಪದಲ್ಲಿ ಅಶ್ಲೀಲ ವಿಷಯವನ್ನು ಪೋಸ್ಟ್ ಮಾಡುವುದನ್ನು ಮತ್ತೆ ಶುರು ಮಾಡಿದ್ದಾರೆ ಎಂದು ಇತ್ತೀಚಿನ ತನಿಖೆಯಿಂದ ತಿಳಿದುಬಂದಿದೆ.