Wednesday, 11th December 2024

ಫೈನಲ್‌ ಪಂದ್ಯ ಸೌತಾಂಪ್ಟನ್ʼಗೆ ಸ್ಥಳಾಂತರ: ಸೌರವ್‌ ಗಂಗೂಲಿ

ಮುಂಬೈ: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಬೇಕಿರುವ ಫೈನಲ್‌ ಪಂದ್ಯ ಸೌತಾಂಪ್ಟನ್ʼನಲ್ಲಿ ನಡೆಯಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಖಚಿತಪಡಿಸಿದ್ದಾರೆ.

ಲಂಡನ್ʼನ ಲಾರ್ಡ್ಸ್ʼನಲ್ಲಿ ನಡೆಯಬೇಕಿದ್ದ ಫೈನಲ್ ಪಂದ್ಯ ಸೌತಾಂಪ್ಟನ್ʼಗೆ ಸ್ಥಳಾಂತರವಾಗಿದೆ. ಜೂನ್ 18ರಂದು ನಡೆಯ ಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಡಬ್ಲ್ಯುಟಿಸಿ ಫೈನಲ್ ಪಂದ್ಯ ಸೌತಾಂಪ್ಟನ್ʼನಲ್ಲಿ ನಡೆಯಲಿದೆ ಎಂದು ಗಂಗೂಲಿ ಸೋಮವಾರ ಖಚಿತಪಡಿಸಿದ್ದಾರೆ. ಸ್ಥಳ ಬದಲಾವಣೆ ಬಗ್ಗೆ ಊಹಾಪೋಹಗಳಿಗೆ ತೆರೆ ಎಳೆದಿರುವ ಐಸಿಸಿಯು ಸೌತಾಂಪ್ಟನ್ʼಗೆ ಸ್ಥಳಾಂತರವನ್ನ ಖಚಿತಪಡಿಸಿದೆ.

ಗಂಗೂಲಿ ‘ಸೌತಾಂಪ್ಟನ್ʼನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ನಲ್ಲಿ ಪಾಲ್ಗೊಳ್ಳಲು ಎದುರು ನೋಡುತ್ತಿದ್ದೇನೆ’ ಎಂದೂ ಹೇಳಿದ್ದಾರೆ.