Monday, 9th December 2024

ಎನ್‌ಕೌಂಟರ್‌: ಮೂವರು ಮಹಿಳಾ ಮಾವೋವಾದಿಗಳ ಹತ್ಯೆ

ಛತ್ತೀಸ್ಗಢ: ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯ ಅದ್ವಾಲ್ ಮತ್ತು ಕುನೇರಸ್‌ನ ದಟ್ಟ ಅರಣ್ಯದಲ್ಲಿ ನಡೆದ ಎನ್‌ಕೌಂಟರ್‌ ನಲ್ಲಿ ಮೂವರು ಮಹಿಳಾ ಮಾವೋ ವಾದಿಗಳು ಹತರಾಗಿದ್ದಾರೆ.

ಮಾವೋವಾದಿಗಳು ಪ್ರದೇಶ ಸಮಿತಿ ಸದಸ್ಯರಾಗಿದ್ದು, ತಲಾ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಮೃತರನ್ನು ರಾಜಾ ಮುಚ್ಚಕಿ, ಗೀತಾ ಮತ್ತು ಜ್ಯೋತಿ ಎಂದು ಗುರುತಿಸಲಾಗಿದೆ.

ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿರುವ ವಿಶೇಷ ಪೊಲೀಸ್ ಪಡೆ ಮಾವೋ ವಾದಿಗಳ ಚಲನವಲನವನ್ನು ಗಮನಿಸಿ ಶರಣಾ ಗುವಂತೆ ಹೇಳಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾವೋ ವಾದಿಗಳು ವಿಶೇಷ ಪಡೆಯತ್ತ ಗುಂಡು ಹಾರಿಸಲು ಯತ್ನಿಸಿದರು.

ಪ್ರತೀಕಾರವಾಗಿ, ಪೊಲೀಸರು ಗುಂಡು ಹಾರಿಸಿ ಮೂವರು ಮಹಿಳಾ ಮಾವೋವಾದಿಗಳನ್ನು ಕೊಂದರು. ಮಾವೋವಾದಿ ಪಕ್ಷದ  ಹಿರಿಯ ನಾಯಕ ಅನಾರೋಗ್ಯದಿಂದ ಮೃತಪಟ್ಟ ನಂತರ ಇದು ಎರಡನೇ ಎನ್‌ಕೌಂಟರ್ ಆಗಿದೆ. ಕಳೆದ ವಾರ ನಡೆದ ಮತ್ತೊಂದು ಎನ್‌ಕೌಂಟರ್‌ನಲ್ಲಿ ಮೂವರು ಮಾವೋವಾದಿಗಳು ಹತರಾಗಿದ್ದರು.