ಪೋಲೆಂಡ್: ವಾರ್ಸಾ ವಿಶ್ವ ವಿದ್ಯಾನಿಲಯ ಮತ್ತು ಬೆಂಗಳೂರು ವಿಶ್ವ ವಿದ್ಯಾನಿಲಯದ (Warsaw And Bangalore University) ನಡುವೆ ವಿಶ್ವ ರಾಜಕೀಯಶಾಸ್ತ್ರದಲ್ಲಿ (political science) ಶೈಕ್ಷಣಿಕ ಸಹಕಾರಕ್ಕಾಗಿ ಇತ್ತೀಚೆಗೆ ಒಪ್ಪಂದ (Memorandum of Understand) ಮಾಡಿಕೊಳ್ಳಲಾಗಿದೆ.
ರಾಜಕೀಯಶಾಸ್ತ್ರ ವಿಷಯದಲ್ಲಿ ಸಹಕಾರಕ್ಕೆ ಪ್ರೋತ್ಸಾಹಿಸಲು ಜಾಗತಿಕ ಶೈಕ್ಷಣಿಕ ಸಹಭಾಗಿತ್ವದ ಉದ್ದೇಶದ ಹಿನ್ನೆಲೆಯಲ್ಲಿ ಪೋಲೆಂಡ್ನ ವರ್ಸಾ ವಿಶ್ವ ವಿದ್ಯಾನಿಲಯ ಮತ್ತು ಭಾರತದ ಬೆಂಗಳೂರು ವಿಶ್ವವಿದ್ಯಾನಿಲಯ ಒಪ್ಪಂದ ಪತ್ರಕ್ಕೆ ಸಹಿ ಹಾಕಿದೆ.
ಈ ಒಪ್ಪಂದದಿಂದಾಗಿ ವಿದ್ಯಾರ್ಥಿಗಳು ಮತ್ತು ಬೋಧಕರ ವಿನಿಮಯ, ವಿವಿಧ ಕಾರ್ಯಕ್ರಮಗಳು, ಸಂಯುಕ್ತ ಉಪನ್ಯಾಸಗಳು, ಸಮ್ಮೇಳನಗಳು ಮತ್ತು ಜ್ಞಾನ ಹಂಚಿಕೆ ವೇದಿಕೆಗಳನ್ನು ಒಳಗೊಂಡ ಹಲವಾರು ಸಹಭಾಗಿತ್ವ ಪ್ರಕ್ರಿಯೆಗಳಿಗೆ ಅವಕಾಶ ಮಾಡಿಕೊಟ್ಟಂತಾಗಿದೆ.
ಒಪ್ಪಂದ ಪತ್ರವನ್ನು ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರೊಫೆಸರ್ ಎಸ್.ವೈ. ಸುರೇಂದ್ರ ಕುಮಾರ್ ಅವರಿಗೆ ಭಾರತದಲ್ಲಿ ಪೋಲೆಂಡ್ನ ಗೌರವ ಕಾನ್ಸುಲ್ ರಘು ರಾಜಪ್ಪ, ನವದೆಹಲಿಯ ಪೋಲೆಂಡ್ ರಾಯಭಾರ ಕಚೇರಿಯ ಎರಡನೇ ಕಾರ್ಯದರ್ಶಿ ಪಾವೆಲ್ ಮೊಕ್ರಿಜಿಕಿ ಅವರಿಂದ ಅಧಿಕೃತವಾಗಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಘು ರಾಜಪ್ಪ, ಶಿಕ್ಷಣವು ಜಾಗತಿಕ ಸಂಬಂಧಗಳನ್ನು ನಿರ್ಮಿಸಲು ಅಗತ್ಯವಿರುವ ಪ್ರಮುಖ ಅಂಶ. ಈ ಸಹಕಾರವು ಭಾರತ ಮತ್ತು ಪೋಲೆಂಡ್ ನಡುವಿನ ಬೆಳೆದ ಒಕ್ಕೂಟವನ್ನು ಪ್ರತಿಬಿಂಬಿಸುತ್ತದೆ ಹಾಗೂ ಇನ್ನಷ್ಟು ಕಾರ್ಯಕ್ರಮಗಳಿಗೆ ಮಾರ್ಗವನ್ನು ಹಾಸುತ್ತದೆ ಎಂದು ಹೇಳಿದರು.
ಬಳಿಕ ಮಾತನಾಡಿದ ಪಾವೆಲ್ ಮೊಕ್ರಿಜಿಕಿ, ಈ ರೀತಿಯ ಶೈಕ್ಷಣಿಕ ಸಹಭಾಗಿತ್ವವು ಭಾರತ ಮತ್ತು ಪೋಲೆಂಡ್ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತದೆ ಎಂದರು.
ಪ್ರೊಫೆಸರ್ ಎಸ್.ವೈ. ಸುರೇಂದ್ರ ಕುಮಾರ್ ಮಾತನಾಡಿ, ಈ ಒಪ್ಪಂದವು ಅಂತಾರಾಷ್ಟ್ರೀಯ ಶೈಕ್ಷಣಿಕ ಸಮುದಾಯಗಳನ್ನು ಸಂಪರ್ಕಿಸುವ ದಿಕ್ಕಿನಲ್ಲಿ ಮಹತ್ತರ ಹೆಜ್ಜೆ. ಇದರಿಂದ ನಮ್ಮ ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ಹೊಸ ಅವಕಾಶಗಳನ್ನು ನೀಡಲು ನಾವು ಉತ್ಸುಕರಾಗಿದ್ದೇವೆ ಎಂದರು.
ಈ ಒಪ್ಪಂದದ ಮೂಲಕ ಎರಡೂ ವಿಶ್ವವಿದ್ಯಾಲಯಗಳು ಶೈಕ್ಷಣಿಕ ಸಮುದಾಯಕ್ಕಾಗಿ ಪ್ರಯೋಜನಕಾರಿಯಾಗುವ, ಮತ್ತು ಜಾಗತಿಕ ರಾಜಕೀಯ ಚರ್ಚೆಗಳ ವಿಶ್ಲೇಷಣೆಗೆ ಹೊಸ ದೃಷ್ಟಿಕೋನವನ್ನು ನೀಡುವ, ಒಂದು ಡೈನಾಮಿಕ್ ಶೈಕ್ಷಣಿಕ ಪರಿಸರವನ್ನು ನಿರ್ಮಿಸಲು ಬದ್ಧವಾಗಿವೆ ಎಂದು ಅವರು ತಿಳಿಸಿದರು.
Iceland volcano: ಐಸ್ಲ್ಯಾಂಡ್ನಲ್ಲಿ ಜ್ವಾಲಾಮುಖಿ ಸ್ಫೋಟ; ಇಲ್ಲಿದೆ ವೈಮಾನಿಕ ದೃಶ್ಯದ ವಿಡಿಯೊ
ಪೋಲೆಂಡ್ನ ಟ್ರಾನ್ಸಿಶನ್ ಟೆಕ್ನಾಲಜೀಸ್ ಅಡ್ವಾನ್ಸ್ ಡ್ ಸೊಲ್ಯೂಶನ್ ನ ಸೇಲ್ಸ್ ಡೈರೆಕ್ಟರ್ ಮತ್ತು ಬೆಂಗಳೂರು ಟೆಕ್ ಸಮಿತ್ ನಲ್ಲಿ ಗ್ಲೋಬಲ್ ಇನೋವೇಷನ್ ಅಲೈನ್ಸ್ ನಲ್ಲಿ ಸಹಭಾಗಿಯಾಗಿಡ್ಡ ಸಚಿನ್ ಪಾರ್ಥ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.