Friday, 13th December 2024

ನ.9-18 ರವರೆಗೆ ಶಾಲೆಗಳಲ್ಲಿ ಚಳಿಗಾಲದ ವಿರಾಮ

ವದೆಹಲಿ: ಗಾಳಿಯ ಗುಣಮಟ್ಟ ದಿನದಿಂದ ದಿನಕ್ಕೆ ಹದಗೆಡುತ್ತಿರುವ ಕಾರಣ, ದೆಹಲಿ ಸರ್ಕಾರ ನವೆಂಬರ್ 9 ರಿಂದ 18 ರವರೆಗೆ ಶಾಲೆಗಳಲ್ಲಿ ಚಳಿಗಾಲದ ಆರಂಭಿಕ ವಿರಾಮವನ್ನು ಘೋಷಿಸಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿಯ ಶಾಲೆಗಳಿಗೆ ಇಂದೂ ಕೂಡ ರಜೆ ಮುಂದುವರಿಸಿ ಸರ್ಕಾರ ಆದೇಶ ಹೊರಡಿಸಿದೆ.

‘ವಾಯು ಮಾಲಿನ್ಯದ ದೃಷ್ಟಿಯಿಂದ, ಎಲ್ಲಾ ಶಾಲೆಗಳು ಡಿಸೆಂಬರ್ ಚಳಿಗಾಲದ ವಿರಾಮವನ್ನು ಈಗ ನ.9 ರಿಂದ 18 ರವರೆಗೆ ಮರು ನಿಗದಿಪಡಿಸಲಾಗಿದೆ’ ಎಂದು ದೆಹಲಿ ಶಿಕ್ಷಣ ಇಲಾಖೆ ಸೂಚನೆಯಲ್ಲಿ ತಿಳಿಸಿದೆ.

ಅಂಕಿಅಂಶಗಳ ಪ್ರಕಾರ, ದೆಹಲಿಯ 24 ಗಂಟೆಗಳ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ ಮತ್ತಷ್ಟು ಹೆಚ್ಚಾಗಿದ್ದು ಆತಂಕ ಮೂಡಿಸಿದೆ.