Saturday, 14th December 2024

ಟಿಟಿಡಿ ಅಧ್ಯಕ್ಷರಾಗಿ ವೈ.ವಿ.ಸುಬ್ಬಾರೆಡ್ಡಿ ಮರುನೇಮಕ

ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿ ಸಂಬಂಧಿ ವೈ.ವಿ.ಸುಬ್ಬಾರೆಡ್ಡಿ ಅವರನ್ನು ತಿರುಪತಿ ತಿರುಮಲ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಭಾನುವಾರ ಮರು ನೇಮಕ ಮಾಡಲಾಗಿದೆ.

ಈ ಸಂಬಂಧ ಪ್ರಧಾನ ಕಾರ್ಯದರ್ಶಿ ಜಿ. ವಾಣಿ ಮೋಹನ್ ಆದೇಶ ಹೊರಡಿಸಿದ್ದಾರೆ. ಮಂಡಳಿಯ ಇತರ ಸದಸ್ಯರನ್ನು ಆದಷ್ಟು ಬೇಗ ಆಯ್ಕೆ ಮಾಡಲಾಗುವುದು ಎಂದು ಆದೇಶದಲ್ಲಿ ಹೇಳಲಾಗಿದೆ. ಮಾಜಿ ಸಂಸದ ಸುಬ್ಬಾ ರೆಡ್ಡಿ ಅವರು ಕಳೆದ ಜೂನ್‌ಗೆ ಕೊನೆಗೊಂಡಂತೆ ಎರಡು ವರ್ಷಗಳ ಅವಧಿಗೆ ಟಿಟಿಡಿ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.