ಮುಂಬೈ: ಜನ ಆನ್ ಲೈನ್ ನಲ್ಲೇ ಫುಡ್ ಆರ್ಡರ್ ಮಾಡೋದು ಸಾಮಾನ್ಯವಾಗಿದೆ. 2022ರ ಒಂದೇ ವರ್ಷದಲ್ಲಿ 3 ಸಾವಿರಕ್ಕೂ ಹೆಚ್ಚು ಬಾರಿ ಆಹಾರವನ್ನು ಆನ್ ಲೈನ್ ನಲ್ಲಿ ಬುಕ್ ಮಾಡಿದ ವ್ಯಕ್ತಿಯನ್ನ ಜೊಮ್ಯಾಟೊ “ರಾಷ್ಟ್ರದ ಅತಿದೊಡ್ಡ ಆಹಾರ ಪ್ರೇಮಿ” ಎಂದು ಗೌರವಿಸಿದೆ.
Zomato ತನ್ನವಾರ್ಷಿಕ ವರದಿಯಲ್ಲಿ “ರಾಷ್ಟ್ರದ ಅತಿದೊಡ್ಡ ಆಹಾರಪ್ರೇಮಿ” ಎಂಬ ಕಿರೀಟವನ್ನು ದೆಹಲಿ ನಿವಾಸಿ ಅಂಕುರ್ ಅವರಿಗೆ ನೀಡಿದೆ. ಈ ವರ್ಷ Zomato ದಲ್ಲಿ ಅಂಕುರ್ 3,330 ಆರ್ಡರ್‌ಗಳನ್ನು ಮಾಡಿದ್ದಾರೆ, ಇದು ದಿನಕ್ಕೆ ಸರಾಸರಿ 9 ಆರ್ಡರ್ ಗಳನ್ನು ಹೊಂದಿದೆ.
ರಾಹುಲ್ ಎಂಬ ಬಳಕೆದಾರರು 1098 ಕೇಕ್‌ಗಳನ್ನು ಆರ್ಡರ್ ಮಾಡಿದ್ದಾರೆ. ಟೀನಾ ಎಂಬ ಖರಗ್‌ಪುರದ ಬಳಕೆದಾರರು ಒಂದೇ ಬಾರಿಗೆ 25,455 ರೂಪಾಯಿ ಮೌಲ್ಯದ ಪಿಜ್ಜಾಗಳನ್ನು ಆರ್ಡರ್ ಮಾಡಿದ್ದಾರೆ. ಜೊಮ್ಯಾಟೊ ಪ್ರತಿ ನಿಮಿಷಕ್ಕೆ 186 ಬಿರಿಯಾನಿ ವಿತರಿಸಿದೆ.
ಪುಣೆಯ ಬಳಕೆದಾರರು Zomato ಮೂಲಕ ಆರ್ಡರ್ ಮಾಡಿದ ಆಹಾರಕ್ಕಾಗಿ 28 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ ಮತ್ತು ರವಿವರ್ ಎಂಬ ಗ್ರಾಹಕರು ಈ ವರ್ಷ 6.96 ಲಕ್ಷ ಮೌಲ್ಯದ ರಿಯಾಯಿತಿಗಳನ್ನು ಪಡೆದಿದ್ದಾರೆ.
Swiggy ತನ್ನ ವಾರ್ಷಿಕ ಪ್ರವೃತ್ತಿಗಳ ವರದಿಯ 7 ನೇ ಆವೃತ್ತಿಯನ್ನು ಬಿಡುಗಡೆ ಮಾಡಿದೆ.