ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ 4ನೇ ಹಂತದ ಮತದಾನ ನಡೆಯುತ್ತಿದೆ.
ಕಳೆದ ಮಂಗಳವಾರ ಮತಪೆಟ್ಟಿಗೆಯನ್ನು ಮತಗಟ್ಟೆಗೆ ಹೊತ್ತು ತಂದಿದ್ದ ರೀನಾ ದ್ವಿವೇದಿ ಈ ಬಾರಿ ಕೂಡ ತಮ್ಮ ನೋಟದಿಂದ ಮತ್ತೊಮ್ಮೆ ನೋಡುಗರ ಮನಸೂರೆಗೊಂಡಿದ್ದಾರೆ.
ಉತ್ತರ ಪ್ರದೇಶದ ಮಹಿಳಾ ಚುನಾವಣಾ ಮತಗಟ್ಟೆ ಅಧಿಕಾರಿ ಈ ರೀನಾ ದ್ವಿವೇದಿ, 2019ರ ಲೋಕಸಭೆ ಚುನಾವಣೆ ವೇಳೆ ಸ್ವೀವ್ ಲೆಸ್ ಬ್ಲೌಸ್ ತೊಟ್ಟು, ಹಳದಿ ಬಣ್ಣದ ಸೀರೆ ತೊಟ್ಟು ಕೂದಲನ್ನು ಇಳಿಬಿಟ್ಟು, ಕೂಲಿಂಗ್ ಗ್ಲಾಸ್ ಧರಿಸಿ ಮತಪೆಟ್ಟಿಗೆಯೊಂದಿಗೆ ಸ್ಟೈಲ್ ಆಗಿ ಮುಗುಳು ನಗುತ್ತಾ ಮತಗಟ್ಟೆಗೆ ಬಂದು ಕ್ಯಾಮರಾ ಕಣ್ಣಿಗೆ ಸೆರೆಯಾಗಿ ಇಂಟರ್ನೆಟ್, ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗಿದ್ದರು.
ಈ ಬಾರಿ ಅವರು ತೋಳಿಲ್ಲದ ಕಪ್ಪು ಟಾಪ್ ಮತ್ತು ಬೀಜ್ ಪ್ಯಾಂಟ್. ಅವರ ಮೈಮಾಟಕ್ಕೆ ಸುತ್ತಮುತ್ತಲಿದ್ದವರು ಮನಸೋತಿದ್ದಾರೆ. ಕಳೆದ ಮಂಗಳವಾರ ಸ್ಮೃತಿ ಉಪವನಕ್ಕೆ ಬಂದ ಕೂಡಲೇ ಅಲ್ಲಿದ್ದ ಹಲವು ಪೊಲೀಸರು ಮತ್ತು ಪಾರಾ ಮಿಲಿಟರಿ ಪಡೆ ಸಿಬ್ಬಂದಿ ರೀನಾ ದ್ವಿವೇದಿಯವರ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು.
ತಮ್ಮ ದಿರಿಸು, ನೋಟದಿಂದ ಸಾರ್ವಜನಿಕರ ಮನಸೂರೆಗೊಂಡಿರುವ ರೀನಾ ಇನ್ಸ್ಟಾಗ್ರಾಂನಲ್ಲಿ 2 ಲಕ್ಷಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿ ದ್ದಾರೆ.