Saturday, 14th December 2024

ಪಶ್ಚಿಮಬಂಗಾಳ ವಿಧಾನಸಭೆಯ ಉಪಸಭಾಪತಿ ಸುಕುಮಾರ್ ಹನ್ಸಡಾ ಇನ್ನಿಲ್ಲ

ಕೋಲ್ಕತಾ: ಪಶ್ಚಿಮಬಂಗಾಳ ವಿಧಾನಸಭೆಯ ಉಪ ಸಭಾಪತಿ, ಜಾರ್ಗಾಮ್ ವಿಧಾನಸಭಾ ಕ್ಷೇತ್ರದ ತೃಣಮೂಲ ಕಾಂಗ್ರೆಸ್ ಶಾಸಕ ಸುಕುಮಾರ್ ಹನ್ಸಡಾ ಗುರುವಾರ ನಿಧನರಾದರು. ಡೆಪ್ಯುಟಿ ಸ್ಪೀಕರ್ ಸುಕುಮಾರ್ ಅವರ ನಿಧನದ ವಾರ್ತೆಯನ್ನು ಪಶ್ಚಿಮಬಂಗಾಳ ಸರ್ಕಾರ ಖಚಿತಪಡಿಸಿದೆ.

ಹನ್ಸಡಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೋವಿಡ್ 19 ಸೋಂಕು ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ವರದಿ ಹೇಳಿದೆ. ವಯೋ ಸಂಬಂಧಿ ಕಾಯಿಲೆಯಿಂದ ಡೆಪ್ಯುಟಿ ಸ್ಪೀಕರ್ ಆಗಿದ್ದ ಹೈದರ್ ಅಜೀಜ್ ನಿಧನರಾದ ನಂತರ 2018ರ ಡಿಸೆಂಬರ್ ನಲ್ಲಿ ಹನ್ಸಡಾ ಅವರನ್ನು ಡೆಪ್ಯುಟಿ ಸ್ಪೀಕರ್ ಆಗಿ ನೇಮಕ ಮಾಡಲಾಗಿತ್ತು.

ಹನ್ಸಡಾ ವೃತ್ತಿಯಲ್ಲಿ ವೈದ್ಯರಾಗಿದ್ದರು. 2011 ಮತ್ತು 2016ರ ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿ ದ್ದರು.