Wednesday, 11th December 2024

ಕೊನೆಯ ಉಸಿರು ಇರುವವರೆಗೂ ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ: ಸಿಧು

ಚಂಡಿಗಢ: ಭಾನುವಾರ ಬೆಳಿಗ್ಗೆ ಟ್ವೀಟ್ ಮಾಡಿದ ಸಿಎಂ ಹುದ್ದೆಗೆ ಪ್ರಮುಖ ಸ್ಪರ್ಧಿಗಳಲ್ಲಿ ಒಬ್ಬರಾದ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು, ರಾಹುಲ್ ಗಾಂಧಿಯವರ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗುತ್ತಾರೆ ಎಂದು ಹೇಳಿದ್ದಾರೆ.

ಪಂಜಾಬ್ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸಲು ಸಿದ್ಧವಾಗಿದೆ. ಪಂಜಾಬ್‌ನ ಲೂಧಿಯಾನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಘೋಷಣೆ ಮಾಡಲಿದ್ದಾರೆ.

‘ನಿರ್ಧಾರದ ಕ್ರಿಯೆಯಿಲ್ಲದೆ ಮಹತ್ವದ್ದನ್ನು ಸಾಧಿಸಲು ಸಾಧ್ಯವಿಲ್ಲ. ಸ್ಪಷ್ಟನೆ ನೀಡಲು ಪಂಜಾಬ್ ಗೆ ಆಗಮಿಸು ತ್ತಿರುವ ನಮ್ಮ ನಾಯಕ ರಾಹುಲ್ ಗಾಂಧಿಗೆ ಆತ್ಮೀಯ ಸ್ವಾಗತ. ಎಲ್ಲರೂ ಅವರ ನಿರ್ಧಾರವನ್ನು ಗೌರವಿಸಲಿದ್ದಾರೆ” ಎಂದು ಸಿಧು ಟ್ವೀಟಿಸಿದರು.

ನವಜೋತ್ ಸಿಂಗ್ ಸಿಧು, “ನಾನು ರಾಜಕೀಯಕ್ಕೆ ಬಂದಿರುವುದು ವಿಷಯಗಳನ್ನು ಬದಲಾಯಿಸಲು. ಯಾವುದೇ ಸ್ಥಾನಕ್ಕಾಗಿ ಅಲ್ಲ. ಪಕ್ಷದ ಹೈಕಮಾಂಡ್‌ನ ಆಶಯ ನನಗೆ ಆಜ್ಞೆಯಾಗಿದೆ. ಕೊನೆಯ ಉಸಿರು ಇರುವವರೆಗೂ ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ” ಎಂದು ಹೇಳಿದರು.