Saturday, 14th December 2024

ಉಪರಾಷ್ಟ್ರಪತಿ ಚುನಾವಣೆ: ಇಂದು ವಿಪಕ್ಷಗಳ ಸಭೆ

ನವದೆಹಲಿ: ದೇಶದ ಉಪರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿ ಘೋಷಣೆ ಯಾದ ಬೆನ್ನಲ್ಲೇ, ವಿಪಕ್ಷಗಳ ನಾಯಕರು ಅಭ್ಯರ್ಥಿ ಆಯ್ಕೆಗೆ ಇಂದು ಸಭೆ ಸೇರಲಿದ್ದಾರೆ.

ಸಂಸತ್‌ನ ಮಳೆಗಾಲದ ಅಧಿವೇಶನಕ್ಕೆ ಸಂಬಂಧಿಸಿ ಸರ್ಕಾರ ಸರ್ವಪಕ್ಷ ಸಭೆ ನಡೆಸಲಿದೆ. ಬಳಿಕ, ವಿಪಕ್ಷ ನಾಯಕರು ಒಟ್ಟಾಗಿ ಉಪರಾಷ್ಟ್ರಪತಿ ಚುನಾವಣೆ ಕುರಿತು ಚರ್ಚಿಸ ಲಿದ್ದಾರೆ. ನಮ್ಮ ಪಕ್ಷದ ಕಡೆಯಿಂದ ಯಾವುದೇ ಆಭ್ಯರ್ಥಿ ಇರುವುದಿಲ್ಲ ಎಂದು ಕಾಂಗ್ರೆಸ್ ಈಗಾಗಲೇ ಸ್ಪಷ್ಟಪಡಿಸಿದೆ.

ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನಕರ್ ಅವರ ಹೆಸರು ಘೋಷಣೆ ಯಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಜಗದೀಪ್ ಧನಕರ್ ಹೆಸರು ಪ್ರಕಟಿಸಿ ದ್ದಾರೆ. ನಾಮಪತ್ರ ಸಲ್ಲಿಸಲು ಜು.19 ಕೊನೆಯ ದಿನವಾಗಿದ್ದು, ಆಗಸ್ಟ್‌ 6 ರಂದು ಚುನಾವಣೆ ನಡೆಯಲಿದೆ.