Saturday, 14th December 2024

ಮಹಾರಾಷ್ಟ್ರದಲ್ಲಿ ಝಿಕಾ ವೈರಸ್‌ ಮೊದಲ ಪ್ರಕರಣ ಪತ್ತೆ

ಪುಣೆ: ಮಹಾರಾಷ್ಟ್ರದಲ್ಲಿ ಝಿಕಾ ವೈರಸ್‌ ಸೋಂಕಿನ ಮೊದಲ ಪ್ರಕರಣವು ಪುಣೆ ಜಿಲ್ಲೆಯ ಪುರಂದರ್ ತಹಸಿಲ್‌ನಲ್ಲಿ ಪತ್ತೆಯಾಗಿದೆ.

ಪುರಂದರ ತಹಸಿಲ್‌ನ 50 ವರ್ಷದ ಮಹಿಳೆ ಜುಲೈ ಮಧ್ಯದಲ್ಲಿ ಜ್ವರದಿಂದ ಬಳಲುತ್ತಿದ್ದರು. ಬಳಿಕ ಝಿಕಾ ವೈರಸ್‌ನ ಪರೀಕ್ಷೆ ನಡೆಸಿದಾಗ ದೃಢಪಟ್ಟಿದೆ ಎಂದು ವರದಿ ತಿಳಿಸಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (NIV) ಜುಲೈ 30 ರಂದು ನಡೆಸಿದ ಪರೀಕ್ಷೆಯಲ್ಲಿ ಚಿಕೂನ್ ಗುನ್ಯಾ ಪತ್ತೆಯಾಗಿದೆ.

ರಾಜ್ಯದಲ್ಲಿ ಮೊದಲ ಝಿಕಾ ವೈರಸ್‌ ಪ್ರಕರಣ ಪತ್ತೆಯಾದ ಹಿನ್ನೆಲೆ ಈಗ ನಿಗಾ ಹೆಚ್ಚಿಸಲಾಗಿದೆ. ರೋಗದ ಗುಣಲಕ್ಷಣಗಳು ಸೌಮ್ಯವಾಗಿದೆ,” ಎಂದು ರಾಜ್ಯ ಕಣ್ಗಾವಲು ಅಧಿಕಾರಿ ತಿಳಿಸಿದರು.