Friday, 13th December 2024

ಅನುಕಂಪದ ಆಧಾರದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ನಡೆಸಿದ ಈ ಕೃತ್ಯ?

ಜಾರ್ಖಂಡ್: ಇಲ್ಲೊಬ್ಬ ಮಗ ಉದ್ಯೋಗಕ್ಕಾಗಿ ತನ್ನ ತಂದೆಯನ್ನೇ ಕೊಲೆ ಮಾಡಿದ್ದಾನೆ.

ಘಟನೆ ನಡೆದಿರುವುದು ಜಾರ್ಖಂಡ್​ನ ರಾಮಗಢ ಜಿಲ್ಲೆಯಲ್ಲಿ. ನಿರುದ್ಯೋಗಿ ಮಗನೊಬ್ಬ ಮಾಡಿರುವ ಕೃತ್ಯವಿದು.

ಕೃಷ್ಣ ರಾಮ್ ಅವರು ರಾಮಗಢ ಜಿಲ್ಲೆಯ ಬರ್ಕಾಕಾನದಲ್ಲಿರುವ ಸೆಂಟ್ರಲ್ ಕೋಲ್ ಫೀಲ್ಡ್ಸ್ ಲಿಮಿಟೆಡ್​ನಲ್ಲಿ (ಸಿಸಿಎಲ್) ಹೆಡ್ ಸೆಕ್ಯೂರಿಟಿ ಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಇವರಿಗೊಬ್ಬ ನಿರುದ್ಯೋಗಿ ಮಗ.

ವರ್ಷ 35 ಆದರೂ ಉದ್ಯೋಗ ಸಿಕ್ಕಿರಲಿಲ್ಲ. ಕೆಲಸ ಹುಡುಕಿ ಹುಡುಕಿ ಸುಸ್ತಾದ ಆತ ಕೊನೆಗೊಂದು ಘನಘೋರ ಪ್ಲ್ಯಾನ್​ ಮಾಡಿ ಯೇ ಬಿಟ್ಟಿದ್ದಾನೆ. ಅದೇ ತಂದೆಯನ್ನು ಕೊಲೆ ಮಾಡುವ ಯೋಜನೆ. ಯೋಜನೆ ರೂಪಿಸಿಕೊಂಡಂತೆ ಅದೊಂದು ದಿನ ತಂದೆ ಮಲಗಿದ್ದಾಗ ಚಾಕುವಿನಿಂದ ಕತ್ತುಸೀಳಿ ಕೊಲೆ ಮಾಡಿದ್ದಾನೆ!

ಕೊಲೆ ಮಾಡಿರುವ ಉದ್ದೇಶ, ತಾನು ಕೆಲಸ ಗಿಟ್ಟಿಸಿಕೊಳ್ಳಲು. ಅಪ್ಪನ ಕಂಪೆನಿಯ ನಿಯಮದ ಪ್ರಕಾರ, ಸೇವೆಯಲ್ಲಿರುವಾಗಲೇ ಉದ್ಯೋಗಿಗಳು ಮೃತಪಟ್ಟರೆ ಅವರ ಮಕ್ಕಳಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲಾಗುತ್ತಿತ್ತು. ಅಪ್ಪನನ್ನು ಕೊಂದರೆ ತನಗೆ ಉದ್ಯೋಗ ಸಿಗುತ್ತದೆ ಎಂಬ ಕಾರಣದಿಂದ ಕೊಲೆ ಮಾಡಿದ್ದಾನೆ ಈ ಮಗ.

ಯಾರೋ ಬಂದು ಅಪ್ಪನ ಕೊಲೆ ಮಾಡಿ ಹೋಗಿದ್ದಾರೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದ. ಆದರೆ ತನಿಖೆಯ ವೇಳೆಗೆ ಈತನೇ ಕೊಲೆ ಮಾಡಿರುವುದು ತಿಳಿದಿದೆ.