Sunday, 1st December 2024

Voluntary Provident Fund: ವಿಪಿಎಫ್‌‌ನಲ್ಲಿ ಯಾರು ಹೂಡಿಕೆ ಮಾಡಬಹುದು? ಇದರಿಂದ ಏನು ಪ್ರಯೋಜನ?

Voluntary Provident Fund

ಸರ್ಕಾರಿ ನೌಕರರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇದರಲ್ಲಿ ಭವಿಷ್ಯ ನಿಧಿ (Provident Fund) ಅಥವಾ ಪಿಎಫ್ ಉದ್ಯೋಗಿಗಳಿಗೆ ಇರುವ ಕಡ್ಡಾಯ ಹೂಡಿಕೆಯಾಗಿದೆ. ಇದರಲ್ಲಿ ಈಗ ಉದ್ಯೋಗಿಗಳಿಗೆ ಆಯ್ಕೆಯೂ ಇದೆ. ಅಂದರೆ ಉದ್ಯೋಗಿಗಳು ಸ್ವಇಚ್ಛೆಯಿಂದ ಭವಿಷ್ಯ ನಿಧಿಯಲ್ಲಿ (Voluntary Provident Fund) ಹೂಡಿಕೆ ಮಾಡಬಹುದಾಗಿದೆ. ಈ ಯೋಜನೆಯೇ ಸ್ವಯಂ ಪ್ರೇರಿತ ಭವಿಷ್ಯ ನಿಧಿ (VPF).

ಸ್ವಯಂ ಪ್ರೇರಿತ ಭವಿಷ್ಯ ನಿಧಿಯ ಮುಖ್ಯ ಪ್ರಯೋಜನವೆಂದರೆ ಕಡಿಮೆ ಅಪಾಯ ಮತ್ತು ಹೆಚ್ಚಿನ ಆದಾಯವನ್ನು ನೀಡುವ ಸರ್ಕಾರಿ ಬೆಂಬಲಿತ ಉಳಿತಾಯ ಯೋಜನೆ ಇದಾಗಿದೆ. ಸ್ವಯಂ ಪ್ರೇರಿತ ಭವಿಷ್ಯ ನಿಧಿ ಯೋಜನೆ ಎಂದರೇನು, ಇದರಲ್ಲಿ ದೊರೆಯುವ ಬಡ್ಡಿ ಎಷ್ಟು, ಯಾರು ಇದಕ್ಕೆ ಅರ್ಹರು ಎಂಬ ಮಾಹಿತಿ ಇಲ್ಲಿದೆ.

ಸ್ವಯಂ ಪ್ರೇರಿತ ಭವಿಷ್ಯ ನಿಧಿ ಎಂದರೇನು?

ವೃತ್ತಿ ಜೀವನ ಪ್ರಾರಂಭಿಸುವಾಗಲೇ ಭವಿಷ್ಯದ ಬಗ್ಗೆ ಯೋಚಿಸಬೇಕು. ಕೆಲಸದ ಸಮಯದಲ್ಲಿ ನಿಯಮಿತ ಆದಾಯವಿರುತ್ತದೆ. ಇದರಿಂದ ನಿರಂತರವಾಗಿ ಸ್ವಲ್ಪ ಹಣವನ್ನು ಹೂಡಿಕೆ ಮಾಡುವುದು ಬಹಳ ಮುಖ್ಯ.

ಉದ್ಯೋಗಿಗಳಿಗೆ ಭವಿಷ್ಯ ನಿಧಿಯು ಕಡ್ಡಾಯ ಹೂಡಿಕೆಯಾಗಿದೆ. ಆದರೆ ಸ್ವಯಂ ಪ್ರೇರಿತ ಭವಿಷ್ಯ ನಿಧಿಯು ಉದ್ಯೋಗಿ ತನ್ನ ಭವಿಷ್ಯ ನಿಧಿ (PF) ಖಾತೆಗೆ ಸ್ವಯಂಪ್ರೇರಿತವಾಗಿ ನೀಡುವ ಕೊಡುಗೆಯಾಗಿದೆ. ಈ ಕೊಡುಗೆಯು ಉದ್ಯೋಗಿ ತನ್ನ ಇಪಿಎಫ್‌ಗೆ ನೀಡಿದ ಕೊಡುಗೆಯ ಶೇಕಡಾ 12 ರಷ್ಟು ಹೆಚ್ಚುವರಿಯಾಗಿರುತ್ತದೆ. ಇದರಲ್ಲಿ ಗರಿಷ್ಠ ಕೊಡುಗೆಯು ಮೂಲ ವೇತನ ಮತ್ತು ತುಟ್ಟಿಭತ್ಯೆಯ ಶೇ. 100ರಷ್ಟು ಆಗಿರುತ್ತದೆ.

Voluntary Provident Fund

ವಿಪಿಎಫ್ ಗೆ ಯಾರು ಅರ್ಹರು?

ಸಂಘಟಿತ ವಲಯದಲ್ಲಿ ಕೆಲಸ ಮಾಡುವವರು ವಿಪಿಎಫ್‌ಗೆ ಅರ್ಹರಾಗಿರುತ್ತಾರೆ. ವಿಪಿಎಫ್‌ಗಾಗಿ ಒಬ್ಬ ವ್ಯಕ್ತಿಯು ಇಪಿಎಫ್ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಕೆಲಸ ಮಾಡಬೇಕು.

ಅರ್ಜಿ ಸಲ್ಲಿಸುವುದು?

ವಿಪಿಎಫ್ ಗೆ ಅರ್ಜಿ ಸಲ್ಲಿಸುವವರು ಕಂಪನಿಯ ಮಾನವ ಸಂಪನ್ಮೂಲ ವಿಭಾಗಕ್ಕೆ ಬರವಣಿಗೆ ಅಥವಾ ಇ- ಮೇಲ್ ಮೂಲಕ ತಿಳಿಸಬೇಕು. ಇದಲ್ಲದೆ ವಿಪಿಎಫ್ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು. ವಿಪಿಎಫ್ ಕೊಡುಗೆಯಾಗಿ ಅವರ ಮಾಸಿಕ ವೇತನದಿಂದ ಕಡಿತಗೊಳಿಸಲಾಗುವ ಮೊತ್ತವನ್ನು ಸಹ ನೀವು ನಿರ್ದಿಷ್ಟಪಡಿಸಬೇಕಾಗುತ್ತದೆ.

ಬಡ್ಡಿ ದರ ಎಷ್ಟು?

ವಿಪಿಎಫ್ ಇಪಿಎಫ್‌ನ ಉಪವಿಭಾಗವಾಗಿದೆ. ಹೀಗಾಗಿ ಇಪಿಎಫ್‌ನ ದರದಲ್ಲೇ ಬಡ್ಡಿಯನ್ನು ನೀಡಲಾಗುತ್ತದೆ. 2023- 24 ರ ಆರ್ಥಿಕ ವರ್ಷದ ಇಪಿಎಫ್ ಬಡ್ಡಿ ದರವನ್ನು ಶೇ. 8.1ಕ್ಕೆ ನಿಗದಿಪಡಿಸಲಾಗಿದೆ. ಆದ್ದರಿಂದ ಅದೇ ಶೇಕಡಾವಾರು ವಿಪಿಎಫ್ ನಲ್ಲಿ ಮಾತ್ರ ಲಭ್ಯವಿದೆ.

PAN Card Update: ಪಾನ್ ಕಾರ್ಡ್ ತಿದ್ದುಪಡಿಗೆ ಇಲ್ಲಿದೆ ಸುಲಭ ವಿಧಾನ

ಮೆಚ್ಯುರಿಟಿ ಅವಧಿ ಎಷ್ಟು?

ವಿಪಿಎಫ್ ಗೆ ಕನಿಷ್ಠ ಲಾಕ್-ಇನ್ ಅವಧಿಯು 5 ವರ್ಷಗಳು. ಮುಕ್ತಾಯದ ಸಮಯದಲ್ಲಿ ಪಡೆಯುವ ಮೊತ್ತವು ಹೂಡಿಕೆ ಮಾಡುವ ಮೊತ್ತವನ್ನು ಅವಲಂಬಿಸಿರುತ್ತದೆ.