Friday, 13th December 2024

ವಿಶ್ವದೆಲ್ಲೆಡೆ ಯುದ್ಧ ಮಾಡುವ ನೀತಿ ಬದಲಾಗಿದೆ: ಅಜಿತ್ ದೋವಲ್

ಹೈದರಾಬಾದ್: ವಿಶ್ವದೆಲ್ಲೆಡೆ ಯುದ್ಧ ಮಾಡುವ ನೀತಿ ಸಂಪೂರ್ಣ ಬದಲಾಗಿದೆ. ಸಮಾಜ ವಿಭಜಿಸಿ, ದೇಶಕ್ಕೆ ನಷ್ಟ ಉಂಟು ಮಾಡುವುದು ಹೊಸ ತಂತ್ರ ಆರಂಭವಾಗಿದೆ ಅಂತಾ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ.

ಹೈದ್ರಾಬಾದ್ ನಲ್ಲಿ ಪ್ರೊಬೇಷನರಿ ಐಪಿಎಸ್ ಅಧಿಕಾರಿಗಳ ಸಮಾರಂಭದಲ್ಲಿ ಮಾತ ನಾಡಿ, ದ ಅಜಿತ್ ದೋವಲ್, ರಾಜಕೀಯ ಹಾಗೂ ಮಿಲ್ಟ್ರಿಯ ಗುರಿಗಳನ್ನು ಈಡೇರಿಸಿ ಕೊಳ್ಳಲು ಇನ್ಮುಂದೆ ಯುದ್ಧದಿಂದ ಸಾಧ್ಯವಾಗುವುದಿಲ್ಲ. ವಾಸ್ತವವಾಗಿ, ದೇಶಗಳ ಮಧ್ಯೆ ನಡೆಯುವ ಯುದ್ಧಗಳು ತುಂಬಾ ದುಬಾರಿ.

ಪ್ರತಿಯೊಂದು ರಾಷ್ಟ್ರವು ಇದರಂದ ಲಾಭ ಪಡೆಯಲು ಸಾಧ್ಯವಿಲ್ಲ. ಅಲ್ಲದೆ ಫಲಿತಾಂಶ ಯಾವಾಗಲೂ ಅನಿಶ್ಚಿತತೆ ಯಿಂದ ಕೂಡಿರುತ್ತದೆ. ಹೀಗಾಗಿ, ಬದಲಾದ ವೇಳೆಯಲ್ಲಿ ಯುದ್ಧದ ತಂತ್ರಗಳು ಸಂಪೂರ್ಣ ವಿಭಿನ್ನವಾಗಿವೆ. ಈಗ ಸಮಾಜ ಒಡೆಯುವ ಕೆಲಸಕ್ಕೆ ಕೈ ಹಾಕಲಾಗುತ್ತದೆ. ಸಮಾಜ ಒಡೆಯುವ ಮೂಲಕ ದೇಶಕ್ಕೆ ನಷ್ಟ ಉಂಟು ಮಾಡಲಾಗು ತ್ತದೆ ಎಂದು ತಿಳಿಸಿದರು.

ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ನಾಗರಿಕ ಅತ್ಯಂತ ಪ್ರಾಮುಖ್ಯತೆ ಪಡೆದುಕೊಳ್ಳು ತ್ತಾನೆ. ಹೀಗಾಗಿ, ನಾಲ್ಕನೇ ತಲೆಮಾರಿನ ಯುದ್ಧ ತಂತ್ರವನ್ನು ಅಳವಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಚೀನಾ, ಮಯನ್ಮಾರ್, ಬಾಂಗ್ಲಾದೇಶದ ಜೊತೆಗೆ 15 ಸಾವಿರ ಕಿಲೋ ಮೀಟರ್ ನಷ್ಟು ಗಡಿ ರೇಖೆ ಹೊಂದಿದೆ. ದೇಶದ ಗಡಿಯಲ್ಲಿ ಅನೇಕಾನೇಕ ಸಮಸ್ಯೆಗಳಿವೆ. ಈ ಎಲ್ಲ ಸಮಸ್ಯೆಗಳ ಜೊತೆಗೆ ದೇಶದ ಗಡಿ ರಕ್ಷಣೆ ಮಾಡುವ ಹೆಚ್ಚಿನ ಜವಾಬ್ದಾರಿಯನ್ನು ಪೊಲೀ ಸರು ಹೊರಬೇಕಾಗುತ್ತದೆ ಎಂದು ದೋವಲ್ ತಿಳಿಸಿದರು.