Friday, 13th December 2024

ಮಹಿಳಾ ಹೋಮ್‌ಸ್ಟೇ ಓನರನ್ನು ಸಬಲೀಕರಿಸಲು ವಿಮೆನ್ ಆಂಥ್ರಪ್ರನಾರ್‌ಶಿಪ್ ಪ್ಲಾಟ್‌ಫಾರ್ಮ್‌ ಮತ್ತು ಮೇಕ್‌ಮೈಟ್ರಿಪ್‌ ಪಾಲುದಾರಿಕೆ

ಮಹಿಳಾ ಸಬಲೀಕರಣ ಮತ್ತು ಸ್ವಾವಲಂಬನೆಗೆ ಬೆಂಬಲಿಸುವ ನಿಟ್ಟಿನಲ್ಲಿ, ನೀತಿ ಆಯೋಗದ ಅಡಿಯಲ್ಲಿ ಇನ್‌ಕ್ಯುಬೇಟ್ ಆಗಿರುವ ವಿಮೆನ್ ಆಂತ್ರ ಪ್ರನಾರ್‌ಶಿಪ್‌ ಪ್ಲಾಟ್‌ಫಾರಂ (ಡಬ್ಲ್ಯೂಇಪಿ) “ಪ್ರಾಜೆಕ್ಟ್ ಮೈತ್ರಿ” ಅನ್ನು ಮೇಕ್‌ಮೈಟ್ರಿಪ್ ಸಹಭಾಗಿತ್ವದಲ್ಲಿ ಘೋಷಿಸಿದೆ. ಈ ವಿಶಿಷ್ಟ ಪ್ರಯತ್ನವು ದೇಶದ ಈಶಾನ್ಯ ವಲಯದ ಮಹಿಳೆಯರ ಮೇಲೆ ಕೇಂದ್ರೀಕರಿಸಿದ್ದು, ಉದ್ಯಮಶೀಲತೆ, ಆರ್ಥಿಕ ಸಬಲೀಕರಣ ಮತ್ತು ಸ್ವಾತಂತ್ರದ ದಾರಿಯಲ್ಲಿ ಹೋಮ್‌ಸ್ಟೇ ಮಾಲೀಕರು ಸಾಗಲು ಇದು ನೆರವು ನೀಡುತ್ತದೆ.

ಇಟಾನಗರದ ಡೋರ್ಜಿ ಖಂಡು ಸ್ಟೇಟ್ ಕನ್ವೆನ್ಷನ್ ಸೆಂಟರ್‌ನಲ್ಲಿ ಬಿಡುಗಡೆ ಮಾಡಲಾದ ಕಾರ್ಯಕ್ರಮದ ಶೀರ್ಷಿಕೆಯು ‘ಎನೇಬ್ಲಿಂಗ್ ವಿಮೆನ್-ಲೆಡ್ ಡೆವಲಪ್ ಮೆನ್ಟ್ ಇನ್ ಅರುಣಾಚಲ್’ (ಅರುಣಾಚಲಯದಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಅನುವು ಮಾಡುವುದು) ಎಂಬುದಾಗಿದ್ದು, ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಈ ಕಾರ್ಯಕ್ರಮವನ್ನು ಅಂದಗಾಣಿಸಿದರು. ಇದು ಲಿಂಗ ಸಮತೋಲನ ಆಧರಿತ ಪ್ರಗತಿಗೆ ರಾಜ್ಯ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ.

ಪ್ರಾಜೆಕ್ಟ್ ಮೈತ್ರಿ ಎಂಬುದು ಭವಿಷ್ಯದ ಬಗ್ಗೆ ಚಿಂತನೆ ನಡೆಸುವ ಪಕ್ರಮವಾಗಿದ್ದು, ದೇಶದ ಈಶಾನ್ಯ ರಾಜ್ಯಗಳ ಹೋಮ್‌ಸ್ಟೇ ಓನರ್ಸ್ ಸಬಲೀಕರಣ ಗೊಳ್ಳಲು ಮತ್ತು ಸ್ಫೂರ್ತಿ ಪಡೆಯಲು ವಿನ್ಯಾಸ ಮಾಡಲಾಗಿದೆ. ಪ್ರಾಜೆಕ್ಟ್‌ನ ಭಾಗವಾಗಿ, ಆಯ್ದ ಭಾಗೀದಾರರಿಗೆ ವಿಶೇಷ ತರಬೇತಿ ಸಿಗಲಿದೆ. ಅವರ ವಹಿವಾಟು ಅಗತ್ಯಗಳಿಗೆ ತಕ್ಕಂತೆ ಈ ತರಬೇತಿಯನ್ನು ರೂಪಿಸಲಾಗಿರುತ್ತದೆ. ಆತಿಥ್ಯ, ಸುರಕ್ಷತೆ, ಡಿಜಿಟಲ್ ಮಾರ್ಕೆಟಿಂಗ್ ಮತ್ತು ಅನುಸರಣೆ ಸೇರಿದಂತೆ ವಿವಿಧ ರೀತಿಯ ಕೌಶಲ್ಯಗಳನ್ನು ಈ ತರಬೇತಿ ಒಳಗೊಂಡಿರಲಿದೆ. ಇದರ ಜೊತೆಗೆ, ಪ್ರಮುಖ ಮೂರು ಹೋಮ್‌ಸ್ಟೇ ಓನರ್ಸ್ ಪುರಸ್ಕಾರ ನೀಡಲಾಗು ತ್ತದೆ. ಅಲ್ಲದೆ ಅವರಿಗೆ ಪರಿಣಿತಿಗಾಗಿ ಪ್ರೋತ್ಸಾಹಧನ ನೀಡಲಾಗುತ್ತದೆ ಮತ್ತು ಈ ವಲಯದಲ್ಲಿ ಅನ್ವೇಷಣೆಗೆ ಪ್ರೋತ್ಸಾಹಿಸಲಾಗುತ್ತದೆ.

ಈ ಬೆಳವಣಿಗೆಯ ಬಗ್ಗೆ ಮಾತನಾಡಿದ ಡಬ್ಲ್ಯೂಇಪಿ ಮಿಷನ್ ಡೈರೆಕ್ಟರ್ ಶ್ರೀ ಅಣ್ಣ ರಾಯ್ “ಮಹಿಳಾ ಉದ್ಯಮಶೀಲರನ್ನು ಪ್ರೋತ್ಸಾಹಿಸಲು ಒಂದು ಸ್ಟ್ರಾಟಜಿಕ್ ಅಪ್ರೋಚ್ ಅನ್ನು ಪ್ರಾಜೆಕ್ಟ್ ಹೊಂದಿದ್ದು, ಲಿಂಗ ಸಮಾನತೆ ಮತ್ತು ಆರ್ಥಿಕ ಬೆಳವಣಿಗೆಯ ಗುರಿಯನ್ನು ಹಾಕಿಕೊಂಡಿದೆ. ದೀರ್ಘಕಾಲೀನ ಡಿವಿಡೆಂಡ್‌ಗಳನ್ನು ನೀಡುವ ಸಾಧ್ಯತೆಯನ್ನು ಹೊಂದಿರುವ ಹೋಮ್‌ಸ್ಟೇಗಳು, ಆರ್ಥಿಕ ಸ್ವಾವಲಂಬನೆಯನ್ನು ಬಯಸುವ ಮಹಿಳೆಯರಿಗೆ ಆಕರ್ಷಕವಾದ ಉದ್ಯಮ ಇದಾಗಿರಲಿದೆ.”

ಮೇಕ್‌ಮೈಟ್ರಿಪ್‌ನ ಸಹಸಂಸ್ತಾಪಕ ಮತ್ತು ಸಮೂಹ ಸಿಇಒ ರಾಜೇಶ್ ಮ್ಯಾಗೋ ಮಾತನಾಡಿ “ಪ್ರಯಾಣದಿಂದ ಉಂಟಾಗುವ ರೂಪಾಂತರದಲ್ಲಿ ನಾವು ನಂಬಿಕೆ ಹೊಂದಿದ್ದೇವೆ. ಈ ಪ್ರಾಜೆಕ್ಟ್‌ ಮೂಲಕ ಮಹಿಳಾ ಹೋಮ್‌ಸ್ಟೇ ಓನರ್ಸ್ ಶಕ್ತಿಯನ್ನು ನಾವು ಅನಾವರಣಗೊಳಿಸುವ ಗುರಿಯನ್ನು ಹೊಂದಿ ದ್ದೇವೆ. ಈ ನಿಟ್ಟಿನಲ್ಲಿ ಮಹಿಳಾ ಆಂತ್ರಪ್ರನಾರ್‌ಶಿಪ್‌ ಪ್ಲಾಟ್‌ಫಾರಂ ಜೊತೆಗೆ ಪಾಲುದಾರಿಕೆ ವಹಿಸಲು ನಾವು ಹೆಮ್ಮೆ ಹೊಂದಿದ್ದೇವೆ. ಇವರು ಭಾರತದ ಪ್ರವಾಸೋದ್ಯಮಕ್ಕೆ ಕೊಡುಗೆ ನೀಡುವುದರಿಂದ ಈ ಅದ್ಭುತ ಮಹಿಳಾ ಉದ್ಯಮಗಳು ಬೆಳವಣಿಗೆ ಕಾಣುವುದನ್ನು ನಾವು ಎದುರು ನೋಡುತ್ತಿದ್ದೇವೆ.”

ನೀತಿ ಆಯೋಗದಲ್ಲಿ ಇನ್‌ಕ್ಯುಬೇಟ್ ಆಗಿರುವ ಡಬ್ಲ್ಯೂಇಪಿ ಈಗ ಸಾರ್ವಜನಿಕ, ಖಾಸಗಿ ಪಾಲುದಾರಿಕೆಯ ಸಂಸ್ಥಾಯಾಗಿ ರೂಪಾಂತರಗೊಂಡಿದ್ದು, ಮಹಿಳಾ ಉದ್ಯಮಶೀಲರಿಗೆ ಸೂಕ್ತವಾದ ಮಾಹಿತಿ ಮತ್ತು ಸೇವೆಗಳಿಗೆ ಏಕ ಗವಾಕ್ಷಿ ಪರಿಹಾರವನ್ನು ಒದಗಿಸುತ್ತದೆ. ಸ್ಮಾರ್ಟ್‌ಮ್ಯಾಚ್ ಆಧರಿತ ಪ್ಲಾಟ್‌ ಫಾರಂ ಸೇರಿದಂತೆ ವಿಶಾಲ ಶ್ರೇಣಿಯ ಸಂಪನ್ಮೂಲಗಳನ್ನು ಒದಗಿಸುತ್ತದೆ. ಇದು ಸರ್ಕಾರಿ ಸ್ಕೀಮ್‌ಗಳು ಮತ್ತು ಖಾಸಗಿ ವಲಯದ ಉಪಕ್ರಮಗಳು, ಜ್ಞಾನ ಭಂಡಾರ, ಸಮುದಾಯ ವೇದಿಕೆ, ಮೆಂಟರ್‌ಶಿಪ್‌ ಮತ್ತು ಸಾಮರ್ಥ್ಯ ನಿರ್ಮಾಣದಂತಹ ಸಂಪನ್ಮೂಲಗಳನ್ನು ಒದಗಿಸುತ್ತದೆ. ಮೇಕ್‌ಮೈಟ್ರಿಪ್‌ ನಂತಹ ಉದ್ಯಮದ ನಾಯಕತ್ವದೊಂದಿಗೆ ಸಹಭಾಗಿತ್ವದ ಮುಲಕ ಮಹಿಳಾ ಉದ್ಯಮಶೀಲರ ಯಶಸ್ಸಿಗೆ ಸೂಕ್ತವಾದ ಪರಿಸರ ವ್ಯವಸ್ಥೆಯನ್ನು ರಚಿಸಲು ಡಬ್ಲ್ಯೂಇಪಿ ತನ್ನ ಪ್ರಯತ್ನವನ್ನು ಮುಂದುವರಿಸಿದೆ.

ಈ ರೂಪಾಂತರ ಕಾರ್ಯಕ್ರಮಕ್ಕೆ ಅರ್ಜಿಗಳನ್ನು ಡಬ್ಲ್ಯೂಪಿ ವೆಬ್‌ಸೈಟ್‌ನಲ್ಲಿ 2023 ಡಿಸೆಂಬರ್ 13 ರಿಂದ ತೆರೆಯಲಾಗುತ್ತದೆ.