Friday, 13th December 2024

ಅಕ್ರಮ ವಲಸೆ ಮತ್ತು ಭ್ರಷ್ಟಾಚಾರದಿಂದ ಬಂಗಾಳ ಬೇಸತ್ತಿದೆ: ಅಮಿತ್‌ ಶಾ

ಬೋಲ್​ಪುರ: ಬಾಂಗ್ಲಾದೇಶೀಯರ ಅಕ್ರಮ ವಲಸೆ ಮತ್ತು ಭ್ರಷ್ಟಾಚಾರ ಮುಂತಾದವುಗಳಿಂದ ಬೇಸತ್ತಿರುವ ಬಂಗಾಳ ಬದಲಾವಣೆ ಬಯಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಭಾನುವಾರ ಭಿರ್​ಬೂಮ್​ ಜಿಲ್ಲೆಯ ಬೋಲ್​ಪುರದಲ್ಲಿ ರೋಡ್​ ಷೋ ಒಂದರಲ್ಲಿ ಭಾಗವಹಿಸಿ ಮಾತನಾಡಿ, ಬಂಗಾಳದ ಹಳೆಯ ವೈಭವವನ್ನು ಮತ್ತೆ ಒದಗಿಸುವ ಕೆಲಸವನ್ನು ಬಿಜೆಪಿ ಅಧಿಕಾರಕ್ಕೆ ಬಂದರೆ ಮಾಡಲಿದೆ. ಇಂಥ ರೋಡ್​ ಷೋವನ್ನು ನೋಡಿರ ಲಿಲ್ಲ. ಇದು ಮಮತಾ ಬ್ಯಾನರ್ಜಿ ಅವರ ಸರ್ಕಾರದ ವಿರುದ್ಧದ ಆಕ್ರೋಶ ರೋಡ್​ ಷೋ ಮೂಲಕ ವ್ಯಕ್ತವಾಗುತ್ತಿದೆ.

ಕವಿ ರವೀಂದ್ರನಾಥ ಟಾಗೋರ್ ಅವರೊಂದಿಗೆ ಸಾಂಸ್ಕೃತಿಕವಾಗಿ, ಸಾಹಿತ್ತಿಕವಾಗಿ ನಂಟು ಹೊಂದಿರುವ ಬೋಲ್​ಪುರದಲ್ಲಿ ರೋಡ್ ಷೋ ನಡೆಸುವ ಮುನ್ನ ಟಾಗೋರ್ ಅವರಿಗೆ ಅಮಿತ್ ಷಾ ಪುಷ್ಪನಮನ ಸಲ್ಲಿಸಿದರು.