Wednesday, 11th December 2024

ಪಂದ್ಯ ಸೋತ ಬೇಸರದಲ್ಲಿ ಕುಸ್ತಿಪಟು ರಿತಿಕಾ ಫೋಗಟ್ ಆತ್ಮಹತ್ಯೆ

ನವದೆಹಲಿ: ಭರತ್‌ಪುರದಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಸೋತ ಬೆನ್ನಲ್ಲೇ ರಿತಿಕಾ ಫೋಗಟ್ ಅವರು ಬುಧವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.

ಪ್ರಸಿದ್ಧ ಫೋಗಾಟ್ ಕುಟುಂಬದ ರಿತಿಕಾ ಫೋಗಟ್ ಅವರು, ಬಬಿತಾ ಫೋಗಟ್ ಸೋದರ ಸಂಬಂಧಿಯ ಸಹೋದರಿ ಆಗಿದ್ದಾರೆ. ರಾಜ್ಯಮಟ್ಟದ ಉಪ ಜೂನಿಯರ್, ಕಿರಿಯ ಮಹಿಳೆಯರು ಮತ್ತು ಪುರುಷರ ಕುಸ್ತಿ ಪಂದ್ಯಾವಳಿಗಳಲ್ಲಿ ರಿತಿಕಾ ಫೋಗಟ್ ಆಡು ತ್ತಿದ್ದರು.

ಮಾ.14 ರಂದು ಆಡಿದ ಫೈನಲ್ ಪಂದ್ಯವನ್ನು ರಿತಿಕಾ 1 ಪಾಯಿಂಟ್‌ನಿಂದ ಕಳೆದುಕೊಂಡರು. ಇದರಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ರಿತಿಕಾ ಅವರು, ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಮಹಾವೀರ್ ಸಿಂಗ್ ಫೋಗಟ್ ಅವರ ಅಡಿಯಲ್ಲಿ ತರಬೇತಿ ಪಡೆದಿದ್ದರು.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily