Friday, 13th December 2024

ಅರ್ಧ ಪ್ಯಾಂಟ್ ಧರಿಸಿ ಭಾಷಣ ಮಾಡುವುದು ರಾಷ್ಟ್ರೀಯತೆಯ ಧ್ಯೋತಕವಲ್ಲ: ಪೈಲಟ್‌

ನಾಗ್ಪುರ: ಅರ್ಧ ಪ್ಯಾಂಟ್ ಧರಿಸಿ ನಿಂತು ಭಾಷಣ ಮಾಡುವುದು ರಾಷ್ಟ್ರೀಯತೆಯ ಧ್ಯೋತಕವಲ್ಲ ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಸೋಮವಾರ ಹೇಳಿದ್ದಾರೆ.

ರಾಷ್ಟ್ರೀಯತೆ ಅರ್ಧ ಪ್ಯಾಂಟ್ ಧರಿಸಿ ನಾಗ್ಪುರದಿಂದ ಫೋನ್ ಭಾಷಣಗಳನ್ನು ಮಾಡುವುದಲ್ಲ, ರೈತರ ಕಲ್ಯಾಣದ ಬಗ್ಗೆ ಮಾತ ನಾಡಿದರೆ ಅದುವೇ ನಿಜವಾದ ರಾಷ್ಟ್ರೀಯತೆ. ಕಾಯ್ದೆಯಲ್ಲಿ ತಿದ್ದುಪಡಿ ಮಾಡುವುದು, ಅವುಗಳನ್ನು ಹಿಂತೆಗೆದುಕೊಳ್ಳುವುದು ಅಥವಾ ತಪ್ಪನ್ನು ಒಪ್ಪಿಕೊಳ್ಳುವುದು ಇವೆಲ್ಲವೂ ನಾಯಕರ ವರ್ಚಸ್ಸನ್ನು ಹೆಚ್ಚಿಸುತ್ತದೆ. ಇದು ನಾಚಿಕೆಗೇಡಿನ ವಿಷಯವಲ್ಲ ಎಂದು ಸಲಹೆ ಮಾಡಿದರು.

ಕೆಲವು ಕಾಯ್ದೆಗಳನ್ನು ಹಿಂಪಡೆಯುವುದರಿಂದ ಯಾವುದೇ ತೊಂದರೆಯಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ಅರ್ಥ ಮಾಡಿ ಕೊಳ್ಳಬೇಕು. ಅವರು ಕಾನೂನುಗಳನ್ನು ಹಿಂತೆಗೆದುಕೊಂಡರೆ ಧನ್ಯವಾದ ಸಲ್ಲಿಸಲಿದ್ದೇವೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರವು ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಸಚಿನ್ ಪೈಲಟ್ ಆಗ್ರಹಿಸಿದರು.