Wednesday, 18th September 2024

ನವೆಂಬರ್’ನಲ್ಲಿ ವಾಟ್ಸಾಪ್ ಲಕ್ಷಾಂತರ ಭಾರತೀಯ ಖಾತೆಗಳ ನಿಷೇಧ

ನವದೆಹಲಿ: ನವೆಂಬರ್ 2022ರಲ್ಲಿ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ ಲಕ್ಷಾಂತರ ಭಾರತೀಯ ಖಾತೆಗಳನ್ನ ನಿಷೇಧಿಸಿದೆ.

ಅಕ್ಟೋಬರಿನಲ್ಲಿ, ಅದು 3.5 ಮಿಲಿಯನ್ ಖಾತೆಗಳನ್ನ ನಿಷೇಧಿಸಿತು. ವಾಟ್ಸಾಪ್ ಮತ್ತೊಮ್ಮೆ ಭಾರತೀಯರಿಗೆ ದೊಡ್ಡ ಆಘಾತ ನೀಡಿದೆ. ಇತ್ತೀಚಿನ ವರದಿಯ ಪ್ರಕಾರ, ನವೆಂಬರ್ 1 ರಿಂದ 30, 2022 ರ ನಡುವೆ 37 ಲಕ್ಷಕ್ಕೂ ಹೆಚ್ಚು ವಾಟ್ಸಾಪ್ ಖಾತೆಗಳನ್ನ ನಿಷೇಧಿಸಲಾಗಿದೆ.

ಎಂಡ್-ಟು-ಎಂಡ್ ಎನ್ಕ್ರಿಪ್ಟೆಡ್ ಮೆಸೇಜಿಂಗ್ ಸೇವೆಯಲ್ಲಿ ದುರುಪಯೋಗವನ್ನ ತಡೆ ಗಟ್ಟುವಲ್ಲಿ ವಾಟ್ಸಾಪ್ ಮೊದಲ ಸ್ಥಾನ ದಲ್ಲಿದೆ. ಹಾನಿಕಾರಕ ಚಟುವಟಿಕೆಗಳನ್ನ ಮೊದಲ ಹಂತದಲ್ಲೇ ನಿಲ್ಲಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಹೇಳಿ ದರು.

ನೀತಿಗಳು ಮತ್ತು ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಖಾತೆಗಳನ್ನು ಕಂಪನಿ ನಿಷೇಧಿ ಸುತ್ತದೆ ಎಂದು ಹೇಳಿದ್ದಾರೆ. ಯಾರೇ ಸುಳ್ಳು ಸುದ್ದಿಗಳನ್ನ ಹರಡುತ್ತಾರೋ ಅವರನ್ನ ಮುಚ್ಚಲಾಗುವುದು’ ಎಂದು ಎಚ್ಚರಿಸಿದ್ದಾರೆ. ವಾಟ್ಸಾಪ್ ದೇಶದಲ್ಲಿ 400 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನ ಹೊಂದಿದೆ. ವಾಟ್ಸಾಪ್ 400 ಮಿಲಿಯನ್ ಬಳಕೆದಾರರನ್ನ ಹೊಂದಿದೆ.

Read E-Paper click here