Friday, 13th December 2024

80 ಜಿಲ್ಲೆಗಳಲ್ಲಿ 5 ಕೋಟಿ ಕುಟುಂಬಗಳಿಗೆ ನೀರು ಪೂರೈಕೆ: ಪ್ರಧಾನಿ ಮೋದಿ

ನವದೆಹಲಿ: ದೇಶದಲ್ಲಿ ನಲ್ಲಿಯ ಮೂಲಕ ಸುಮಾರು 1.25 ಲಕ್ಷ ಗ್ರಾಮಗಳಲ್ಲಿ ಮನೆಗಳಿಗೆ ನೀರು ಪೂರೈಕೆ ಆಗುತ್ತಿದೆ, ಜಲಜೀವನ್ ಮಿಷನ್‌ನಿಂದ 5 ಕೋಟಿ ಮನೆಗಳಿಗೆ ನೀರು ಸರಬರಾಜು ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸ್ವಾತಂತ್ರ್ಯದ ನಂತರ 2019ರವರೆಗೆ ದೇಶದಲ್ಲಿ ಮೂರು ಕೋಟಿ ಕುಟುಂಬಗಳಿಗಷ್ಟೇ ನಲ್ಲಿ ಸಂಪರ್ಕದ ಮೂಲಕ ಕುಡಿಯುವ ನೀರು ಪೂರೈಕೆ ಆಗುತ್ತಿತ್ತು. ಈಗ 80 ಜಿಲ್ಲೆಗಳಲ್ಲಿ 5 ಕೋಟಿ ಕುಟುಂಬಗಳಿಗೆ ಸಂಪರ್ಕ ಒದಗಿಸಲಾಗಿದೆ ಎಂದಿದ್ದಾರೆ.

ಹಿಂದೆ ಆಡಳಿತ ನಡೆಸಿದವರು ಬಡತನವನ್ನು ನೋಡಿರಲಿಲ್ಲ, ಅದು, ಅವರಿಗೆ ಆಕರ್ಷಣೆ ಯಾಗಿತ್ತು, ಜ್ಞಾನದ ಪ್ರದರ್ಶನದ ವೇದಿಕೆ ಆಗಿತ್ತು. ಅವರು ಮಾದರಿ ಗ್ರಾಮ ನಿರ್ಮಿಸಬಹು ದಿತ್ತು. ಆದರೆ, ಅವರಿಗೆ ಅಲ್ಲಿನ ಸಮಸ್ಯೆಗಳಷ್ಟೇ ಇಷ್ಟವಾಗಿದ್ದವು ಎಂದರು ಹೇಳಿದರು.

ಜಲ ಜೀವನ ಮಿಷನ್ ದೇಶದ ಮಹಿಳೆಯರ ಸಮಯ ಉಳಿಸುವ ಮೂಲಕ ಅವರ ಸಬಲೀ ಕರಣಕ್ಕೆ ಸಹಾಯಕವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ.

ಜಲ ಜೀವನ ಮಿಷನ್ ಆಯಪ್ ಮತ್ತು ರಾಷ್ಟ್ರೀಯ ಜಲ ಜೀವನ ಕೋಶವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿಯವರು ಶನಿವಾರ ಬಿಡುಗಡೆ ಮಾಡಿದರು.

ಕುಡಿಯುವ ನೀರಿಗಾಗಿ ಮಹಿಳೆಯರು ಬಹಳ ದೂರ ನಡೆದುಕೊಂಡು ಹೋಗಬೇಕಿತ್ತು. ಆದರೆ, ಮನೆಗಳ ಬಳಿ ನಲ್ಲಿಗಳನ್ನು ಸ್ಥಾಪನೆ ಮಾಡಿರುವುದರಿಂದ ಮಹಿಳೆಯರ ಸಮಯ ಉಳಿತಾಯವಾಗುತ್ತಿದ್ದು, ಇತರೆ ಚಟುಟಿಕೆಗಳಲ್ಲಿ ತೊಡಗಿಕೊಳ್ಳಲು ಸಹಾಯಕವಾಗಿದೆ. ಮಕ್ಕಳ ವಿದ್ಯಾ ಭ್ಯಾಸಗಳತ್ತ ಗಮನಹರಿಸುತ್ತಿದ್ದಾರೆ. ಜಲ ಜೀವನ ಮಿಷನ್ ಮಹಿಳೆಯರ ಸಬಲೀಕರಣಕ್ಕೆ ಸಹಾಯಕವಾಗಿದೆ ಎಂದು ತಿಳಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2019ರ ಆಗಸ್ಟ್​ 15ರಂದು ಈ ಜಲ ಜೀವನ ಮಿಷನ್​ನ್ನು ಘೋಷಿಸಿದ್ದರು. ಭಾರತದ ಪ್ರತಿಮನೆಗೂ ಶುದ್ಧ ನೀರಿನ ನಲ್ಲಿಯನ್ನು ಅಳವಡಿಸುವ ಗುರಿ ಹೊಂದಲಾಗಿದೆ. ಸಾಂಕ್ರಾಮಿಕ ರೋಗದ ಮಧ್ಯೆಯೂ ಯಶಸ್ವಿ ಯಾಗಿ ಯೋಜನೆಯನ್ನು ಮುನ್ನಡೆಸಲಾಗಿದೆ. ಯೋಜನೆ ಗಾಗಿ ಕೇಂದ್ರ ಸರ್ಕಾರ 3.60 ಲಕ್ಷ ಕೋಟಿ ರೂಪಾಯಿ ವೆಚ್ಚ ಮಾಡಿದೆ.

ರಾಷ್ಟ್ರೀಯ ಜಲ ಜೀವನ ಕೋಶ್​ ಯೋಜನೆಯಡಿ ಗ್ರಾಮೀಣ ಪ್ರದೇಶಗಳ ಮನೆಗಳು, ಶಾಲೆ, ಅಂಗನವಾಡಿ ಕೇಂದ್ರಗಳಿಗೆ ನೀರಿನ ಪೂರೈಕೆ ಮಾಡುವ ಮಹದುದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ಇದೇ ವೇಳೆ ಈ ಯೋಜನೆಗಳ ಉಪಯೋಗದ ಬಗ್ಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಗ್ರಾಮ ಪಂಚಾಯತ್​ ಮತ್ತು ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸಮಿತಿಗಳಿಗೆ ಅರಿವು ಮೂಡಿಸುತ್ತಿದ್ದಾರೆ. ಹಾಗೇ, ನಮ್ಮ ತಾಯಂದಿರು-ಸಹೋದರಿಯರಿಗೆ ಇನ್ನು ಮುಂದೆ ನೀರಿನ ವಿಚಾರದಲ್ಲಿ ತೊಂದರೆ ಆಗುವುದಿಲ್ಲ ಎಂದು ಭರವಸೆ ನೀಡಿದರು.