Saturday, 14th December 2024

ವಾಟ್ಸ್‌ಆಯಪ್ ಪೇ ‘ದೊಡ್ಡ ವೈಫಲ್ಯ’ ಕಂಡಿದೆ: ಅಶ್ನೀರ್‌ ಗ್ರೋವರ್‌

ವದೆಹಲಿ: ಭಾರತದಲ್ಲಿ ವಾಟ್ಸ್‌ಆಯಪ್ ಪೇ ‘ದೊಡ್ಡ ವೈಫಲ್ಯ’ ಕಂಡಿದೆ ಎಂದು ‘ಭಾರತ್‌ ಪೇ’ನ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಅಶ್ನೀರ್‌ ಗ್ರೋವರ್‌ ಹೇಳಿದ್ದಾರೆ.

ವಾಟ್ಸ್‌ಆಯಪ್ ಪೇ ಭಾರತದ ಯುಪಿಐ ಮಾರುಕಟ್ಟೆಯನ್ನು ಭೇದಿಸಲು ವಿಫಲವಾಗಿದೆ. ಒಂದು ವೇಳೆ ಅದು ಯಶಸ್ವಿಯಾಗಿದ್ದರೆ ಫೋನ್‌ ಪೇ, ಗೂಗಲ್‌ ಪೇ, ಪೇಟಿಎಂ ಮುಂತಾದ ವುಗಳನ್ನು ಹಿಂದಿಕ್ಕಬೇಕಿತ್ತು ಎಂದು ‌ಎಂದು ಅಭಿಪ್ರಾಯಪಟ್ಟಿದ್ದಾರೆ.

ಎಲ್ಲರ ಮೊಬೈಲ್‌ನಲ್ಲಿ ವಾಟ್ಸ್‌ಆಯಪ್ ಇದೆ. ವಾಟ್ಸ್‌ಆಯಪ್ನಲ್ಲಿ ಫೋಟೋ ಕಳಿಸಿದಷ್ಟೇ ಸುಲಭವಾಗಿ ಹಣ ಕಳಿಸುವಂತಿದ್ದರೆ, ‌ಅದು ಪೇಟಿಎಂ, ಫೋನ್‌ಪೇ, ಗೂಗಲ್‌ ಪೇ ಅನ್ನು ಹಿಂದಿಕ್ಕಬೇಕಿತ್ತು ಎಂದು ಹೇಳಿದ್ದಾರೆ.

‘ಭದ್ರತಾ ಫೀಚರ್‌ಗಳ ಬಗ್ಗೆ ಮಾಹಿತಿ ನೀಡಲು ಜಾಹೀರಾತಿಗೆ ಬಂಡವಾಳ ಹೂಡಿಕೆ ಮಾಡುವ ಬದಲು, ಪೇಮೆಂಟ್‌ ಸೇವೆ ಇನ್ನಷ್ಟು ಬಲಪಡಿಸುವ ಬಗ್ಗೆ ಗಮನ ಕೊಡಿ’ ಎಂದು ಸಲಹೆ ನೀಡಿದ್ದಾರೆ.