Sunday, 13th October 2024

Viral Video: ನಶೆಯಲ್ಲಿ ತೇಲುತ್ತಿರುವ ಯುವತಿಯರು! ಆತಂಕಕಾರಿ ವಿಡಿಯೊ

Viral Video

ಮಾದಕ ದ್ರವ್ಯ (Narcotics) ಸೇವಿಸಿ ನಶೆಯಲ್ಲಿ ಯುವತಿಯರು ತೇಲಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ (Viral Video) ಆಗಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅನೇಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಕೇರಳದ ಮಲ್ಲಪುರಂ (Mallapuram, Kerala) ನಗರದಲ್ಲಿ ನಡೆದ ಘಟನೆ ಎನ್ನಲಾಗಿದೆ.

ಯುವತಿಯರು ಡ್ರಗ್ಸ್ ನ ಅಮಲಿನಲ್ಲಿ ತೇಲುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು. ಆರಂಭದಲ್ಲಿ ವಿದೇಶದಿಂದ ಬಂದವರಾಗಿರಬಹುದು ಎಂದು ಊಹಿಸಲಾಗಿತ್ತು. ಆದರೆ ವಿಡಿಯೋದಲ್ಲಿ ಒಬ್ಬ ವ್ಯಕ್ತಿಯನ್ನು “ಮ್ಲೇಚಾ” ಎಂದು ಕರೆಯಲಾಗಿದ್ದು, ಇದು ಸಾಮಾನ್ಯವಾಗಿ ಭಾರತದಲ್ಲಿ ವಿದೇಶಿಯರಿಗೆ ಅಥವಾ ಹಿಂದೂಗಳಲ್ಲದವರಿಗೆ ಬಳಸಲಾಗುವ ಅವಹೇಳನಕಾರಿ ಪದವಾಗಿದೆ.

ಈ ಘಟನೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕೇರಳ ರಾಜ್ಯ ದಲ್ಲಿ ಮಹಿಳೆಯರನ್ನು ದುರ್ಬಳಕೆ ಮಾಡಿಕೊಳ್ಳುವ ಆರೋಪಗಳ ನಡುವೆಯೇ ವೈರಲ್ ಆಗಿರುವ ಈ ವಿಡಿಯೋ ಆತಂಕವನ್ನು ಹುಟ್ಟುಹಾಕಿದೆ. ಸಾಮಾಜಿಕ ಜಾಲತಾಣದ ಬಳಕೆದಾರರು ಇದಕ್ಕೆ ವ್ಯಾಪಕ ಖಂಡನೆಯನ್ನು ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್ ಮಾದಕವಸ್ತು ಸೇವನೆಯ ನೈತಿಕ ಮತ್ತು ಸಾಂಸ್ಕೃತಿಕ ಪ್ರಭಾವವನ್ನು ಪ್ರಶ್ನಿಸುತ್ತದೆ ಎಂದು ಅನೇಕರು ಕಾಮೆಂಟ್ ವಿಭಾಗದಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಕೇರಳದಲ್ಲಿನ ಸೂಕ್ಷ್ಮ ಸಮಸ್ಯೆಗಳ ಚಿತ್ರಣವನ್ನು ನಿರೂಪಿಸಿರುವ ಕೇರಳ ಸ್ಟೋರಿ ಚಿತ್ರವು ವ್ಯಾಪಕ ಟೀಕೆ ಮತ್ತು ಪ್ರಶಂಸೆಗೆ ಒಳಗಾಗಿತ್ತು. ಇದನ್ನು ಹೇಳಿಕೊಂಡು ಸಾಮಾಜಿಕ ಮಾಧ್ಯಮ ಬಳಕೆದಾರರು ವಿಶೇಷವಾಗಿ ಎಕ್ಸ್‌ ನಲ್ಲಿ ಕೇರಳದ ಯುವಕರ ಮೇಲೆ ಇಂತಹ ಘಟನೆಗಳ ಪ್ರಭಾವದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

Viral News : ಪತಿ ನಿತ್ಯ ಸ್ನಾನ ಮಾಡುತ್ತಿಲ್ಲವೆಂದು ಮದುವೆಯಾದ 40 ದಿನದಲ್ಲೇ ವಿಚ್ಛೇದನ ಕೋರಿದ ಮಹಿಳೆ!

ಅನೇಕರು ಘಟನೆಯ ಕುರಿತು ತನಿಖೆಗೆ ಒತ್ತಾಯಿಸಿದ್ದು, ಯುವಕರಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಸೇವನೆಯ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.